ಧ್ವಜಾರೋಹಣ ನಡೆಸಿದ ಬಳಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೆ: ಸಚಿವ ಜೆ.ಸಿ. ಮಾಧುಸ್ವಾಮಿ
ಜನರ ಕೆಲಸಗಳನ್ನು ಮಾಡುವುದು ನನ್ನ ಕನಸು. ಈ ಕನಸಿಗೆ ಅಡ್ಡಿಯಾಗಿದ್ದಾಗ ಸಹಜವಾಗಿ ನೋವಾಗಿತ್ತು. ಆದರೆ. ಈ ನೀಡಿರುವ ಖಾತೆ ಸಮಾಧಾನ ತಂದಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತುಮಕೂರು: ಪದೇಪದೆ ಖಾತೆ ಬದಲಾವಣೆಯಿಂದ ಮನಸ್ಸಿಗೆ ಬೇಜಾರಾಗಿತ್ತು. ಇಂದು ಧ್ವಜಾರೋಹಣ ನಡೆಸಿದ ಬಳಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ತುಮಕೂರಿನಲ್ಲಿ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಸದ್ಯ ನಿನ್ನೆ ಹಿರಿಯರ ಮಧ್ಯಪ್ರವೇಶದಿಂದ ಖಾತೆ ಮರಳಿ ದೊರೆತಿದೆ. ನೀರಾವರಿಯಲ್ಲಿ ಸಾಕಷ್ಟು ಕೆಲಸ ಮಾಡಲು ನಿರ್ಧರಿಸಿ ಕೇಳಿದ್ದೆ. ಆದರೆ, ಜನರ ಕೆಲಸಗಳನ್ನು ಮಾಡುವ ಖಾತೆಗಳನ್ನು ಕೊಡುವಂತೆ ಕೇಳಿಕೊಂಡಿದ್ದೆ. ಜನರ ಕೆಲಸಗಳನ್ನು ಮಾಡುವುದು ನನ್ನ ಕನಸು. ಈ ಕನಸಿಗೆ ಅಡ್ಡಿಯಾಗಿದ್ದಾಗ ಸಹಜವಾಗಿ ನೋವಾಗಿತ್ತು. ಆದರೆ. ಈ ನೀಡಿರುವ ಖಾತೆ ಸಮಾಧಾನ ತಂದಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ರೈತರ ಟ್ರಾಕ್ಟರ್ ಪರೇಡ್ಗೆ ಪೊಲೀಸರ ಅನುಮತಿ ನಿರಾಕರಣೆ ಹಿನ್ನೆಲೆಯ ಕುರಿತು ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆಯ ಪಾಲನೆಯಲ್ಲಿ ಇಂತಹ ನಿರ್ಧಾರಗಳು ಸಹಜ. ಲಕ್ಷಾಂತರ ಸೇರಿದರೇ ಕಷ್ಟವಾಗುತ್ತದೆ ಎಂದು ಸಾಂಕೇತಿಕವಾಗಿ ಪೊಲೀಸರು ಹೇಳಿದ್ದಾರಷ್ಟೇ ಎಂದು ಹೇಳಿದರು.
ಸಂಪುಟ ಸಂಕಟ: ಥರಗುಟ್ಟುವ ಚಳಿಯಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ರೇಣುಕಾಚಾರ್ಯ