ವೀಕೆಂಡ್​ ಕರ್ಫ್ಯೂನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ದಿನಕ್ಕೆ 75 ಕೋಟಿ ನಷ್ಟ; ಸಚಿವ ಗೋಪಾಲಯ್ಯ ಪ್ರಸ್ತಾಪ

| Updated By: ಸುಷ್ಮಾ ಚಕ್ರೆ

Updated on: Jan 06, 2022 | 5:39 PM

Weekend Curfew: ವೀಕೆಂಡ್​ ಕರ್ಫ್ಯೂ ವೇಳೆಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಅವರ ಮಾತಿಗೆ ಸಚಿವ ಜೆ.ಸಿ. ಮಾಧುಸ್ವಾಮಿ ಬೆಂಬಲ ಸೂಚಿಸಿದ್ದಾರೆ.

ವೀಕೆಂಡ್​ ಕರ್ಫ್ಯೂನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ದಿನಕ್ಕೆ 75 ಕೋಟಿ ನಷ್ಟ; ಸಚಿವ ಗೋಪಾಲಯ್ಯ ಪ್ರಸ್ತಾಪ
ಸಚಿವ ಗೋಪಾಲಯ್ಯ
Follow us on

ಬೆಂಗಳೂರು: ವೀಕೆಂಡ್ ಕರ್ಫ್ಯೂ (Weekend Curfew) ವೇಳೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ವಿಚಾರವಾಗಿ ಸಂಪುಟ ಸಭೆಯಲ್ಲಿ ಅಬಕಾರಿ ಸಚಿವ ಗೋಪಾಲಯ್ಯ (Minister Gopalaiah) ಪ್ರಸ್ತಾಪ ಮಾಡಿದ್ದಾರೆ. ಮದ್ಯ ಮಾರಾಟಕ್ಕೆ ಅವಕಾಶ ಕೊಡುವಂತೆ ಸಚಿವರು ಪ್ರಸ್ತಾಪಿಸಿದ್ದಾರೆ. ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ದಿನಕ್ಕೆ 75 ಕೋಟಿ ರೂ. ನಷ್ಟವಾಗುತ್ತದೆ. ಹೀಗಾಗಿ, ವೀಕೆಂಡ್​ ಕರ್ಫ್ಯೂ ವೇಳೆಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಅವರ ಮಾತಿಗೆ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ಬೆಂಬಲ ಸೂಚಿಸಿದ್ದಾರೆ.

ವೀಕೆಂಡ್​ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಬೆಳಗಿನ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎಂದಿದ್ದಾರೆ. ಆದರೆ, ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.

ಈಗಾಗಲೇ ವೀಕೆಂಡ್​ನಲ್ಲಿ ಹೋಟೆಲ್​​, ಬಾರ್​, ರೆಸ್ಟೋರೆಂಟ್​ ಬಂದ್​ ಮಾಡಿಸಲು ಸುತ್ತೋಲೆ ಹೊರಡಿಸಲಾಗಿದೆ. ಕನಕಪುರ ವೃತ್ತದ ಎಲ್ಲಾ ಪಿಎಸ್​ಐಗಳಿಗೆ ಸರ್ಕಾರದಿಂದ ಸುತ್ತೋಲೆ ನೀಡಲಾಗಿದೆ. ಪಿಎಸ್​ಐಗಳು ತಾವೇ ಮುಂದೆ ನಿಂತು ಹೋಟೆಲ್, ಬಾರ್ , ರೆಸ್ಟೋರೆಂಟ್​ ಅನ್ನು ಶುಕ್ರವಾರ ರಾತ್ರಿ ಬಂದ್​ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶ ಹಿನ್ನೆಲೆ ಎಲ್ಲ ಪಿಎಸ್​ಐಗಳಿಗೂ ಸೂಚನೆ ನೀಡಲಾಗಿದೆ.

ಸರ್ಕಾರ ಕೊವಿಡ್-19 ನಿಗ್ರಹಕ್ಕೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ನಿರ್ಬಂಧನೆಗಳನ್ನ ಹೇರಿದ್ದು, ಈಗ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟಿದ್ದು ಎಂದು ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಮಾರಾಟ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು, ಪ್ರಾದೇಶಿಕ ಅವಶ್ಯಕತೆಗಳಿಗೆ ಆನುಗುಣವಾಗಿ ಅಯಾ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬಹುದು ಎಂದು ಹೇಳಿದೆ.

ಇದನ್ನೂ ಓದಿ: Bengaluru Metro: ವೀಕೆಂಡ್ ಕರ್ಫ್ಯೂ ವೇಳೆ ಬೆಂಗಳೂರು ಮೆಟ್ರೋ ಸಂಚಾರ ಹೇಗಿರಲಿದೆ? ವಿವರ ಇಲ್ಲಿದೆ

ವೀಕೆಂಡ್ ಕರ್ಫ್ಯೂ​​ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ; ಆದರೆ ಗಮನಿಸಿ, ಶೇ 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ