ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್​ರನ್ನು ಭೇಟಿಯಾದ ರಾಜ್ಯದ ಸಚಿವರು

|

Updated on: Jan 18, 2025 | 11:44 AM

ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ತಮ್ಮ ಉಡುಗೊರೆಯ ಚೀಲವನ್ನು ಬಿಚ್ಚಿ ತೋರಿಸುತ್ತಾರೆ. ಭೈರೇಗೌಡ ಪಕ್ಕದಲ್ಲಿದ್ದ ಅಧಿಕಾರಿಯೊಬ್ಬರು ಚೀಲದಲ್ಲಿರುವ ವಸ್ತುಗಳ ಬಗ್ಗೆ ಚೌಹಾನ್ ಅವರಿಗೆ ತಿಳಿಸುತ್ತಾರೆ. ಕರ್ನಾಟಕದ ಮಸಾಲೆ ಪದಾರ್ಥಗಳು, ಇಲ್ಲಿನ ವಿಶ್ವ ಪ್ರಸಿದ್ಧ ಕಾಫಿ ಪೌಡರ್ ಮತ್ತು ಚಹಾ ಪುಡಿಯನ್ನು ಉಡುಗೊರೆ ರೂಪದಲ್ಲಿ ನೀಡಲಾಗಿದೆ.

ಬೆಂಗಳೂರು: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ರಾಜ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜ್ಯದ ಸಚಿವರು ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಕೆಲವು ನೆನಪಿನ ಕಾಣಿಕೆಗಳು ನೀಡಿದರು. ಕನ್ನಡಿಗರಿಗೆ ಗೊತ್ತಿರುವ ಹಾಗೆ ಚೌಹಾನ್ ಅವರು ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗುವ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಗನ ಸೋಲು ಕುಮಾರಸ್ವಾಮಿಯನ್ನು ಫ್ರಸ್ಟ್ರೇಷನ್​ಗೆ ನೂಕಿದೆ, ಹಾಗಾಗೇ ಸುಳ್ಳು ಆರೋಪಗಳು: ಕೃಷ್ಣ ಭೈರೇಗೌಡ, ಸಚಿವ