ಬೆಂಗಳೂರು: ವಿಧಾನಸಭೆಯಲ್ಲಿ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ-2021 ಅಂಗೀಕಾರವಾಗಿದೆ. ತಿದ್ದುಪಡಿಯಾದ ವಿಧೇಯಕದ ಅಡಿಯಲ್ಲಿ ಕಾನೂನು ಪ್ರಕಾರ ಸಾಲಗಾರನಿಂದ ಸಾಲ ವಸೂಲಿ ಮಾಡಬೇಕು. ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ. ಒಂದು ವೇಳೆ ಇಂತಹ ಕೃತ್ಯವನ್ನು ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುವುದು. 6 ತಿಂಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಅಥವಾ ಸುಮಾರು 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಜೊತೆಗೆ, ದಂಡದ ಬದಲಿಗೆ 1 ವರ್ಷದವರೆಗೆ ಶಿಕ್ಷೆ ವಿಧಿಸಬಹುದು ಅಥವಾ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸುವುದಕ್ಕೆ ತಿದ್ದುಪಡಿ ಮಾಡಲಾಗಿದೆ.
ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ ಅಂಗೀಕಾರ
ವಿಧಾನಸಭೆಯಲ್ಲಿ ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ ಕೂಡ ಅಂಗೀಕಾರ ಆಗಿದೆ. ಇದೀಗ, ಕುಷ್ಠ ರೋಗದಿಂದ ನರಳುತ್ತಿರುವ ವ್ಯಕ್ತಿಗಳ ವಿರುದ್ಧ ತಾರತಮ್ಯವನ್ನು ತೊಡೆದು ಹಾಕುವ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ.
ಯಾವುದೇ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಮಾರುಕಟ್ಟೆಗೆ ಪ್ರವೇಶಿಸಲು ತಡೆಯುವಂತಿಲ್ಲ. ಜೊತೆಗೆ, ಯಾವುದೇ ವ್ಯಕ್ತಿ ಗಲಭೆ ಮಾಡಿದ್ರೆ ಮಾರುಕಟ್ಟೆಯಿಂದ ಆತನನ್ನು ಹೊರದೂಡಲು ಅವಕಾಶ ಕಲ್ಪಿಸಲಾಗಿದೆ. ಗಲಭೆ ಮಾಡಿದ್ರೆ ಅಂತಹವರನ್ನ ಹೊರದೂಡಲು ಅವಕಾಶ ನೀಡಲಾಗಿದೆ.
ಮೈಸೂರು ರೇಸ್ಕ್ಲಬ್ಗೆ ಅಗ್ಗದ ದರಕ್ಕೆ ಜಮೀನು ಗುತ್ತಿಗೆ ಪ್ರಶ್ನಿಸಿ ಪಿಐಎಲ್
ಮೈಸೂರು ರೇಸ್ಕ್ಲಬ್ಗೆ ಜಮೀನು ಗುತ್ತಿಗೆ ವಿಚಾರವಾಗಿ ಅಗ್ಗದ ದರಕ್ಕೆ ಗುತ್ತಿಗೆ ಪ್ರಶ್ನಿಸಿ ಎಸ್.ಉಮಾಪತಿ ಎಂಬುವವರಿಂದ ಪಿಐಎಲ್ ಸಲ್ಲಿಸಲಾಗಿದೆ. ಇದೀಗ, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಹ ನಡೆಯಿತು.
ರೇಸ್ಕ್ಲಬ್ನ ಶೇ.2ರಷ್ಟು ಆದಾಯ ಮಾತ್ರ ಗುತ್ತಿಗೆಯ ಮೊತ್ತವಾಗಿ ನಿಗದಿಪಡಿಸಲಾಗಿದೆ. ಹಾಗಾಗಿ, ರಾಜ್ಯ ಸರ್ಕಾರದ ನೀತಿಗೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಕೇವಲ ಶೇ.2 ರಷ್ಟು ಆದಾಯಕ್ಕೆ 30 ವರ್ಷ ಗುತ್ತಿಗೆ ನೀಡಲಾಗಿದೆ. ಇದು ಸಾರ್ವಜನಿಕ ಆಸ್ತಿ ಸದ್ಬಳಕೆ ಮಾಡುವ ರೀತಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಿಪಡಿಸಿದೆ.
ರೇಸ್ಕ್ಲಬ್ನಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಆದಾಯ ದೊರೆಯುತ್ತದೆ ಎಂಬ ಪ್ರತಿವಾದಿಗಳ ಆಕ್ಷೇಪಣೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರವಾಸೋದ್ಯಮಕ್ಕೆ ಪ್ರಾಣಿ ಸಂಗ್ರಹಾಲಯ ಆಕರ್ಷಣೆಯೋ ಅಥವಾ ರೇಸ್ಕ್ಲಬ್ ಮುಖ್ಯವೋ ಸರ್ಕಾರವೇ ಹೇಳಬೇಕು ಎಂದು ಕೋರ್ಟ್ ಹೇಳಿದೆ. ಜೊತೆಗೆ, ಸಚಿವ ಸಂಪುಟ ತೀರ್ಮಾನದ ಪ್ರತಿ ಸಲ್ಲಿಸಲು ಸೂಚನೆ ನೀಡಿದೆ. ಗುತ್ತಿಗೆ ಸಂಬಂಧಿಸಿದ ಕಡತ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ಕೊಟ್ಟಿದೆ.
ಇದನ್ನೂ ಓದಿ: ಅವತ್ತೇ ಹೇಳಿದ್ದೇನೆ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇದೆ -ಬಿ.ವೈ.ವಿಜಯೇಂದ್ರ
Published On - 6:08 pm, Mon, 15 March 21