Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 171 ಜನರಿಗೆ ಕೊರೊನಾ ದೃಢ; 1 ಸಾವು

| Updated By: ganapathi bhat

Updated on: Nov 15, 2021 | 8:03 PM

ಬೆಂಗಳೂರಿನಲ್ಲಿ ಇಂದು ಒಂದೇ ದಿನ 118 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,54,093 ಕ್ಕೆ ಏರಿಕೆಯಾಗಿದೆ. 12,54,093 ಸೋಂಕಿತರ ಪೈಕಿ 12,31,206 ಜನರು ಗುಣಮುಖರಾಗಿದ್ದಾರೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 171 ಜನರಿಗೆ ಕೊರೊನಾ ದೃಢ; 1 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ನವೆಂಬರ್ 15) ಹೊಸದಾಗಿ 171 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,92,021 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,45,934 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಬ್ಬರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,146 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,912 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 118 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,54,093 ಕ್ಕೆ ಏರಿಕೆಯಾಗಿದೆ. 12,54,093 ಸೋಂಕಿತರ ಪೈಕಿ 12,31,206 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ ಸಾವು ಸಂಭವಿಸಿಲ್ಲ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,312 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 6,574 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 118, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 1, ಚಿತ್ರದುರ್ಗ 0, ದಕ್ಷಿಣ ಕನ್ನಡ 8, ದಾವಣಗೆರೆ 0, ಧಾರವಾಡ 0, ಗದಗ 0, ಹಾಸನ 3, ಹಾವೇರಿ 0, ಕಲಬುರಗಿ 2, ಕೊಡಗು 3, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 14, ರಾಯಚೂರು 1, ರಾಮನಗರ 0, ಶಿವಮೊಗ್ಗ 1, ತುಮಕೂರು 2, ಉಡುಪಿ 4, ಉತ್ತರ ಕನ್ನಡ 2, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ
ಮೈಸೂರು ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಸಾವು ಸಂಭವಿಸಿಲ್ಲ. ಕೊರೊನಾದಿಂದ ಸಾವನ್ನಪ್ಪುವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಹೊಸತಾಗಿ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳು ಕೂಡ ಕಡಿಮೆ ಆಗಿದೆ.

ಇದನ್ನೂ ಓದಿ: ಕೊರೊನಾಗೆ ಬಲಿಯಾದ ಪೊಲೀಸರ ಕುಟುಂಬಕ್ಕೆ ತಲಾ 3 ಲಕ್ಷ ರೂ.ಗಳ ಚೆಕ್ ವಿತರಣೆ

ಇದನ್ನೂ ಓದಿ: ಕೊರೊನಾ ಕಡಿಮೆಯಾಗುತ್ತಿದ್ದಂತೆ ಮಧುಮೇಹಿಗಳ ಸಂಖ್ಯೆ ಹೆಚ್ಚಳ; 27,990 ಜನರಲ್ಲಿ ಮಧುಮೇಹ ಪತ್ತೆ