ಕೊರೊನಾಗೆ ಬಲಿಯಾದ ಪೊಲೀಸರ ಕುಟುಂಬಕ್ಕೆ ತಲಾ 3 ಲಕ್ಷ ರೂ.ಗಳ ಚೆಕ್ ವಿತರಣೆ

ಕೊರೊನಾಗೆ ಬಲಿಯಾದ ಪೊಲೀಸರ ಕುಟುಂಬಕ್ಕೆ ತಲಾ 3 ಲಕ್ಷ ರೂ.ಗಳ ಚೆಕ್ ವಿತರಣೆ
ಕೊರೊನಾಗೆ ಬಲಿಯಾದ ಪೊಲೀಸರ ಕುಟುಂಬಕ್ಕೆ ಚೆಕ್ ವಿತರಣೆ

Karnataka Police: ನೃಪತುಂಗ ರಸ್ತೆಯಲ್ಲಿರುವ ಡಿಜಿ ಅಂಡ್ ಐಜಿಪಿ ಕಚೇರಿಯಲ್ಲಿ ಪ್ರವೀಣ್ ಸೂದ್​ ಚೆಕ್ ವಿತರಣೆ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೊಲೀಸ್ ಕುಟುಂಬಸ್ಥರು ಬಂದಿದ್ದರು.

TV9kannada Web Team

| Edited By: ganapathi bhat

Nov 15, 2021 | 7:58 PM

ಬೆಂಗಳೂರು: ಕೊರೊನಾಗೆ ಬಲಿಯಾದ ಪೊಲೀಸರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. 90 ಪೊಲೀಸರ ಕುಟುಂಬಗಳಿಗೆ ಇಂದು (ನವೆಂಬರ್ 15) ತಲಾ 3 ಲಕ್ಷ ರೂಪಾಯಿಯ ಚೆಕ್​ ವಿತರಣೆ ಮಾಡಲಾಗಿದೆ. ನೃಪತುಂಗ ರಸ್ತೆಯಲ್ಲಿರುವ ಡಿಜಿ ಅಂಡ್ ಐಜಿಪಿ ಕಚೇರಿಯಲ್ಲಿ ಪ್ರವೀಣ್ ಸೂದ್​ ಚೆಕ್ ವಿತರಣೆ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೊಲೀಸ್ ಕುಟುಂಬಸ್ಥರು ಬಂದಿದ್ದರು. ಖಾಸಗಿ ಕಂಪನಿ ಸಹಯೋಗದಲ್ಲಿ 3 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ. ಅಂದರೆ, 90 ಕುಟುಂಬಗಳಿಗೆ ಒಟ್ಟು 2.70 ಕೋಟಿ ಮೊತ್ತದ ಚೆಕ್​ ವಿತರಣೆ ಮಾಡಲಾಗಿದೆ. ಎಡಿಜಿಪಿ ಡಾ.ಸಲೀಂ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು: ಕರ್ನಾಟಕ ಕೊರೊನಾ ಪ್ರಕರಣಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ಇಂದು (ನವೆಂಬರ್ 15) ಹೊಸದಾಗಿ 171 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,92,021 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,45,934 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಬ್ಬರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,146 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,912 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 118 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,54,093 ಕ್ಕೆ ಏರಿಕೆಯಾಗಿದೆ. 12,54,093 ಸೋಂಕಿತರ ಪೈಕಿ 12,31,206 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ ಸಾವು ಸಂಭವಿಸಿಲ್ಲ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,312 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 6,574 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಟ್ರೈನಿಂಗ್ ನೀಡಿದ್ದ ಪ್ರದೇಶವನ್ನೇ ಅಡ್ಡಾ ಮಾಡಿಕೊಂಡ‌ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು

ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಬಂಧನ; 6 ಲಕ್ಷ ನಗದು, ಮೊಬೈಲ್ ಪೊಲೀಸ್ ವಶಕ್ಕೆ

Follow us on

Related Stories

Most Read Stories

Click on your DTH Provider to Add TV9 Kannada