ರಾಜ್ಯದಲ್ಲಿ ಆ್ಯಕ್ಟಿವ್​ ಕೊರೊನಾ ಕೇಸ್​ಗಳ ಸಂಖ್ಯೆ ಕೇವಲ 7,554

|

Updated on: Jan 21, 2021 | 9:17 PM

ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12,187 ಜನರ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 9,14,492 ಜನ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಆ್ಯಕ್ಟಿವ್​ ಕೊರೊನಾ ಕೇಸ್​ಗಳ ಸಂಖ್ಯೆ ಕೇವಲ 7,554
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ದೇಶದಲ್ಲಿ ಜನವರಿ 16ರಿಂದ  ಕೊರೊನಾ ಲಸಿಕೆ ಹಂಚಿಕೆ ಆರಂಭವಾಗಿದೆ.  ಈ ಮಧ್ಯೆ  ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.  ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 674 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,34,252ಕ್ಕೇರಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಕೂಡ  ಮಿತಿ ಮೀರಿ ಕಡಿಮೆ ಆಗಿದೆ.

ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12,187 ಜನರ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 9,14,492 ಜನ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. 7,554 ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 196 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ರಾಜ್ಯದಲ್ಲಿ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿರುವುದು ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ.

ಫೈಜರ್​ ಲಸಿಕೆ ಪಡೆದ 12,400 ಜನರಿಗೆ ಕೊರೊನಾ!