‘H.D.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ; ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ’
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ. ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ ಎಂದು ಯೋಗೇಶ್ವರ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು: ಮಾಜಿ ಸಿಎಂ H.D.ಕುಮಾರಸ್ವಾಮಿ ಬಗ್ಗೆ ಅಯ್ಯೋ ಪಾಪ ಅನಿಸುತ್ತೆ. ಅವರಿಗೆ ಆತಂಕ ಭಯ ಕಾಡ್ತಿದೆ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ. ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ ಎಂದು ಯೋಗೇಶ್ವರ್ ತಿರುಗೇಟು ಕೊಟ್ಟಿದ್ದಾರೆ.
ಇನ್ನೂ, ಡಾ.ಅಂಬೇಡ್ಕರ್ ಭವನ ಕಟ್ಟಡವೇ ನಿರ್ಮಾಣವಾಗಿಲ್ಲ. ಆದ್ರೂ ಉದ್ಘಾಟನೆ ಮಾಡುವುದ್ದಕ್ಕೆ ಹೊರಟಿದ್ದಾರೆ. ಒಬ್ಬ ಸಿಎಂ ಆಗಿದ್ದಂತವರು ಈ ಥರ ಮಾಡೋದು ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ. ಅವರಿಗೆ ನಾನು ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಬರ್ತೇನೆ ಅಂತಾ ಆತಂಕ ಇರಬಹುದು. ಹಳೇ ಮೈಸೂರು ಭಾಗದಲ್ಲಿ ಹೇಗೆ ಪಕ್ಷ ಸಂಘಟನೆ ಮಾಡ್ತೇನೆ ಅಂತಾ ನೀವೇ ನೋಡಿ ಎಂದು ಯೋಗೇಶ್ವರ್ ಹೇಳಿದರು.
ನಾನು ಮೊದಲಿಂದಲೂ ಹೋರಾಟ ಮಾಡಿಕೊಂಡೇ ಬಂದವನು. ಯಾವುದೇ ಕಾರಣಕ್ಕೂ ಹಳೇ ಮೈಸೂರು ಭಾಗದಲ್ಲಿ ದೋಸ್ತಿ ಬೇಡ ಅಂತಾ ನಮ್ಮ ನಾಯಕರಿಗೆ ಕಿವಿಮಾತು ಹೇಳ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಆಗಬೇಕು ಅಂದ್ರೆ ಯಾವುದೇ ಕಾರಣಕ್ಕೂ ದೋಸ್ತಿ ಮಾಡಬಾರದು. ಈ ಕಾರಣಕ್ಕೆ ಕುಮಾರಸ್ವಾಮಿಗೆ ಆತಂಕ ಕಾಡ್ತಿದೆ. ಹೀಗಾಗಿ, ನಮ್ಮಲ್ಲೇ ಕೆಲವರು ಅವರಿಗೆ ಸಪೋರ್ಟ್ ಮಾಡಿದ್ರು ಎಂದು ಸಚಿವರು ಹೇಳಿದರು.
ಸಿಎಂ ಜೊತೆ ಮುಂಚೆ ಮೀಟಿಂಗ್ ಮಾಡಿದ ಕುಮಾರಸ್ವಾಮಿ ಮೊದಲು ಬಿಜೆಪಿನ ಪ್ರೀತಿ ಮಾಡ್ತಿದ್ದರು. ಈಗ ಅವರೇ ಬಿಜೆಪಿಯನ್ನು ಬೈತಿದ್ದಾರೆ ಎಂದು ಹೇಳಿದರು.