ಅಫ್ಜಲ್ಪುರ: ಕರಜಗಿ ಗ್ರಾಮದ ಬಳಿ ಕಾರು ಪಲ್ಟಿ, ಓರ್ವ ಸ್ಥಳದಲ್ಲೇ ಸಾವು
ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಕರಜಗಿ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಾಶಾಳತಾಂಡಾದ ವಿಶ್ವನಾಥ ರಾಠೋಡ್(38) ಮೃತ ದುರ್ದೈವಿ. ವಿಶ್ವನಾಥ ಮಾಶಾಳ ತಾಂಡಾ ನಿವಾಸಿ ಎಂದು ತಿಳಿದುಬಂದಿದೆ.

ಅಪಘಾತದ ಭೀಕರ ದೃಶ್ಯ
ಕಲಬುರಗಿ: ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಕರಜಗಿ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಾಶಾಳತಾಂಡಾದ ವಿಶ್ವನಾಥ ರಾಠೋಡ್(38) ಮೃತ ದುರ್ದೈವಿ. ವಿಶ್ವನಾಥ ಮಾಶಾಳ ತಾಂಡಾ ನಿವಾಸಿ ಎಂದು ತಿಳಿದುಬಂದಿದೆ.
ಇನ್ನು, ಘಟನೆಯಲ್ಲಿ ವಿಶ್ವನಾಥನ ಪತ್ನಿಗೆ ಕೈಮುರಿದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಫ್ಜಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗಂಗಾವತಿಯಲ್ಲಿ.. ಅಕ್ರಮವಾಗಿ ‘ಅನ್ನಭಾಗ್ಯ’ ಅಕ್ಕಿ ಸಾಗಿಸುತ್ತಿದ್ದ 4 ಲಾರಿ ಖಾಕಿ ವಶಕ್ಕೆ
Published On - 6:58 pm, Thu, 21 January 21