ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್| 21-01-2021
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
LIVE NEWS & UPDATES
-
ಜಾಮೀನು ಸಿಕ್ಕರೂ ಇಂದು ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ
07:57 pm ಜಾಮೀನು ಸಿಕ್ಕರೂ ಇಂದು ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಕೋರ್ಟ್ ಆದೇಶ ಪ್ರತಿ ಪಡೆದು ಪ್ರಕ್ರಿಯೆಗೆ ಕಾಲಾವಕಾಶ ಬೇಕಿದೆ. ಆದೇಶದ ದೃಢೀಕೃತ ಪ್ರತಿ ಹಾಜರುಪಡಿಸುವುದು ಕಡ್ಡಾಯವಾಗಿದೆ. ಹೀಗಾಗಿ, ರಾಗಿಣಿ ಬಿಡುಗಡೆ ನಾಳೆಗೆ ಮುಂದೂಡಲ್ಪಟ್ಟಿದೆ.
-
ಸೆರಮ್ ಇನ್‌ಸ್ಟಿಟ್ಯೂಟ್ ಅಗ್ನಿಅವಘಡದಲ್ಲಿ ಐವರ ಸಾವು, ಕೆಲವರ ಸ್ಥಿತಿ ಗಂಭೀರ
ಮಹಾರಾಷ್ಟ್ರದ ಪುಣೆಯಲ್ಲಿರುವ ಸೆರಮ್ ಇನ್ಸ್ಟಿಟ್ಯೂಟ್ನಲ್ಲಿ ಅಗ್ನಿ ಅವಘಡದಿಂದ ಐವರು ಸಾವನ್ನಪ್ಪಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ.
-
ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ 4 ಲಾರಿ ವಶ
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅಕ್ರಮವಾಗಿ ‘ಅನ್ನಭಾಗ್ಯ’ ಅಕ್ಕಿ ಸಾಗಿಸುತ್ತಿದ್ದ 4 ಲಾರಿಯನ್ನು ಡಿಸಿ ವಿಕಾಸ್ ಕಿಶೋರ್, SP ಟಿ.ಶ್ರೀಧರ್ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದು, ಅಕ್ಕಿ ಸಂಗ್ರಹಿಸಿಟ್ಟಿದ್ದ ಖಾಸಗಿ ಗೋದಾಮಿನ ಮೇಲೂ ದಾಳಿ ನಡೆಸಿದ್ದಾರೆ.
ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸಿಎಂ
ಸೀರಮ್ ಇನ್‌ಸ್ಟಿಟ್ಯೂಟ್ ಬಳಿ ಅಗ್ನಿ ಅವಘಡ ಘಟನೆಯ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸಿಎಂ ಆದೇಶ ನೀಡಿದ್ದಾರೆ.
ನಷ್ಟದ ಬಗ್ಗೆ ನಂತರ ಗಮನ ಹರಿಸುತ್ತೇವೆ: ಆದಾರ್ ಪೂನಾವಲಾ
ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಘಟಕದಿಂದ 9 ಮಂದಿಯನ್ನು ರಕ್ಷಿಸಲಾಗಿದೆ. ಜನರನ್ನು ರಕ್ಷಿಸುವುದಕ್ಕೆ ಮೊದಲ ಆದ್ಯತೆ. ನಷ್ಟದ ಬಗ್ಗೆ ನಂತರ ಗಮನ ಹರಿಸುತ್ತೇವೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಲಾ ಹೇಳಿದ್ದಾರೆ.
ಸಿಎಂ ನಿವಾಸದಲ್ಲಿ ಸಮ್ಮತಿ ಸೂಚಿದವರೇ ಕ್ಯಾಬಿನೆಟ್ಗೆ ಗೈರು
ಸಿಎಂ ಅಸಮಾಧಾನಿತರಿಗೆ ಕಾದು ಕಾದು ಕ್ಯಾಬಿನೆಟ್ ಸಭೆ ಪ್ರಾರಂಭಿಸಿದ್ದಾರೆ. ಸಿಎಂ ನಿವಾಸದಲ್ಲಿ ಒಪ್ಪಿಕೊಂಡ ಎಂಟಿಬಿ ನಾಗರಾಜ್, ಗೋಪಾಲಯ್ಯ ಸಭೆಗೆ ಗೈರಾಗಿದ್ದಾರೆ.
ಸಚಿವ ಸಂಪುಟ ಸಭೆ ಆರಂಭ
ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆ ಆರಂಭವಾಗಿದೆ.
ಸಂಪುಟ ಸಭೆಗೆ ಹಾಜರಾಗಲ್ಲ: ಎಂಟಿಬಿ ನಾಗರಾಜ್
ಖಾತೆ ಬದಲಾಯಿಸುವವರೆಗೂ ಸಂಪುಟ ಸಭೆಗೆ ಹಾಜರಾಗಲ್ಲ. ಸರ್ಕಾರದ ಯಾವುದೇ ಸೌಲಭ್ಯವನ್ನೂ ಪಡೆಯುವುದಿಲ್ಲ. ಅಬಕಾರಿ ಖಾತೆ ಬೇಕಿಲ್ಲ. ಆ ಖಾತೆ ವಹಿಸಿಕೊಳ್ಳಲು ಸಿದ್ಧನಿಲ್ಲ ಎಂದು ಸಿಎಂ ಜೊತೆ ಸಭೆ ವೇಳೆ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಗೋಕರ್ಣದ ಕಡಲ ತೀರದಲ್ಲಿ ಮೂವರು ಸಾವು
ದೇವರ ದರ್ಶನಕ್ಕೆಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಬಂದಿದ್ದ ಮೂವರು ಸಮುದ್ರದಲ್ಲಿ ಈಜಲು ತೆರಳಿದ್ದು, ಮೂವರು ಸಾವು ಸಾವನ್ನಪ್ಪಿದ್ದಾರೆ.
ಸತ್ತು ಬಿದ್ದಿರುವ ಪಕ್ಷಿಗಳು: ಗ್ರಾಮಸ್ಥರು ಆತಂಕ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆರೆಯಂಗಳದಲ್ಲಿ ಪಕ್ಷಿಗಳು ಸತ್ತು ಬಿದ್ದಿದ್ದು, ಸತ್ತ ಪಕ್ಷಿಗಳನ್ನು ಕಂಡು ಸ್ಥಳಿಯರಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಾಮೀನು ಪ್ರತಿಗಾಗಿ ಕಾಯುತ್ತಿರುವ ರಾಗಿಣಿ ದ್ವಿವೇದಿ
ಸುಪ್ರೀಂ ಕೋರ್ಟ್ ನಟಿ ರಾಗಿಣಿಗೆ ಜಾಮೀನು ನೀಡಿದ್ದು, ಜಾಮೀನು ಪ್ರತಿಗಾಗಿ ರಾಗಿಣಿ ದ್ವಿವೇದಿ ಕಾಯುತ್ತಿದ್ದಾರೆ. ಬೇಲ್ ಸಿಕ್ಕ ಖುಷಿಯಲ್ಲಿ ನಟಿ ಬಟ್ಟೆ ಪ್ಯಾಕ್ ಮಾಡಿದ್ದಾರೆ.
ವಿಮಾನ ನಿಲ್ದಾಣದಿಂದ ನೇರವಾಗಿ ತಂದೆ ಅಂತ್ಯಸಂಸ್ಕಾರ ಮಾಡಿದ ಜಾಗಕ್ಕೆ ತೆರಳಿ ನಮನ ಸಲ್ಲಿಸಿದ ಬೌಲರ್ ಮೊಹಮದ್ ಸಿರಾಜ್
ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೌಲರ್ ಮೊಹಮದ್ ಸಿರಾಜ್ ತುಂಬಾನೇ ಭಾವನಾತ್ಮಕ ವ್ಯಕ್ತಿ. ಎದುರಾಳಿ ಮುಖಕ್ಕೆ ಚೆಂಡು ಬಡಿದಾಗ ಮೊಹಮದ್ ಸಿರಾಜ್ ಓಡೋಡಿ ಹೋಗಿದ್ದರು. ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟಿದ್ದರು. ಈಗ ಅವರು ಭಾರತಕ್ಕೆ ವಾಪಾಸಾಗಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ತಂದೆಯನ್ನು ಅಂತ್ಯಸಂಸ್ಕಾರ ಮಾಡಿದ ಜಾಗಕ್ಕೆ ತೆರಳಿ ನಮನ ಸಲ್ಲಿಸಿದ್ದಾರೆ.
ಲಂಚ ಸ್ವೀಕಾರ: ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ
ಮಡಿಕೇರಿ ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಮರಗೋಡು ಹೋಬಳಿ ವಿಎ ಸುಬ್ರಮಣಿ ಎಂಬುವವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಚಿವರಿಗೆ ಅಸಮಾಧಾನವಿಲ್ಲ: ಬಿಎಸ್‌ವೈ
ಎಲ್ಲ ಸಚಿವರು ಸಮಾಧಾನವಾಗಿದ್ದಾರೆ. ಸಚಿವ ಸ್ಥಾನ ಹಂಚಿಕೆ ಮಾಡುವುದು ಸುಲಭದ ಕೆಲಸವಲ್ಲ. ಅಕಸ್ಮಾತ್ ಅವರಿಗೆ ಇಷ್ಟವಾಗದಿದ್ದರೆ ಮುಂದೆ ನೋಡೋಣ ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.
ಸಿಎಂ ನೇತೃತ್ವದಲ್ಲಿ ಕ್ಯಾಬಿನೇಟ್ ಸಭೆ
ವಿಧಾನಸೌಧದಲ್ಲಿ 4.30ಕ್ಕೆ ಸರಿಯಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತದೆ.
ಸಚಿವ ಕೆ.ಎಸ್.ಈಶ್ವರಪ್ಪ ಆಗಮನ
ಕೆಲ ಹೊತ್ತಿನಲ್ಲೇ ವಿಧಾನಸಭೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಗೆ ಸಚಿವ ಕೆ.ಎಸ್.ಈಶ್ವರಪ್ಪ ಆಗಮಿಸಿದ್ದಾರೆ.
ತ್ಯಾಜ್ಯ ನಿರ್ವಹಣ ಘಟಕದಲ್ಲಿ ಅಗ್ನಿ ಅವಘಡ
ನೆಲಮಂಗಲ ನಗರಸಭೆಯ ಘನ ತ್ಯಾಜ್ಯ ನಿರ್ವಹಣ ಘಟಕದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು, ದುಷ್ಕರ್ಮಿಗಳು ಬೆಂಕಿ ಹೊತ್ತಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ರಾಗಿಣಿ ಇಂದೇ ಜೈಲಿನಿಂದ ಬಿಡುಗಡೆ ಕಷ್ಟಸಾಧ್ಯ
ಸಂಜೆ 4 ಗಂಟೆ ಬಳಿಕ ಸುಪ್ರೀಂ ಕೋರ್ಟ್ನಿಂದ ಲಿಖಿತ ಆದೇಶ ಬರುವ ಕಾರಣ ಆದೇಶ ಪ್ರತಿ ವಿಚಾರಣಾದೀನಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಇಂದೇ ನಡೆಯುವುದು ಕಷ್ಟವಾದ್ದರಿಂದ ರಾಗಿಣಿ ಜೈಲಿನಿಂದ ಬಿಡುಗಡೆಯಾಗುವುದೂ ಕಷ್ಠವಾಗಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಎಸ್.ಎ.ರಾಮದಾಸ್ ಅಸಮಾಧಾನ
ನಾನೊಬ್ಬ ನಿಜವಾದ ಸ್ವಯಂಸೇವಕ. ಅನ್ಯಮಾರ್ಗದಲ್ಲಿ ಸಚಿವನಾಗೋದು ನನ್ನ ಆತ್ಮಸಾಕ್ಷಿಗೆ ವಿರುದ್ಧ. ಇದು ಹಳೆಯ ಮೈಸೂರು ಪ್ರಾಂತ್ಯಕ್ಕೆ ಆಗಿರುವ ಅನ್ಯಾಯ. ಜಿಲ್ಲೆಯ ಬೇರೆ ಯಾರಾನ್ನಾದರೂ ಮಂತ್ರಿ ಮಾಡಬಹುದಿತ್ತು. ನಾನು 28 ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ ಎಂದು ಸಚಿವ ಸ್ಥಾನ ಸಿಗದಿದ್ದಕ್ಕೆ S.A.ರಾಮದಾಸ್ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಪೊಲೀಸ್ ಜೀಪ್
ರಾಯಚೂರು ತಾಲೂಕಿನ ಕಲ್ಮಲ ಗ್ರಾಮದಲ್ಲಿ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ್ದು, ಅದೃಷ್ಟವಶಾತ್ ಜೀಪ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಲಸಿಕೆ ಸ್ಟೋರೇಜ್ ಘಟಕ ಸೇಫ್
ಸೆರಮ್ ಇನ್ಸ್ಟಿಟ್ಯೂಟ್ನಲ್ಲಿ ಕಾಣಿಸಿಕೊಂಡ ಅಗ್ನಿ ಅವಘಡದಿಂದ ಲಸಿಕೆ ಉತ್ಪಾದನೆಗೆ ಯಾವುದೇ ತೊಂದರೆಯಾಗಿಲ್ಲ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಣಿಸಿಕೊಂಡಿರುವ ಬೆಂಕಿ
ಮಹಾರಾಷ್ಟ್ರದ ಪುಣೆಯಲ್ಲಿರುವ ಸೆರಮ್ ಇನ್ಸ್ಟಿಟ್ಯೂಟ್ನ ಹೊಸ ಘಟಕದ ಎರಡನೇ ಮಹಡಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. 10 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲು ಶ್ರಮಿಸುತ್ತಿವೆ.
ಪುಣೆಯ ಸೆರಮ್ ಸಂಸ್ಥೆಯಲ್ಲಿ ಆಗ್ನಿ ಅವಘಡ
ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೆರಮ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 10 ಅಗ್ನಿಶಾಮಕ ದಳಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಸಿಎಂ ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧ: ಗೋಪಾಲಯ್ಯ
ಕಳೆದ 11 ತಿಂಗಳಿಂದ ನನಗೆ ಆಹಾರ ಖಾತೆ ಕೊಟ್ಟಿದ್ದರು. ನನಗೆ ನೀಡಿದ್ದ ಖಾತೆ ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಸಣ್ಣ ಪುಟ್ಟ ಭಿನ್ನಾಬಿಪ್ರಾಯಗಳಿದ್ದರೂ ಪರಿಹರಿಸಿಕೊಳ್ಳಬೇಕು. ಸಿಎಂ ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಸಂಪುಟ ಸಭೆಗೆ ಕೆ.ಸುಧಾಕರ್ ತೆರಳುವುದು ಡೌಟ್
ಖಾತೆ ಹಿಂಪಡೆದಿದ್ದರಿಂದ ಬೇಸರಗೊಂಡ ಸಚಿವ ಡಾ.ಕೆ.ಸುಧಾಕರ್ ಸಂಪುಟ ಸಭೆಗೆ ಹೋಗುವುದು ಅನುಮಾನ ಎಂದು ತಿಳಿದುಬಂದಿದೆ.
ಸಿಎಂ ನಿವಾಸಕ್ಕೆ ಆಗಮಿಸಿದ ಮತ್ತಿಬ್ಬರು ಸಚಿವರು
ಸಚಿವರಾದ ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಸಿಎಂ ನಿವಾಸ ಕಾವೇರಿಗೆ ಆಗಮಿಸಿದರು.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಮಾರ್ಗಸೂಚಿ ಬಿಡುಗಡೆ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ನೈಸರ್ಗಿಕ ವಿಪತ್ತು ನಿರ್ವಹಣಾ ಮಾರ್ಗಸೂಚಿಯನ್ನು ಕಂದಾಯ ಸಚಿವ ಆರ್.ಅಶೋಕ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದ್ದಾರೆ.
ರಾಜೀವ್ ಗಾಂಧಿ ಕೊಂದ ಹಂತಕರ ಬಿಡುಗಡೆ: 3-4 ದಿನಗಳಲ್ಲಿ ನಿರ್ಧಾರ
ರಾಜೀವ್ ಗಾಂಧಿಯನ್ನು ಕೊಂದ ಹಂತಕರ ಬಿಡುಗಡೆ ವಿಚಾರ ಕುರಿತು 3-4 ದಿನಗಳಲ್ಲಿ ತಮಿಳುನಾಡು ರಾಜ್ಯಪಾಲರೇ ಬಿಡುಗಡೆ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರೇಣುಕಾಚಾರ್ಯ ಕ್ಷೇತ್ರಕ್ಕೆ ಸಿಎಂ ಗಿಫ್ಟ್
ರೇಣುಕಾಚಾರ್ಯ ಕ್ಷೇತ್ರಕ್ಕೆ ₹48 ಕೋಟಿ ಅನುದಾನ ನೀಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ. ಹೊನ್ನಾಳಿಯ 19 ಕೆರೆಗೆ ನೀರು ತುಂಬಿಸುವ ಯೋಜನೆ, ತುಂಗಭದ್ರಾ ನದಿಯಿಂದ ನೀರು ತುಂಬಿಸಲು ಯೋಜನೆ, ಏತ ನೀರಾವರಿ ಯೋಜನೆಗೆ ₹48 ಕೋಟಿ ರೂ. ನೀಡಲು ಚಿಂತನೆ ನಡೆಸಲಾಗಿದೆ.
ಕೊರೊನಾ ಲಸಿಕೆ ಪಡೆಯಲು ಹಿಂದೇಟು: ಭಿತ್ತಿಪತ್ರ ಬಿಡುಗಡೆ
ಕೊರೊನಾ ಲಸಿಕೆ ಪಡೆಯಲು ಹಿಂದೇಟು ವಿರುದ್ಧ ಜಾಗೃತಿಗೆ ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ರಿಂದ ಭಿತ್ತಿಪತ್ರ ಬಿಡುಗಡೆಯಾಗಿದೆ.
ಕಷ್ಟ ಸುಖ ಮಾತಾಡಿದ್ದೇವು: ಎಂಟಿಬಿ
ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್ ಏನು ಚರ್ಚೆ ಮಾಡಿಲ್ಲ ಎಲ್ಲರೂ ಒಟ್ಟಿಗೆ ಕೂತು ಕಷ್ಟ ಸುಖ ಮಾತಾಡಿದ್ದೇವು ಎಂದರು.
ಸಿಎಂ ನಿವಾಸಕ್ಕೆ ಸಚಿವರ ಆಗಮನ
ಖಾತೆಗೆ ಸಂಬಂಧಿಸಿ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಲು ಎಂಟಿಬಿ ನಾಗರಾಜ್, ಗೋಪಾಲಯ್ಯ, ಸಚಿವ ಆರ್.ಅಶೋಕ್, ಸಚಿವ ಬಸವರಾಜ ಬೊಮ್ಮಾಯಿ, ಎಸ್.ಟಿ.ಸೋಮಶೇಖರ್ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ.
ಅಸಮಾಧಾನ ಹೊರಗೆ ಹಾಕದೆ ಕೊಟ್ಟ ಖಾತೆ ನಿಭಾಯಿಸಿ: ಮುರುಗೇಶ್ ನಿರಾಣಿ
ಕೊಟ್ಟಿರುವ ಖಾತೆಯನ್ನು ನಿಭಾಯಿಸುವುದು ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಶಿವಸೇನೆ ಗಲಾಟೆ : ಡಿಸಿಪಿ ಆಗಮನ
ಬೆಳಗಾವಿಯಲ್ಲಿ ಶಿವಸೇನೆ ಗಲಾಟೆ ಹಿನ್ನಲೆಗೆ ಪೊಲೀಸ್ ಭದ್ರತೆ ಕುರಿತು ಪರಿಶೀಲನೆ ನಡೆಸಲು ಶಿನ್ನೋಳ್ಳಿ ಚೆಕ್ ಪೋಸ್ಟ್ಗೆ ಡಿಸಿಪಿ ವಿಕ್ರಂ ಆಮಟೆ ಆಗಮಿಸಿದ್ದಾರೆ.
ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದಿಂದ ಸಿಎಂಗೆ ಪತ್ರ
ಆಹಾರ ಇಲಾಖೆ ಸಚಿವರಾಗಿ ಕೆ.ಗೋಪಾಲಯ್ಯ ಅವರನ್ನೇ ಮುಂದುವರೆಸುವಂತೆ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಪತ್ರ ಬರೆದಿದ್ದಾರೆ.
ಸಿಎಂ ಭೇಟಿ ಮಾಡಿ ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ: ಕೆ.ಗೋಪಾಲಯ್ಯ
ಖಾತೆ ಹಂಚಿಕೆಗೆ ಸಚಿವರ ಅಸಮಾಧಾನ ಹಿನ್ನೆಲೆ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ. ಸಿಎಂ ಭೇಟಿ ಮಾಡಲು ಯಾವುದೇ ಅನುಮತಿ ಬೇಕಾಗಿಲ್ಲ. ನಾವೇನು ತಪ್ಪು ಮಾಡಿದ್ದೇವೆಂದು ಸಿಎಂ ಬಳಿ ಕೇಳುತ್ತೇವೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಅಸಮಾಧಾನಿತರ ಸಭೆ ಮುಕ್ತಾಯ
ಖಾತೆ ಹಂಚಿಕೆಗೆ ಸಂಬಂಧಿಸಿ ಸುಧಾಕರ್ ನಿವಾಸದಲ್ಲಿ ನಡೆಯುತ್ತಿದ್ದ ಅಸಮಾಧಾನಿತರ ಸಭೆ ಮುಕ್ತಾಯವಾಯಿತು.
ಶಿವಸೇನೆ ಪುಂಡರನ್ನು ಬಂಧಿಸಬೇಕು-ವಾಟಾಳ್
ಭಗವಾ ಧ್ವಜ ಸ್ತಂಭ ನೆಡಲು ಶಿವಸೇನೆ ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಶಿವಸೇನೆ ಪುಂಡರನ್ನು ಬಂಧಿಸಬೇಕು. ಇದಕ್ಕೆಲ್ಲಾ ಕಾರಣ ಬೆಳಗಾವಿ ಜಿಲ್ಲೆ ರಾಜಕಾರಣಿಗಳು. ನಾಳೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡುತ್ತೇವೆ. ನಾಡಿದ್ದು ಬೆಳಗಾವಿಗೆ ಹೋಗುತ್ತಿದ್ದೇವೆ. ಶಿವಸೇನೆ, ಎಂಇಎಸ್ ಪುಂಡರನ್ನು ಬಲಿ ಹಾಕುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಟಿವಿ9 ಗೆ ತಿಳಿಸಿದರು.
ಅವಧಿ ಮುಗಿದ ಮದ್ಯ: ನಾಶಪಡಿಸಿದ ಅಬಕಾರಿ ಇಲಾಖೆ
ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್‌ಗಳ 596 ಬಾಕ್ಸ್‌ಗಳ ಅವಧಿ ಮುಗಿದ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದ್ದು, ದಾವಣಗೆರೆ ಜಿಲ್ಲಾ ಅಬಕಾರಿ ಡಿಸಿ ಶಿವಪ್ರಸಾದ್ ಮಾಹಿತಿ ನೀಡಿದರು.
ಫೆಬ್ರವರಿ 3 ರಿಂದ 5ರ ವರೆಗೆ ಏರ್ ಶೋ
ಫೆಬ್ರವರಿ 3 ರಿಂದ 5ರ ವರೆಗೆ 2021 ಏರ್ ಶೋ ನಡೆಯಲಿದ್ದು, ಒಟ್ಟು 14 ರಾಷ್ಟ್ರಗಳ 541 ಪ್ರದರ್ಶಕರು, 463 ಭಾರತೀಯ, 78 ವಿದೇಶಿ ಪ್ರದರ್ಶಕರು ಭಾಗವಹಿಸಲಿದ್ದಾರೆ. 61 ವಿಮಾನಗಳು ಪ್ರದರ್ಶನಗೊಳ್ಳಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನಟೋರಿಯಸ್ ಡ್ರಗ್ ಪೆಡ್ಲರ್ಸ್ ಅರೆಸ್ಟ್
ಕುಮಾರಸ್ವಾಮಿ ಲೇಔಟ್ ಪೊಲೀಸರು ತಮಿಳುನಾಡು ಮೂಲದ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಸಿಎಂ ತೆರಳಿದ ಬಳಿಕ ಮಾಧುಸ್ವಾಮಿ ಆಗಮನ
ಸಿಎಂ ಯಡಿಯೂರಪ್ಪ ತೆರಳಿದ ಮೇಲೆ ಮಠಕ್ಕೆ ಆಗಮಿಸಿರುವ ಮಾಧುಸ್ವಾಮಿ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ವಾಟಳ್ ನಾಗರಾಜ್, ಸಾರಾ ಗೋವಿಂದ್ ಪೊಲೀಸರ ವಶಕ್ಕೆ
ವಾಟಳ್ ನಾಗರಾಜ್, ಸಾರಾ ಗೋವಿಂದ್ ಸೇರಿದಂತೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ಆರಂಭ
ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ರಸ್ತೆ ತಡೆದು ಪ್ರತಿಭಟನೆ ಆರಂಭವಾಗಿದ್ದು, ನೂರಾರು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ವಸತಿ ಖಾತೆ ಕೈತಪ್ಪಿದ್ದಕ್ಕೆ ಎಂಟಿಬಿ ಅಸಮಾಧಾನ
ಹಿಂದೆ ವಸತಿ ಸಚಿವನಾಗಿದ್ದೆ. ಅಲ್ಲಿ ಮನೆ ಕೊಡೊದು ,ಕೆಲ ಕಾಮಗಾರಿ ಮಾಡೋದು ಇತ್ತು. ಅಬಕಾರಿ ಖಾತೆಯಲ್ಲಿ ನಾನು ಮಾಡುವಂತದು ಏನು ಇಲ್ಲ. ಆ ಖಾತೆ ಬೇಡ ಅಂತ ನಾನು ಸಿಎಂಗೆ ಹೇಳಿ ಬಂದಿದ್ದೇನೆ . ಸಿಎಂ ನೋಡೊಣ ಅಂತ ಹೇಳಿದ್ದಾರೆ . ಈ ಖಾತೆಯಲ್ಲಿ ನಾನು ಮಾಡೋದು ಏನಿಲ್ಲ ಎಂದು ಸಚಿವ ಎಂಟಿಬಿ ಹೇಳಿದರು.
ಬೆಂಗಳೂರಿನತ್ತ ಸಿಎಂ
ತುಮಕೂರಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನತ್ತ ಹೊರಟಿದ್ದಾರೆ.
ಪುಣ್ಯಸ್ಮರಣೆ ದಿನ ದಾಸೋಹ ದಿನ ಎಂದು ಶೀಘ್ರದಲ್ಲೇ ಘೋಷಣೆ: ಬಿಎಸ್‌ವೈ
ಶ್ರೀಗಳ ಪುಣ್ಯಸ್ಮರಣೆ ದಿನ ದಾಸೋಹ ದಿನ ಎಂದು ಸರ್ಕಾರದಿಂದ ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸದಾಕಾಲ ನಮ್ಮ ಜೊತೆ ಇರುತ್ತಾರೆ: ಅಶ್ವತ್ಥ್ ನಾರಾಯಣ
ಡಾ.ಶಿವಕುಮಾರ ಶ್ರೀ ಸಮಾಜಕ್ಕೆ ಅನ್ನ, ವಿದ್ಯೆ ಕೊಟ್ಟಿದ್ದಾರೆ. ಸಾರ್ಥಕ ಜೀವನ ನಡೆಸಿದ ಶ್ರೀಗಳು ಅಗಲಿದ್ದರೂ ಸದಾಕಾಲ ನಮ್ಮ ಜೊತೆ ಇರುತ್ತಾರೆ ಎಂದು ಸಿದ್ಧಗಂಗಾ ಮಠದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಪುಣ್ಯಸ್ಮರಣೆಗೆ ಆಗಮಿಸಿದ ಸಚಿವ ಜಗದೀಶ್ ಶೆಟ್ಟರ್
ಶ್ರೀಗಳ ಪುಣ್ಯಸ್ಮರಣೆಗೆ ತುಮಕೂರಿಗೆ ಸಚಿವ ಜಗದೀಶ್ ಶೆಟ್ಟರ್ ಆಗಮಿಸಿದರು.
ಆರೋಗ್ಯ ಸ್ಥಿರವಾಗಿದೆ: ಡಾ.ಮನೋಜ್
ವಿ.ಕೆ.ಶಶಿಕಲಾ ನಟರಾಜನ್ರವರ ಆರೋಗ್ಯ ಸ್ಥಿರವಾಗಿದೆ. ಐಸಿಯುನಲ್ಲೇ ಓಡಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ನಿರ್ದೇಶಕ ಡಾ.ಮನೋಜ್ ಸ್ಪಷ್ಟಪಡಿಸಿದ್ದಾರೆ.
ಸೇವಾ ಜೀವನ ಎಲ್ಲರಿಗೂ ಆದರ್ಶ: ಸಿದ್ಧಲಿಂಗ ಶ್ರೀ
ಡಾ.ಶಿವಕುಮಾರ ಶ್ರೀಗಳನ್ನು ಪಡೆದಿದ್ದು ನಮ್ಮೆಲ್ಲರ ಪುಣ್ಯ. ಶ್ರೀಗಳು ತನು, ಮನ, ಧನ ಸಮಾಜಕ್ಕೆ ಅರ್ಪಿಸಿದ್ದರು. ಸೇವಾ ಜೀವನ ಎಲ್ಲರಿಗೂ ಆದರ್ಶವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಸಾಕಾರಗೊಳಿಸಿದ್ದರು ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಶ್ರೀ ಹೇಳಿದ್ದಾರೆ.
ಸಚಿವ ಮಾಧುಸ್ವಾಮಿಗೆ ತೀವ್ರ ಹಿನ್ನೆಡೆ
ಸಣ್ಣ ನೀರಾವರಿ ಖಾತೆಯನ್ನು ವಾಪಸ್ ಪಡೆಯದಂತೆ ಸಿಎಂಗೆ ಮಾಧುಸ್ವಾಮಿ ಮನವಿ ಮಾಡಿದ್ದರೂ ಸಣ್ಣ ನೀರಾವರಿ ಖಾತೆಯನ್ನು ಮುಖ್ಯಮಂತ್ರಿ ವಾಪಸ್ ಪಡೆದಿದ್ದಾರೆ.
ಖಾತೆ ಹಂಚಿಕೆ ಸಿಎಂ ಪರಮೋಚ್ಛ ಅಧಿಕಾರ: ಕೆ.ಜಿ.ಬೋಪಯ್ಯ
ಸರ್ಕಾರಕ್ಕೆ, ಪಕ್ಷಕ್ಕೆ ಸಚಿವರು ಒಳ್ಳೆಯ ಹೆಸರು ತರಬೇಕು. ಖಾತೆ ಹಂಚಿಕೆ ಸಿಎಂ ಬಿಎಸ್‌ವೈ ಪರಮೋಚ್ಛ ಅಧಿಕಾರವಾಗಿದೆ. ಉತ್ತಮ ಆಡಳಿತಕ್ಕಾಗಿ ಈ ಬದಲಾವಣೆ ಮಾಡಿದ್ದಾರೆ ಎಂದು ಮಡಿಕೇರಿಯಲ್ಲಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಸಿಎಂ ಭಾಷಣ ಆರಂಭ
ತುಮಕೂರಿನ ಸಿದ್ದಗಂಗಾ ಮಠದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಭಾಷಣ ಆರಂಭಿಸಿದ್ದಾರೆ.
ಸಪ್ತ ಸಚಿವರಿಗೆ ಖಾತೆ ಫೈನಲ್
ನೂತನ ಏಳು ಸಚಿವರ ಖಾತೆ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದಿದೆ.
ಸಿಎಂ ಭೇಟಿ ಮಾಡಲು ವಲಸಿಗ ಸಚಿವರ ತೀರ್ಮಾನ
ಖಾತೆ ಹಂಚಿಕೆಗೆ ಸಚಿವರ ಅಸಮಾಧಾನ ಹಿನ್ನೆಲೆ ಸಿಎಂ ಭೇಟಿ ನೀಡಲು ವಲಸಿಗ ಸಚಿವರ ತೀರ್ಮಾನಿಸಿದ್ದಾರೆ.
ಖಾತೆ ಹಂಚಿಕೆಗೆ ಪ್ರತಿಕ್ರಿಯೆ ನೀಡಲ್ಲ: ಹೆಚ್ಡಿಕೆ
ಬಿಜೆಪಿಯಲ್ಲಿ ಖಾತೆ ಹಂಚಿಕೆ ಗೊಂದಲ ವಿಚಾರಕ್ಕೆ ತಿಕ್ರಿಯೆ ನೀಡಲು ಹೋಗಲ್ಲ. ಅದು ಬಿಜೆಪಿಯವರ ಆಂತರಿಕ ವಿಚಾರವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಜಾಮೀನು ಸಿಕ್ಕಿದ್ದು ಸಂತಸ ವಿಷಯ: ರಾಗಿಣಿ ದ್ವಿವೇದಿ ತಾಯಿ
ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರಾಗಿದ್ದು, ಸಂತಸದ ವಿಷಯವೆಂದು ಟಿವಿ9ಗೆ ನಟಿ ರಾಗಿಣಿ ದ್ವಿವೇದಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಗಳ ಪ್ರತಿಮೆಯ 3ಡಿ ಆನಾವರಣ ಮಾಡಿದ ಸಿಎಂ
ಶ್ರೀಗಳ ಹುಟ್ಟುರೂ ಮಾಗಡಿ ತಾಲೂಕಿನ ವೀರಾಪುರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಪ್ರತಿಮೆಯ 3ಡಿ ಯನ್ನು ರಾಜ್ಯದ ಮುಖ್ಯಮಂತ್ರಿ ಅನಾವರಣಗೊಳಿಸಿದರು.
ಶಶಿಕಲಾ ವಿಕ್ಟೋರಿಯಾಗೆ ಶಿಫ್ಟ್ ಸಾಧ್ಯತೆ
ಸಿಟಿ ಸ್ಕ್ಯಾನ್ಗಾಗಿ ಶಶಿಕಲಾರನ್ನು ಕೆಲವೇ ನಿಮಿಷಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆಯಿದೆ.
ಮುಂದುವರಿದ ಅಸಮಾಧನಿತ ಸಚಿವರ ಸಭೆ
ಖಾತೆ ಹಂಚಿಕೆ ಹಿನ್ನೆಲೆಗೆ ಸಂಬಂಧಿಸಿ ಅಸಮಾಧಾನಿತ ಸಚಿವರ ಚರ್ಚೆ ಸಚಿವ ಡಾ ಸುಧಾಕರ್ ಮನೆಯಲ್ಲಿ ಮುಂದುವರೆದಿದೆ.
ಕೊರೊನಾ ಲಸಿಕೆ ಪಡೆಯಲು ಮುಂದಾದ ಮೋದಿ
2ನೇ ಹಂತದ ಕೊರೊನಾ ಲಸಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಎಳನೇ ದಿನಕ್ಕೆ ಕಾಲಿಟ್ಟ ಕನಕಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಪಾದಯಾತ್ರೆ
ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಜನವರಿ 15 ರಿಂದ ಆರಂಭವಾದ ಪಾದಯಾತ್ರೆ ಎಳನೇ ದಿನಕ್ಕೆ ಕಾಲಿಟ್ಟಿದೆ.
ಜೆಡಿಎಸ್ ಪಕ್ಷ ಸೇರ್ಪಡೆಗೆ ಮನವೊಲಿಸಲು ಬಂದಿಲ್ಲ: ಹೆಚ್ಡಿಕೆ
ನನ್ನ ಕ್ಷೇತ್ರದಲ್ಲಿ ಪೋಸ್ಟಿಂಗ್ ವಿಚಾರವಾಗಿ ಚರ್ಚಿಸಿದ್ದೇವೆ. ಅದು ಬಿಟ್ಟು ಉಳಿದ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಒಳ್ಳೆಯ ಸ್ನೇಹಿತರು. ನಾವು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ ಹೇಳಿದರು.
140 ದಿನಗಳು ರಾಗಿಣಿ ಕಸ್ಟಡಿಯಲ್ಲಿದ್ದಾರೆ: ವಕೀಲರ ವಾದ
ರಾಗಿಣಿ 140 ದಿನಗಳು ವಿಚಾರಣೆ ಎದುರಿಸಿದ್ದಾರೆ. ಸಹ ಆರೋಪಿಗಳಿಗೆ ಬೇಲ್ ಸಿಕ್ಕಿದೆ. ರಾಗಿಣಿಗೂ ಬೇಲ್ ನೀಡುವಂತೆ ಪರ ವಕೀಲರಿಂದ ಕೇಳಿಬಂದಿದೆ.
ಡಿಸಿಎಂ ಭೇಟಿ ಮಾಡಿದ ಸ್ವಾಮೀಜಿಗಳ ನಿಯೋಗ
ಬಸವ ಕಲ್ಯಾಣದಿಂದ ಬಂದಿರುವ ಸ್ವಾಮೀಜಿಗಳ ನಿಯೋಗ ಡಿಸಿಎಂ ಲಕ್ಷ್ಮಣ ಸವದಿಯ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದೆ.
ಸೌಮ್ಯಾ ರೆಡ್ಡಿ ವಿರುದ್ಧ ದೂರು ನೀಡಲು ಮುಂದಾದ ಬಿಜೆಪಿ
ನಿನ್ನೆ ರಾಜಭವನ ಮುಂಭಾಗ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಇಂದು ಮಧ್ಯಾಹ್ನ ಗೃಹ ಸಚಿವರಿಗೆ ದೂರು ನೀಡಲು ಬಿಜೆಪಿ ಮುಂದಾಗಿದೆ.
ಬಸವರಾಜ ಬೊಮ್ಮಾಯಿ ಭೇಟಿಯಾದ ಹೆಚ್ಡಿಕೆ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿಯಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅರ್ಧ ಗಂಟೆ ಕಾಲ ಚರ್ಚೆ ನಡೆಸಿದರು.
ರಾಗಿಣಿ ಪ್ರಕರಣ ವಿಚಾರಣೆ ಆರಂಭ
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿ ರಾಗಿಣಿ ದ್ವಿವೇದಿ ಪರ ವಕೀಲರ ವಾದ ಆರಂಭವಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ
ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ ಹಿನ್ನೆಲೆ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಿಎಂ ಯಡಿಯೂರಪ್ಪ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ತಮಿಳುನಾಡು ಜನತೆ ಆತಂಕ ಪಡುವ ಆಗತ್ಯ ಇಲ್ಲ: ದಿನಕರನ್
ಶಶಿಕಲಾ ಆರೋಗ್ಯವಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ. ಬೇರೆ ಕಡೆ ಶಿಫ್ಟ್ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಹೀಗಾಗಿ ತಮಿಳುನಾಡು ಜನತೆ ಆತಂಕ ಪಡುವ ಆಗತ್ಯವಿಲ್ಲ ಎಂದು ತಮಿಳುನಾಡು ಶಾಸಕ ದಿನಕರನ್ ಹೇಳಿದ್ದಾರೆ.
ಖಾತೆ ಬದಲಾವಣೆ: ಪ್ರತಿಕ್ರಿಯೆಗೆ ಸಿಎಂ ನಕಾರ
ಸಚಿವರ ಖಾತೆ ಬದಲಾವಣೆ ಬಗ್ಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಖಾತೆ ಮರುಹಂಚಿಕೆಗೆ ಸಚಿವ ನಾರಾಯಣ ಗೌಡ ಬೇಸರ
ಪೌರಾಡಳಿತ, ತೋಟಗಾರಿಕೆ ಖಾತೆ ಬದಲಾವಣೆ ಹಿನ್ನೆಲೆಗೆ ಸಚಿವ ನಾರಾಯಣ ಗೌಡ ಬೇಸರ ವ್ಯಕ್ತಪಡಿಸಿ ಸಚಿವ ಕೆ.ಸುಧಾಕರ್ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿದರು.
ಬೌರಿಂಗ್ ಆಸ್ಪತ್ರೆಯಲ್ಲಿ ಬಿಗಿಗೊಂಡ ಭದ್ರತೆ
ಶಶಿಕಲಾರನ್ನು ಭೇಟಿಯಾಗಲು ಪಾಸ್ ಇಲ್ಲದೇ ಬಂದವರಿಗೆ ಪೊಲೀಸರು ವಾಪಾಸು ಕಳುಹಿಸುತ್ತಿದ್ದಾರೆ.
ಎರಡನೇ ಹಂತದಲ್ಲಿ ರಾಜಕಾರಣಿಗಳಿಗೆ ಕೊರೊನಾ ಲಸಿಕೆ
ಫ್ರಂಟ್ ಲೈನ್ ವಾರಿಯರ್ಸ್ ಬಳಿಕ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ 50 ವರ್ಷ ದಾಟಿದ ರಾಜಕಾರಣಿಗಳಿಗೆ 2ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ ದೊರಕಿದೆ.
ಡಾ.ಸುಧಾಕರ್ ನಿವಾಸದಲ್ಲಿ ವಲಸಿಗ ಸಚಿವರ ಸಭೆ
ಕಳೆದ 1 ಗಂಟೆಯಿಂದ ಖಾತೆ ಮರುಹಂಚಿಕೆ ವಿಚಾರವಾಗಿ ವಲಸಿಗ ಸಚಿವರು ಸಚಿವ ಡಾ.ಸುಧಾಕರ್ ನಿವಾಸದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನಮ್ಮ ಪಾತ್ರ ಪ್ರಮುಖವಾಗಿದೆ. ಆದರೆ ನಮ್ಮ ಖಾತೆಯನ್ನು ಕಿತ್ತುಕೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಕೀಲರಿಗೆ ಅವಕಾಶ ನೀಡದ ಪೊಲೀಸರು
ಶಶಿಕಲಾ ನಟರಾಜನ್ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದು, ಭೇಟಿಗೆ ಆಗಮಿಸಿದ ಪರ ವಕೀಲರಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಕುರಿ ಹೊತ್ತೊಯ್ದಿರುವ ಚಿರತೆ
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಿಡಗಲು ಗ್ರಾಮದ ಬಿಳಿತಾಯಮ್ಮ ಎಂಬುವವರಿಗೆ ಸೇರಿದ ಕುರಿಯನ್ನು ಚಿರತೆ ಹೊತ್ತೊಯ್ದಿದೆ.
ಡಿಸಿಎಂ ಮಠಕ್ಕೆ ಆಗಮನ
ಸಿಎಂ ಯಡಿಯೂರಪ್ಪರವರ ಜೊತೆಗೆ ಡಿಸಿಎಂ ಡಾ.ಅಶ್ವಥ್ ನಾರಯಣ್ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ.
24 ಗಂಟೆಯಲ್ಲಿ 15,223 ಜನರಿಗೆ ಕೊರೊನಾ
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,06,10,883ಕ್ಕೇರಿದ್ದು, ಕಳೆದ 24 ಗಂಟೆಯಲ್ಲಿ 15,223 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. 24 ಗಂಟೆಯಲ್ಲಿ ಕೊರೊನಾಗೆ 151 ಜನರು ಬಲಿಯಾಗಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ
ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆಗೆ ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ಧಗಂಗಾ ಮಠಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಿದರು.
ರಿಸೈನ್ ಮಾಡುವ ಯೋಚನೆ ಇಲ್ಲ: ಜೆ.ಸಿ.ಮಾಧುಸ್ವಾಮಿ
ಖಾತೆ ಬದಲಾವಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ರಿಸೈನ್ ಮಾಡುವ ಯೋಚನೆ ಇಲ್ಲಾ. ಮಾಹಿತಿ ಬಂದ ನಂತರ ಮಾತನಾಡುತ್ತೇನೆ ಎಂದು ಟಿವಿ9ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನಿಂದ ಅಭಿಮಾನಿಗಳು ಆಗಮನ
ಶಶಿಕಲಾಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಪರ ವಕೀಲ ಮತ್ತು ತಮಿಳುನಾಡಿನಿಂದ ಅಭಿಮಾನಿಗಳು ಆಗಮಿಸಿದ್ದಾರೆ.
ಧರಣಿ ನಿರತ ರೈತರಿಂದ ಪೊಲೀಸರ ಭೇಟಿ
ಜನವರಿ 26ರಂದು ರೈತರ ಟ್ರ್ಯಾಕ್ಟರ್ ಪರೇಡ್ ವಿಚಾರಕ್ಕೆ ಸಂಬಂಧಿಸಿ ಬೆಳಗ್ಗೆ 11ಕ್ಕೆ ಧರಣಿ ನಿರತ ರೈತರು ಪೊಲೀಸರನ್ನು ಭೇಟಿ ಮಾಡಿ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡಲು ಮನವಿ ಸಲ್ಲಿಸಲಿದ್ದಾರೆ.
ಖಾತೆ ಬದಲಾವಣೆ ಹಿನ್ನೆಲೆ ಮಾಧುಸ್ವಾಮಿ ಅಸಮಾಧಾನ
ಖಾತೆ ಬದಲಾವಣೆ ಹಿನ್ನೆಲೆ ಅಸಮಾಧಾನಗೊಂಡಿರುವ ಮಾಧುಸ್ವಾಮಿ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೊತೆಗೆ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆಗೆ ಗೈರಾಗುವ ಸಾಧ್ಯತೆಯಿದೆ.
ಮಾರ್ಗವಾಗಿ ತುಮಕೂರಿಗೆ ತೆರಳಿದ ಸಿಎಂ ಬಿಎಸ್‌ವೈ
ಸಿದ್ದಗಂಗಾ ಶ್ರೀ ಶಿವಕುಮಾರ ಶ್ರೀ ಗಳ ಎರಡನೇ ಪುಣ್ಯ ಸ್ಮರಣೆ ಹಿನ್ನೆಲೆ ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ತುಮಕೂರಿಗೆ ತೆರಳಿದರು.
ಬೌರಿಂಗ್ ಆಸ್ಪತ್ರೆ ಬಳಿ ಶಶಿಕಲಾ ಬೆಂಬಲಿಗ ಆಕ್ರೋಶ
ನಿನ್ನೆ ಸಂಜೆಯಿಂದ ಇದುವರೆಗೂ ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ. ಯಾರೂ ರೆಸ್ಪಾನ್ಸ್ ಮಾಡುತ್ತಿಲ್ಲ. ಉಸಿರಾಟದ ಸಮಸ್ಯೆ ಇದೆ. ಕೂಡಲೇ ಚಿಕಿತ್ಸೆ ಕೊಡಬೇಕು. ಆದರೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬೌರಿಂಗ್ ಆಸ್ಪತ್ರೆ ಬಳಿ ಶಶಿಕಲಾ ಬೆಂಬಲಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಸಿಎಂ ಪುಷ್ಪ ನಮನ
ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ ಹಿನ್ನೆಲೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಇರುವ ಕಾರ್ಯಕ್ರಮಕ್ಕೆ ಶ್ರೀಗಳ ಭಾವಚಿತ್ರಕ್ಕೆ ಸಿಎಂ ಪುಷ್ಪ ನಮನ ಸಲ್ಲಿಸಿದರು. ನಂತರ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಶಿಕಲಾಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಉಸಿರಾಟದ ಸಮಸ್ಯೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾ ನಟರಾಜನ್‌ಗೆ ಚಿಕಿತ್ಸೆ ಮುಂದುವರೆದಿದೆ.
2ನೇ ಪುಣ್ಯಸ್ಮರಣೆಗೆ ತೆರಳಿದ ಬಿಎಸ್‌ವೈ
ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ತುಮಕೂರಿಗೆ ತೆರಳಿದರು.
ಮಾಧ್ಯಮ, ಮಾನವ ಹಕ್ಕುಗಳ ಹೆಸರಲ್ಲಿ ಬ್ಲ್ಯಾಕ್‌ಮೇಲ್
ಮೂವರು ಯುವತಿಯರು ವೈದ್ಯನಿಗೆ ಮಾಧ್ಯಮ, ಮಾನವ ಹಕ್ಕುಗಳ ಹೆಸರಲ್ಲಿ ಬ್ಲ್ಯಾಕ್‌ಮೇಲ್ ಮಾಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಮೈಸೂರಿನ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈನ ಹಲವೆಡೆ ಎನ್‌ಸಿಬಿ ಅಧಿಕಾರಿಗಳ ದಾಳಿ
ಮುಂಬೈನ ಹಲವೆಡೆ ಎನ್‌ಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು, ಭೂಗತ ಪಾತಕಿ ದಾವೂದ್ ಆಪ್ತ ಚಿಂಕೂ ಪಥಾನ್ ವಶಕ್ಕೆ ಪಡೆದು ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್, ಶಸ್ತ್ರಾಸ್ತ್ರ, ಹಣ ಜಪ್ತಿ ಮಾಡಿದ್ದಾರೆ.
ಎಂಟಿಬಿ ನಾಗರಾಜ್ ಜೊತೆ ಸಿಎಂ ಚರ್ಚೆ
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುಮಾರು ಒಂದು ಗಂಟೆ ಕಾಲ ಎಂಟಿಬಿ ನಾಗರಾಜ್ ಜೊತೆ ಸಿಎಂ ಚರ್ಚೆ ನಡೆಸಿ ಮೈಸೂರು ಬ್ಯಾಂಕ್ ಬಳಿ ಕಾರ್ಯಕ್ರಮವೊಂದಕ್ಕೆ ತೆರಳಿದರು.
ಸಿಎಂ ನಿವಾಸಕ್ಕೆ ಆಗಮಿಸಿದ ಸಚಿವ ಪ್ರಭು ಚೌಹಾನ್
ಪ್ರಭು ಚೌಹಾನ್ ಬಳಿ ಇದ್ದ ಎರಡು ಖಾತೆಯಿಂದ ಒಂದು ಖಾತೆ ವಾಪಸು ಪಡೆಯುವ ಸಾಧ್ಯತೆಯಿದ್ದು, ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ.
ಡಾ.ಕೆ.ಸುಧಾಕರ್ ನಿವಾಸಕ್ಕೆ ಸಚಿವರ ಆಗಮನ
ರಾಜ್ಯದಲ್ಲಿ ಸಚಿವರಿಗೆ ಖಾತೆ ಮರುಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು ಡಾ.ಕೆ.ಸುಧಾಕರ್ ನಿವಾಸಕ್ಕೆ ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್ ಆಗಮಿಸಿದ್ದಾರೆ.
ಕೆ.ಸುಧಾಕರ್ ಖಾತೆ ಬದಲಾವಣೆಯಾದರೆ ಆಕ್ಷೇಪ ಸಾಧ್ಯತೆ
ವೈದ್ಯಕೀಯ ಖಾತೆಯಲ್ಲಿ ದೈನಂದಿನ ಕೆಲಸಗಳು ಹೆಚ್ಚಿರುವ ಹಿನ್ನೆಲೆ ಇಬ್ಬರಿಗೆ ಖಾತೆ ಹಂಚುವುದಕ್ಕೆ ಸಿಎಂ ನಿರ್ಧಾರಿಸಿದ್ದು, ಒಂದು ವೇಳೆ ಖಾತೆ ಬದಲಾದರೆ ಸುಧಾಕರ್ ಸಿಎಂ ಭೇಟಿಯಾಗಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಯಿದೆ.
ದೇವಾಲಯದಲ್ಲಿ ನಿಗೂಢ ಶಬ್ದ: ಆತಂಕಗೊಂಡ ಗ್ರಾಮಸ್ಥರು
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದ ಪಟ್ಟಲದಮ್ಮ ದೇವಾಲಯದಲ್ಲಿ ನಿಗೂಢ ಶಬ್ದ ಕೇಳಿಬಂದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಳೆದ 11 ವರ್ಷಗಳಿಂದ ಹಬ್ಬ ನಿಲ್ಲಿಸಿರುವ ಹಿನ್ನೆಲೆ ದೇವಿ ಮುನಿಸಿಕೊಂಡಿದ್ದಾಳೆಂದು ಜನರು ನಂಬಿದ್ದಾರೆ.
ಸಿಲಿಂಡರ್ ಸ್ಫೋಟ: 13ಕ್ಕೂ ಹೆಚ್ಚು ಜನರಿಗೆ ಗಾಯ
ಸಿಲಿಂಡರ್ ಸ್ಫೋಟವಾಗಿದ್ದು, ಪಶ್ಚಿಮಬಂಗಾಳ ಮೂಲದ 13ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯವಾದ ಘಟನೆ ಹೈದರಾಬಾದ್‌ನ ಹಳೆಬಸ್ತಿಯಲ್ಲಿ ತಡರಾತ್ರಿ ನಡೆದಿದೆ. ಗಾಯಾಳುಗಳಿಗೆ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳ್ಳಿ ರಥದಲ್ಲಿ ಶ್ರೀಗಳ ಭಾವಚಿತ್ರವಿಟ್ಟು ಮೆರವಣಿಗೆ
ಲಿಂಗೈಕ್ಯ ಡಾ.ಶಿವಕುಮಾರಶ್ರೀಗಳ 2ನೇ ಪುಣ್ಯಸ್ಮರಣೆ ಹಿನ್ನೆಲೆ ಬೆಳ್ಳಿ ರಥದಲ್ಲಿ ಶ್ರೀಗಳ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸಾಗಿದ ವಿವಿಧ ಕಲಾ ತಂಡ, ಮಠಾಧೀಶರು, ಭಕ್ತರು, ಮಠದ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಪ್ರಸಕ್ತ ವರ್ಷ SSLC ಪರೀಕ್ಷೆಗೆ ಕನಿಷ್ಠ ಹಾಜರಾತಿ ಇಲ್ಲ
SSLC ಪರೀಕ್ಷೆಗೆ ಬರೆಯುವುದಕ್ಕೆ ಪ್ರತಿವರ್ಷ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಪ್ರಸಕ್ತ ವರ್ಷ ಹಾಜರಾತಿಗೆ ವಿನಾಯಿತಿ ದೊರಕ್ಕಿದ್ದು, ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಸಿಕ್ಕಿದೆ.
ಪೌರ ಕಾರ್ಮಿಕರ ಅಮಾನತು
ಕೋಲಾರ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ವೈಫಲ್ಯ ಕಂಡು ಬಂದ ಕಾರಣ ಇಬ್ಬರು ಪೌರ ಕಾರ್ಮಿಕರನ್ನು ಅಮಾನತು ಮಾಡಿ ಡಿಸಿ ಆದೇಶ ಹೊರಡಿಸಿದೆ.
ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜಭವನಕ್ಕೆ ರವಾನೆ
ಏಳು ಹೊಸ ಸಚಿವರಿಗೆ ಖಾತೆ ಹಂಚಿಕೆಯ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ.
ಹ್ಯಾಕಿಂಗ್ ಶ್ರೀಕೃಷ್ಣನ ವಿಚಾರಣೆ ಆರಂಭಿಸಿದ ಸಿಐಡಿ
ಈವರೆಗೆ ಹ್ಯಾಕಿಂಗ್ ಶ್ರೀಕೃಷ್ಣನ ವಿಚಾರಣೆಯನ್ನು ಸಿಸಿಬಿ ತಂಡ ನಡೆಸಿತ್ತು. ಇದೀಗ ವಿಚಾರಣೆಯನ್ನು ಸಿಐಡಿ ಚುರುಕುಗೊಳಿಸಿದೆ.
ಪುಣ್ಯಸ್ಮರಣೆಗೆ ಪ್ರಸಾದ ವ್ಯವಸ್ಥೆ
ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿಯವರ ಎರಡನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಕಾರ್ಯಕರ್ತಕ್ಕೆ ಬಂದಂತಂಹ ಸುಮಾರು 50 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ: ಪೊಲೀಸರಿಂದ ವಾಕಥಾನ್
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಿನ್ನೆಲೆ ಬಳ್ಳಾರಿ ನಗರದಲ್ಲಿ ಎಸ್ಪಿ ಕಚೇರಿಯಿಂದ ಮೋತಿ ವೃತ್ತದವರೆಗೆ ರಸ್ತೆ ಸುರಕ್ಷತೆ ಬಗ್ಗೆ ಪೊಲೀಸರು ಪ್ರತಿಜ್ಞಾವಿಧಿ ಬೋಧಿಸಿದರು.
ಸಿಎಂ ನಿವಾಸಕ್ಕೆ ಸಚಿವ ಎಂಟಿಬಿ ನಾಗರಾಜ್ ಭೇಟಿ
ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಹಿನ್ನೆಲೆ ವಿಚಾರ ನಡೆಸಲು ಸಿಎಂ ನಿವಾಸಕ್ಕೆ ಸಚಿವ ಎಂಟಿಬಿ ನಾಗರಾಜ್ ಭೇಟಿ ನೀಡಿದ್ದಾರೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ದಾಖಲೆ
ಕೊವಿಡ್ ಹೊಡೆತದ ನಡುವೆ ಭಾರತೀಯ ಷೇರು ಮಾರುಕಟ್ಟೆ ದಾಖಲೆ ಬರೆದಿದ್ದು, ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟಿದೆ.
ಪ್ಯಾರಿಸ್ ಒಪ್ಪಂದಕ್ಕೆ ಮರು ಸೇರ್ಪಡೆ ಘೋಷಣೆ
ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ರಿಂದ ಹವಾಮಾನ ಬದಲಾವಣೆಗೆ ಸಂಬಂಧಿಸಿ ಪ್ಯಾರಿಸ್ ಒಪ್ಪಂದಕ್ಕೆ ಘೋಷಣೆ ಕೇಳಿಬಂದಿದೆ. 2017ರಲ್ಲಿ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದದಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದರು.
ಇಂದು ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ
ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ನಲ್ಲಿ ಬಂಧನಕ್ಕೊಳಗಾದ ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆಯು ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತದೆ.
ಡೊನಾಲ್ಡ್ ಟ್ರಂಪ್ ಆಪ್ತರಿಗೆ ಚೀನಾ ನಿಷೇಧ
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ ಹಿನ್ನೆಲೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರಿಗೆ , ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಪಾಂಪಿಯೋ ಸೇರಿ 28 ಜನರ ಮೇಲೆ ಚೀನಾ ಸರ್ಕಾರ ನಿಷೇಧ ಹೇರಿದೆ.
ದರೋಡೆ ಕೇಸ್ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ದರೋಡೆ ಕೇಸ್ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಮಧ್ಯಾಹ್ನ 12ಕ್ಕೆ ಶಾಸಕ ಬೆಲ್ಲದ್ ಸುದ್ದಿಗೋಷ್ಠಿ
ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡಿರುವ ಶಾಸಕ ಅರವಿಂದ ಬೆಲ್ಲದ್ ಮಧ್ಯಾಹ್ನ 12ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ಸಿಎಂ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದ ಬೆಲ್ಲದ್ ಇಂದಿನ ಸುದ್ದಿಗೋಷ್ಠಿಯಲ್ಲಿ ಕುತೂಹಲ ಮೂಡಿಸಿದೆ.
ಭೂಕಂಪ ಆತಂಕ: ಮನೆಯಿಂದ ಹೊರಬಂದ ಜನ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಬೆಳಗಿನ ಜಾವ 3.50 & 4 ಗಂಟೆ ವೇಳೆಗೆ ಕೇಳಿಸಿದ ಭಾರಿ ಸದ್ದುವಿನಿಂದ ಭೂಕಂಪದ ಅನುಭವವಾಗಿ ಜನರು ಆತಂಕಗೊಳಗಾಗಿದ್ದಾರೆ.
5 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ
ಗ್ರಾಮದ ಸಮಗ್ರ ಯೋಜನೆಯ 3ಡಿ ಚಿತ್ರವನ್ನು ಅನಾವರಣಗೊಳ್ಳುತ್ತದೆ. ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆಯಿದ್ದು, ಎಲ್ಲರೂ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಲು ಮನವಿ ಮಾಡಲಾಗಿದೆ.
2ನೇ ಪುಣ್ಯಸ್ಮರಣೆ: ಸಿಎಂ ಭೇಟಿ
ಬೆಳಗ್ಗೆ 11 ಗಂಟೆ ಹೊತ್ತಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಠಕ್ಕೆ ಆಗಮಿಸಲಿದ್ದಾರೆ.
ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ
ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ ಹಿನ್ನೆಲೆ ಸಿದ್ಧಲಿಂಗ ಶ್ರೀ ನೇತೃತ್ವದಲ್ಲಿ ಬೆಳಗ್ಗೆ 8ಕ್ಕೆ ಗದ್ದುಗೆಯಿಂದ ಬೆಳಗ್ಗೆ 9 ಗಂಟೆವರೆಗೆ ಶ್ರೀಗಳ ಭಾವಚಿತ್ರ ಹಿಡಿದು ಮೆರವಣಿಗೆ ಮಾಡಲಾಯಿತು.
2 ಖಾತೆಗಳಿಗಾಗಿ ಹಲವು ಸಚಿವರ ನಡುವೆ ಪೈಪೋಟಿ
ಇಂಧನ, ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬಾರಿ ಬೇಡಿಕೆಯಿದ್ದು, ಹಲವು ಸಚಿವರ ನಡುವೆ ಪೈಪೋಟಿ ನಡೆಯುತ್ತಿದೆ.
ನೂತನ ಸಚಿವರಿಗೆ ಖಾತೆ ಹಂಚಿಕೆ
ನೂತನ 7 ಸಚಿವರಿಗೆ ಇಂದು ಬೆಳಗ್ಗೆ ರಾಜ್ಯ ಮುಖ್ಯಮಂತ್ರಿ ಖಾತೆ ಹಂಚಿಕೆ ಮಾಡಲಿದ್ದಾರೆ.
Published On - Jan 21,2021 7:51 PM