ಗುಳೆ ಹೋಗುವವರ ಜೀವನ ನೀರ ಮೇಲಿನ ಗುಳ್ಳೆ: ಘೋಷಣೆಯಾದ ಯೋಜನೆಗಳು ಜಾರಿಯಾಗಲೇ ಇಲ್ಲ

’ಇಲ್ಲಿ ಕೆಲಸ ಸಿಗದ ಕಾರಣ ನಮ್ಮ ಸಮಾಜದ ಜನರು ನೆರೆ ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಇಲ್ಲಿಯೇ ಕೆಲಸ ಸಿಕ್ಕರೆ ನಾವೆಲ್ಲಿಯೂ ಹೋಗಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಮ್ಮೂರಿಗೆ ಬಂದು ಅದ್ಯಾವುದೋ ಯೋಜನೆ ಹಾಕಿ ಕೆಲಸಕೊಡೋದಾಗಿ ಹೇಳಿದ್ದರು. ಯಡಿಯೂರಪ್ಪ ಅದನ್ನು ಮಾಡಿಕೊಡಬೇಕು‘.

ಗುಳೆ ಹೋಗುವವರ ಜೀವನ ನೀರ ಮೇಲಿನ ಗುಳ್ಳೆ: ಘೋಷಣೆಯಾದ ಯೋಜನೆಗಳು ಜಾರಿಯಾಗಲೇ ಇಲ್ಲ
ಲಂಬಾಣಿಸ ಸಮುದಾಯದ ಮಹಿಳೆಯರು
Follow us
Skanda
| Updated By: ಆಯೇಷಾ ಬಾನು

Updated on: Jan 22, 2021 | 7:04 AM

ಬಸವನಾಡು, ಗುಮ್ಮಟ ನಗರಿ, ಸ್ಮಾರಕಗಳ ಬೀಡು ಎಂದು ಖ್ಯಾತಿಗೆ ಪಾತ್ರವಾದ ಜಿಲ್ಲೆ ವಿಜಯಪುರ. ಬಸವಣ್ಣ ಹಾಗೂ ಇತರೆ ಶರಣರ ತತ್ವಗಳನ್ನು, ಐತಿಹಾಸಿಕತೆಯನ್ನು ಮೈಗೂಡಿಸಿಕೊಂಡ ಜಿಲ್ಲೆಯನ್ನು ಆದಿಲ್ ಶಾಹಿಗಳು ಸಾಮ್ರಾಜ್ಯವನ್ನಾಗಿಸಿ ಆಳಿದ್ದರು. ಆದರೆ, ಇದೇ ವಿಜಯಪುರಕ್ಕೆ ಬರದನಾಡು, ಗುಳೆ ಹೋಗುವವರ ಬೀಡು ಎಂಬ ಅಪಖ್ಯಾತಿಯೂ ಇದೆ.

ಅಪಾರ ಪ್ರಮಾಣದ ಭೂ ಸಂಪತ್ತಿದ್ದರೂ ಇಲ್ಲಿನ ಜನರು ಗುಳೆಗೆ ತೆರಳುವುದು ಸಾಮಾನ್ಯ. ಅರಣ್ಯೀಕರಣ ಇಲ್ಲದ ಕಾರಣ ಮಳೆಯ ಕೊರತೆ ಹಲವು ದಶಕಗಳಿಂದಲೂ ಇದೆ. ಜಿಲ್ಲೆಯಲ್ಲಿ ಮೂರು ನದಿಗಳಿದ್ದರೂ ಜನರಿಗೆ ನೀರಿನ ಸಮಸ್ಯೆ ಇದ್ದೇ ಇದೆ. ಸದ್ಯ ಜಿಲ್ಲೆಯಲ್ಲಿ ಹಲವಾರು ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡು ಜನರ ಭೂಮಿಗೆ ನೀರು ಸಿಗುತ್ತಿದೆ. ಆದರೆ ಗುಳೆಗೆ ತೆರಳುವವರ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ.

ಗುಳೆಗಾಗಿ ಎಲ್ಲೆಲ್ಲಿ ಹೋಗುತ್ತಾರೆ? ಗುಳೆಗೆ ತೆರಳುವವರಲ್ಲಿ ಹೆಚ್ಚಿನವರು ಬಂಜಾರಾ ಸಮುದಾಯದ ಜನರು. ಲಂಬಾಣಿ ತಾಂಡಾಗಳಲ್ಲಿ ವಾಸ ಮಾಡುವ ಜನರು ಹೆಚ್ಚಾಗಿ ಗುಳೆಯತ್ತ ಮುಖ ಮಾಡುತ್ತಾರೆ. ಕಾರಣ ಲಂಬಾಣಿಗರಿಗೆ ಹೆಚ್ಚಿನ ಭೂಮಿ ಇಲ್ಲ. ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದರೂ ವರ್ಷ ಪೂರ್ತಿ ಕೈಗೆ ಕೆಲಸ ಸಿಗಲ್ಲ. ಕೆಲಸ ಸಿಕ್ಕರೂ ಸಂಬಳ ಕಡಿಮೆಯಿದೆ. ಇವೆಲ್ಲಾ ಕಾರಣಗಳಿಂದ ಹೆಚ್ಚಿನ ಸಂಬಳದ ಆಸೆ ಹಾಗೂ ನಿರಂತರ ಕೆಲಸ ಸಿಗುತ್ತದೆ ಎಂದು ಜಿಲ್ಲೆಯ ಲಂಬಾಣಿ ಸಮಾಜದವರು ನೆರೆ ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಆರು ತಿಂಗಳು ಜಿಲ್ಲೆಯಲ್ಲಿದ್ದರೆ ಇನ್ನಾರು ತಿಂಗಳು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ ಹಾಗೂ ಆಂದ್ರಪ್ರದೇಶಗಳಲ್ಲಿ ಕೆಲಸ ಅರಸಿ ಅಲ್ಲಿಯೇ ಠಿಕಾಣಿ ಹೂಡುತ್ತಾರೆ.

ಕೆಲಸ ಅರಸಿ ಹೋಗಿದ್ದವರು ಜೀವ ಕಳೆದುಕೊಂಡರು ಗುಳೆಗೆ ತೆರಳಿದವರ ಜೀವನ ಅಲ್ಲೇನು ಸುಖಕರವಾಗಿರಲ್ಲ. ದಿನನಿತ್ಯ ಕಷ್ಟಪಟ್ಟು ದುಡಿದರೆ ಮಾತ್ರ ನಾಲ್ಕು ಕಾಸು ಸಂಪಾದನೆ ಮಾಡಬಹುದು. ಇಲ್ಲವಾದರೆ ಊಟಕ್ಕೂ ತತ್ವಾರ ಪಡುವಂತಾಗುತ್ತದೆ. ಇಷ್ಟರ ನಡುವೆ ಅದೆಷ್ಟೋ ಕಾರ್ಮಿಕರು ಜೀವ ಕಳೆದುಕೊಂಡು ಹೆಣವಾಗಿ ತಮ್ಮೂರಿಗೆ ಬಂದ ಉದಾಹರಣೆಗಳಿವೆ. ಕಳೆದ 2018 ರಲ್ಲಿ ಇಂಥದ್ದೇ ಒಂದು ದುರ್ಘಟನೆ ಸಂಭವಿಸಿತ್ತು.

ವಿಜಯಪುರ ತಾಲೂಕಿನ ಮದಭಾವಿ ತಾಂಡಾದ 40 ಕ್ಕೂ ಆಧಿಕ ಜನರು ನೆರೆಯ ಮಹಾರಾಷ್ಟ್ರಕ್ಕೆ ಗುಳೆಗೆ ತೆರಳಿದ್ದರು. ಮಹಾರಾಷ್ಟ್ರದಲ್ಲಿ ಕೆಲಸಕ್ಕಾಗಿ ಕ್ಯಾಂಟರ್​ನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಪಘಾತವಾಗಿ 17 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇತರರಿಗೂ ಗಂಭೀರ ಗಾಯಗಳಾಗಿದ್ದವು.

ಪರಿಹಾರ ನೀಡಿದ ಸರ್ಕಾರ ಕೊಟ್ಟ ಭರವಸೆ ಏನು? ಕೆಲಸ ಅರಸಿ ಗುಳೆಗೆ ತೆರಳಿದ್ದ ಮದಭಾವಿ ತಾಂಡಾದ 17 ಜನರು ಮೃತಪಟ್ಟಾಗ ಅವರನ್ನು ನಂಬಿಕೊಂಡವರೆಲ್ಲರೂ ಅನಾಥರಾಗಿದ್ದರು. ಸರ್ಕಾರ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವೇನೋ ನೀಡಿತು. ಆದರೆ ಗುಳೆಗೆ ತೆರಳುವವರಿಗೆ ಶಾಶ್ವತ ಪರಿಹಾರದ ಅವಶ್ಯಕತೆಯಿತ್ತು. ಆಗ ರಾಜ್ಯದ ಚುಕ್ಕಾಣಿ ಹಿಡಿದು ಆಧಿಕಾರ ನಡೆಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ 2018 ರ ಡಿಸೆಂಬರ್ 25 ರಂದು ಅಪಘಾತದಲ್ಲಿ ಮೃತಪಟ್ಟ ಮದಭಾವಿ ತಾಂಡಾದ ಜನರ ಮನೆಗೆ ಭೇಟಿ ನೀಡಿದ್ದರು. ಮೃತಪಟ್ಟವರಿಗೆ ಸರ್ಕಾರದ ವತಿಯಿಂದ ಪರಿಹಾರದ ಚೆಕ್ ನೀಡಿ ಸಾಂತ್ವನ ಹೇಳಿದ್ದರು.

ಬರೀ ಪರಹಾರ ಹಣದ ಚೆಕ್ ನೀಡದೇ ಜಿಲ್ಲೆಯ ಜನರು ಗುಳೆಗೆ ಬೇರೆಡೆ ತೆರಳದಂತೆ ಸ್ಥಳಿಯವಾಗಿ ಉದ್ಯೋಗ ನೀಡುವ ಯೋಜನೆಯನ್ನು ಸರ್ಕಾರ ಜಾರಿ ಮಾಡುತ್ತದೆ ಎಂದು ಘೋಷಣೆ ಮಾಡಿದ್ದರು. ಇದಕ್ಕಾಗಿ ಪೈಲೆಟ್ ಪ್ರಾಜೆಕ್ಟ್ ಜಾರಿ ಮಾಡಲಾಗುತ್ತದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಲೆಟ್ ಪ್ರಾಜೆಕ್ಟ್ ಆರಂಭಿಸಲಾಗುತ್ತದೆ. ಬಂಜಾರಾ ಸಮುದಾಯದ ಯುವಕ, ಯುವತಿಯರು,ಮಹಿಳೆಯರು, ಪುರುಷರಿಗೆ ಇಲ್ಲಿ ಉದ್ಯೋಗ ನೀಡಲಾಗುತ್ತದೆ. ಸಾಂಫ್ರದಾಯಿಕ ಕಲೆ, ಕುಸುರಿ ಕಲೆ, ಗೃಹಪಯೋಗಿ ವಸ್ತುಗಳ ಬಳಕೆ ಸೇರಿದಂತೆ ಇತರೆ ಉತ್ಪನ್ನಗಳನ್ನು ತಯಾರು ಮಾಡಿ ಪೂರೈಕೆ ಹಾಗೂ ಮಾರಾಟ ಮಾಡುವ ಮೂಲಕ ಕೆಲಸ ನೀಡುವ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಕಮರಿದ ಕನಸು.. ಜಾರಿಯಾಗದ ಯೋಜನೆ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಯಶಸ್ವಿಯಾದರೆ ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಯೋಜನೆ ಹಾಕಿಕೊಂಡು ಗುಳೆ ಸಮಸ್ಯೆಯನ್ನು ಬಗೆ ಹರಿಸಲು ಚಿಂತಿಸಿದ್ದರು. ಕುಮಾರಸ್ವಾಮಿ ಅವರ ಈ ಯೋಜನೆ ಜಿಲ್ಲೆಯ ಬಂಜಾರಾ ಸಮುದಾಯದಲ್ಲಿ ಹೊಸ ಬೆಳಕನ್ನು ಮೂಡಿಸಿತ್ತು. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 328 ತಾಂಡಾಗಳಿದ್ದು ಅವುಗಳಲ್ಲಿ ಒಟ್ಟು 3,34,621 ಜನರು ವಾಸ ಮಾಡುತ್ತಾರೆ. ಈ ಪೈಕಿ 2 ಲಕ್ಷಕ್ಕೂ ಆಧಿಕ ಜನರು ಗುಳೆಗೆ ಹೋಗುತ್ತಿದ್ದರು. ಕುಮಾರಸ್ವಾಮಿ ಘೋಷಣೆ ಮಾಡಿದ ಯೋಜನೆ ಜಾರಿಯಾದರೆ ನಾವೆಲ್ಲಾ ಗುಳೆ ಹೋಗುವುದು ತಪ್ಪುತ್ತದೆ ಎಂದು ಅವರೆಲ್ಲಾ ಕನಸು ಕಂಡಿದ್ದರು. ಆದರೆ ಮುಂದಿನ ಕೆಲವೇ ದಿನಗಳಲ್ಲಿ ಅವರ ಕನಸುಗಳು ಕಮರಿ ಹೋದವು. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಹೋಯ್ತು. ಸರ್ಕಾರದ ಜೊತೆಗೆ ಪೈಲೆಟ್ ಪ್ರಾಜೆಕ್ಟ್ ಸಹ ನಿಂತು ಹೋಯ್ತು.

ಯೋಜನೆ ಜಾರಿಗೆ ಬಂಜಾರಾ ಸಮುದಾಯದ ಜನರ ಒತ್ತಾಯ ನಂತರ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಿತು. ಹಿಂದಿನ ಸರ್ಕಾರದಲ್ಲಿ ಘೋಷಣೆ ಮಾಡಿದ ಯೋಜನೆಗಳಿಗೆ ಬೆಲೆ ಇಲ್ಲದಾಯ್ತು. ಆದರೆ ಜಿಲ್ಲೆಯ ಬಂಜಾರಾ ಸಮಾಜದ ಜನರು ಪೈಲೆಟ್ ಪ್ರಾಜೆಕ್ಟ್ ಜಾರಿ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ನಮ್ಮ ಜನರು ಗುಳೆಗೆ ಹೋಗುವುದನ್ನು ತಪ್ಪಿಸಲು ಜಾರಿ ಮಾಡಹೊರಟಿದ್ದ ಪ್ರಾಜೆಕ್ಟ್ ಅನ್ನು ಸಿಎಂ ಯಡಿಯೂರಪ್ಪ ಅವರು ಮುಂದುವರೆಸಬೇಕು. ಮುಂಬರುವ ಬಜೆಟ್​ನಲ್ಲಿ ಈ ಯೋಜನೆಗಾಗಿ ಹಣ ಮೀಸಲಿಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಕೆಲಸ ಸಿಕ್ಕರೆ ನಾವೆಲ್ಲಿಗೂ ಹೋಗುವುದಿಲ್ಲ ಗುಳೆಗೆ ತೆರಳಿದ್ದ ನಮ್ಮವರು ಮಹಾರಾಷ್ಟ್ರದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದರು. ನಮ್ಮೂರು ಬಿಟ್ಟು ಬೇರೆ ಊರಿಗೆ ಹೋಗಿ ಜೀವ ಕಳೆದುಕೊಂಡರು. ನಾವೆಲ್ಲಾ ಅನಾಥವಾಗಿದ್ದೇವೆ. ಇಲ್ಲಿ ಕೆಲಸ ಸಿಗದ ಕಾರಣ ನಮ್ಮ ಸಮಾಜದ ಜನರು ನೆರೆಯ ರಾಜ್ಯಗಳಿಗೆ ಗುಳೆಗೆ ಹೋಗುತ್ತಾರೆ. ನಮಗೆ ಇಲ್ಲಿಯೇ ಕೆಲಸ ಸಿಕ್ಕರೆ ನಾವೆಲ್ಲಿಯೂ ಹೋಗಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಮ್ಮೂರಿಗೆ ಬಂದು ಅದ್ಯಾವುದೋ ಯೋಜನೆ ಹಾಕಿ ಕೆಲಸಕೊಡೋದಾಗಿ ಹೇಳಿದ್ದರು. ನಂತರ ಅವರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಯವರಾದರೂ ನಮಗೆ ಯೋಜನೆ ಜಾರಿ ಮಾಡಿ ಗುಳೆ ಹೋಗದಂತೆ ತಡೆದು ಇಲ್ಲಿಯೇ ಕೆಲಸ ನೀಡಬೇಕು ಎಂದು ಮದಭಾವಿ ತಾಂಡಾದ ನಿವಾಸಿ ಖೇಮು ರಾಠೋಡ್ ಹೇಳುತ್ತಾರೆ.

ನಮ್ಮ ಜಿಲ್ಲೆಗೆ ಬೇಕೇ ಬೇಕು ಒಂದು ಫುಡ್ ಪಾರ್ಕ್: ಇದು ವಿಜಯಪುರ ರೈತರ, ಯುವಕರ, ಉದ್ಯಮಿಗಳ ಆಗ್ರಹ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ