AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶೋಗಾಥೆ | ಅಕ್ಷರ ಕಲಿಯದ ಮಹಿಳೆಯರು ಊರಿಗೆ ಬೆಳಕು ಕೊಟ್ಟರು

ಅನಕ್ಷರಸ್ಥರಾಗಿದ್ದರೂ ಇಂತಹದ್ದೊಂದು ದೂರದೃಷ್ಟಿತ್ವವುಳ್ಳ ಯೋಜನೆಯನ್ನು ರೂಪಿಸಿರುವ ಮಹಿಳೆಯರು, ತಾಂತ್ರಿಕವಾಗಿ ಗಟ್ಟಿಗೊಳ್ಳುವತ್ತ ಅಧ್ಯಯನ ನಿರತರಾಗಿದ್ದಾರೆ.

ಯಶೋಗಾಥೆ | ಅಕ್ಷರ ಕಲಿಯದ ಮಹಿಳೆಯರು ಊರಿಗೆ ಬೆಳಕು ಕೊಟ್ಟರು
ಸಾಂದರ್ಭಿಕ ಚಿತ್ರ
Skanda
|

Updated on:Jan 21, 2021 | 6:36 PM

Share

ಮುಂಬೈ: ಮಹಿಳೆಯರು ಸ್ವಾವಲಂಬಿಗಳಾಗಬೇಕು ಎನ್ನುವ ಮಾತು ಇಂದು ನಿನ್ನೆಯದಲ್ಲ. ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಮಹಾರಾಷ್ಟ್ರದ ಹಳ್ಳಿಯೊಂದರ ಮಹಿಳಾ ಸ್ವ-ಸಹಾಯ ಗುಂಪು ಇದೀಗ ಸೋಲಾರ್​ ಫಲಕಗಳನ್ನು ಉತ್ಪಾದಿಸುವ ಘಟಕವನ್ನೇ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಮಹಿಳೆಯರಿಗೆ ಆದಾಯದ ಮೂಲವನ್ನು ಹುಟ್ಟುಹಾಕುವುದು ಮತ್ತು ಅವರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸುವುದೇ ನಮ್ಮ ಉದ್ದೇಶ ಎಂದು ಯೋಜನೆಗೆ ಸಂಬಂಧಿಸಿದವರು ಮಾಹಿತಿ ನೀಡಿದ್ದಾರೆ.

ಸದರಿ ಯೋಜನೆಯ ಕುರಿತು ವಾರ್ಧಾ ಜಿಲ್ಲಾ ಪರಿಷತ್​ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಒಂಬಸೆ ಪ್ರತಿಕ್ರಿಯಿಸಿದ್ದು, ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘದವರು ಸೇರಿ ಇಂಥದ್ದೊಂದು ಯೋಜನೆ ರೂಪಿಸಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದಿದ್ದಾರೆ. ಈ ಯೋಜನೆಯು ಗ್ರಾಮೀಣ ಮಹಿಳೆಯರ ಬದುಕನ್ನು ಸದೃಢವಾಗಿಸಲಿದ್ದು, ಅವರ ಜೀವನದ ಗುಣಮಟ್ಟವನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆಯನ್ನು ತೇಜಸ್ವಿ ಸೋಲಾರ್​ ಎನರ್ಜಿ ಬ್ಯಾಕ್​ವರ್ಡ್​ ಇಂಡಸ್ಟ್ರಿಯಲ್​ ಸೊಸೈಟಿ ವತಿಯಿಂದ ಸ್ಥಾಪಿಸಲಾಗಿದ್ದು, ಒಟ್ಟು 214 ಸದಸ್ಯರುಗಳನ್ನೊಳಗೊಳ್ಳಲಾಗಿದೆ. ಆ ಪೈಕಿ 200 ಮಂದಿ ಮಹಿಳೆಯರು ಹಿಂದುಳಿದ ಸಮುದಾಯದಿಂದ ಬಂದವರಾಗಿದ್ದಾರೆ ಎನ್ನಲಾಗಿದೆ. ಈ ಘಟಕವನ್ನು ಜನವರಿ 26ರ ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕೇದಾರ್ ಉದ್ಘಾಟಿಸಲಿದ್ದಾರೆ.

ಅನಕ್ಷರಸ್ಥರಾಗಿದ್ದರೂ ಇಂತಹದ್ದೊಂದು ದೂರದೃಷ್ಟಿತ್ವವುಳ್ಳ ಯೋಜನೆಯನ್ನು ರೂಪಿಸಿರುವ ಮಹಿಳೆಯರು, ತಾಂತ್ರಿಕವಾಗಿಯೂ ಗಟ್ಟಿಗೊಳ್ಳುವತ್ತ ಅಧ್ಯಯನ ನಿರತರಾಗಿದ್ದಾರೆ. ಸೌರ ಫಲಕಗಳ ಉತ್ಪಾದನೆ ಮತ್ತು ಅವುಗಳ ಕುರಿತಾದ ಸೂಕ್ಷ್ಮ ವಿಚಾರಗಳನ್ನು ಬಹಳ ಆಸ್ಥೆಯಿಂದ ತಿಳಿದುಕೊಳ್ಳುತ್ತಿದ್ದಾರೆ. ಜೊತೆಗೆ, ಬಾಂಬೆಯ ದಿ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಐಐಟಿ) ಈ ಯೋಜನೆಗೆ ಬೆಂಬಲ ನೀಡುತ್ತಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿರುವ ಹಿಂದುಳಿದ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದ್ದೇವೆ. ಇದಕ್ಕೆ ಬೇಕಾದ ಅವಶ್ಯಕ ತರಬೇತಿಗಳನ್ನು ಜಿಲ್ಲಾ ಪರಿಷತ್ತಿನ ಯುಎಂಇಡಿ ಅಭಿಯಾನದಡಿ ಪಡೆದಿದ್ದೇವೆ. ಸದ್ಯ ಸೌರ ಫಲಕ ಮತ್ತು ಸೌರ ದೀಪಗಳನ್ನು ಉತ್ಪಾದನೆ ಮಾಡುತ್ತಿದ್ದೇವೆ ಎಂದು ಮಹಿಳಾ ಕೈಗಾರಿಕಾ ಸಮಾಜದ ನಿರ್ದೇಶಕಿ ಸಂಗೀತಾ ವಾಂಖೆಡೆ ಹೇಳಿದ್ದಾರೆ. ಸರ್ಕಾರದ ಸಹಕಾರದೊಂದಿಗೆ ಸಾಗುತ್ತಿರುವ ಯೋಜನೆಗೆ ಆರಂಭಿಕ ಹಂತದಲ್ಲೇ ಯಶಸ್ಸು ಸಿಕ್ಕಿದ್ದು ಸುಮಾರು 40 ಲಕ್ಷ ಮೌಲ್ಯದ ಸೌರದೀಪಗಳನ್ನು ಜಿಲ್ಲಾ ಪರಿಷತ್ತು ಖರೀದಿಸಲಿದೆ ಎಂದು ತಿಳಿಸಿದ್ದಾರೆ.

Published On - 6:32 pm, Thu, 21 January 21

Follow Us
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK