Karnataka News Live: 6 ತಿಂಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
Breaking News Today Live Updates: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ದೂರವಾಣಿ ಕರೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನದ ಶುಭಾಶಯ ಕೋರಿದ್ದಾರೆ.
Karnataka Breaking News Live Updates: ಇಂದು ಸಿಎಂ ಬಸವರಾಜ ಬೊಮ್ಮಾಯಿ ಡಬಲ್ ಸಂಭ್ರಮದಲ್ಲಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಇಂದಿಗೆ 6 ತಿಂಗಳು ತುಂಬಿದ ದಿನವೇ ಸಿಎಂ ಬೊಮ್ಮಾಯಿ ಜನ್ಮದಿನ. ಇಂದು 62ನೇ ವಸಂತಕ್ಕೆ ಸಿಎಂ ಬೊಮ್ಮಾಯಿ ಕಾಲಿಟ್ಟಿದ್ದಾರೆ. ಸದ್ಯ ತಮ್ಮ ಆಡಳಿತಾವಧಿ ಆರು ತಿಂಗಳ ಪೂರೈಕೆ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ದೂರವಾಣಿ ಕರೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 6 ತಿಂಗಳು ತುಂಬಿದ್ದಕ್ಕೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಹುಟ್ಟು ಹಬ್ಬ ಹಾಗೂ ತಮ್ಮ ನೇತೃತ್ವದ ಸರ್ಕಾರ 6 ತಿಂಗಳು ಪೂರೈಸಿದ ಸಂತಸದಲ್ಲಿರುವ ಸಿಎಂ ಬೊಮ್ಮಾಯಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿಎಂಗೆ ಶುಭಕೋರಲು ಸಚಿವರು ಹಾಗೂ ಶಾಸಕರು ಆರ್ಟಿ ನಗರದ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ರಾಮದಾಸ್ ಸೇರಿದಂತೆ ಹಲವು ನಾಯಕರು ದಂಡು ಆಗಮಿಸಿದೆ.
LIVE NEWS & UPDATES
-
ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ
ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುವುದಾಗಿ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
-
6 ತಿಂಗಳ ಸಾಧನೆಯ ಕುರಿತ ಪುಸ್ತಕದ ಮುಖಪುಟದಲ್ಲಿದ್ದ ತಮ್ಮ ಫೋಟೋ, ಹೆಸರು ತೆಗೆಸಿದ ಸಿಎಂ
6 ತಿಂಗಳ ಸಾಧನೆಯ ಕುರಿತ ಪುಸ್ತಕದ ಮುಖಪುಟದಲ್ಲಿ ತಮ್ಮ ಹೆಸರು ಮತ್ತು ಫೋಟೋ ಹಾಕಲು ಒಪ್ಪದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದಪಡಿಸಲ್ಪಟ್ಟಿದ್ದ ಮುಖಪುಟದಲ್ಲಿ ಫೋಟೋ, ಹೆಸರು ಇರುವುದನ್ನು ನೋಡಿ ತೆಗೆಸಿದ್ದಾರೆ.
-
ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾವಚಿತ್ರ
‘ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು’ ಪುಸ್ತಕದ ಮುಖಪುಟದಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಇದೆ. ಹಾಗೂ ಕಾರ್ಯಕ್ರಮದ ವೇದಿಕೆಯಲ್ಲಿ ಕೂಡಾ ಪ್ರಧಾನಿ ಮೋದಿ ಭಾವಚಿತ್ರ ಕಂಡು ಬಂತು.
6 ತಿಂಗಳ ಜನಕಲ್ಯಾಣ ಸಮಾರಂಭ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಷಣ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 6 ತಿಂಗಳ ಜನಕಲ್ಯಾಣ ಸಮಾರಂಭ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ. ಕರ್ನಾಟಕದಲ್ಲಿ 10 ಕೃಷಿ ವಲಯಗಳು ಇವೆ. 365 ದಿನ ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಯಾಗುತ್ತೆ. ಇಂತಹ ಭಾಗ್ಯ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಕರ್ನಾಟಕದಲ್ಲಿ ಸಂಪದ್ಭರಿತವಾದ ಅರಣ್ಯವಿದೆ. ನಮ್ಮಲ್ಲಿ ಖನಿಜ ಸಂಪನ್ಮೂಲವೂ ಇದೆ. ಗಂಗರು, ಚೋಳರು, ಬಾದಾಮಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯದ ಅರಸು, ಮೈಸೂರು ಅರಸರು, ಕರ್ನಾಟಕಕ್ಕೆ ಅದ್ಭುತವಾದ ಸಂಸ್ಕೃತಿ ಬಿಟ್ಟು ಹೋಗಿದ್ದಾರೆ. ‘ಆಳ್ವಿಕೆಯೇ ಬೇರೆ, ಆಡಳಿತವೇ ಬೇರೆ’ ಎಂದು ಹೇಳಿದ್ದಾರೆ. ಮಹನೀಯರು 11ನೇ ಶತಮಾನದಲ್ಲೇ ಈ ಮಾತು ಹೇಳಿದ್ದರು ಎಂದು ಸಿಎಂ ತಮ್ಮ ಭಾಷಣದಲ್ಲಿ ಇತಿಹಾಸ ನೆನೆದಿದ್ದಾರೆ.
ರಂಗೋಲಿ ಮೂಲಕ ಸಿಎಂ ಬೊಮ್ಮಾಯಿಗೆ ಶುಭಾಶಯ ಕೋರಿದ ಅಭಿಮಾನಿ
ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಹುಟ್ಟುಹಬ್ಬಕ್ಕೆ ರಂಗೋಲಿ ಮೂಲಕ ಶುಭಾಶಯ ಕೋರಿದ ಅಭಿಮಾನಿ. ಚೆನ್ನಮ್ಮ ವೃತ್ತದಲ್ಲಿ ಬಸವರಾಜ ಬೊಮ್ಮಾಯಿ ಭಾವಚಿತ್ರ ಬಿಡಿಸುವ ಮೂಲಕ ಅಭಿಮಾನಿ ಕಿರಣ್ ಉಪ್ಪಾರ್ ಶುಭಾಶಯ ಕೋರಿದ್ದಾರೆ.
ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂಬ 82 ಪುಟಗಳ ಪುಸ್ತಕ ಬಿಡುಗಡೆ ಮಾಡಿದ ಸಿಎಂ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುತ್ತಿರುವ ಜನ ಕಲ್ಯಾಣ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಕೆ.ಎಸ್. ಈಶ್ವರಪ್ಪ, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಉಮೇಶ್ ಕತ್ತಿ, ಗೋಪಾಲಯ್ಯ, ಡಾ. ಸುಧಾಕರ್, ಭೈರತಿ ಬಸವರಾಜ, ವಿ. ಸೋಮಣ್ಣ, ಗೋವಿಂದ ಕಾರಜೋಳ, ಎಸ್. ಅಂಗಾರ, ಬಿ.ಸಿ. ನಾಗೇಶ್, ಎಂಟಿಬಿ ನಾಗರಾಜ್, ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದಾರೆ. ಕಾರ್ಯಕ್ರಮದಲ್ಲಿ ಸರ್ಕಾರದ 6 ತಿಂಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗಿದೆ. ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂಬ 82 ಪುಟಗಳ ಪುಸ್ತಕವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರೋತ್ಥಾನ ಗೋಶಾಲೆಯ 11 ಹಸುಗಳನ್ನು ಆಜೀವನ ದತ್ತು ಸ್ವೀಕಾರ ಮಾಡಿದ ಸಿಎಂ
ಇಂದು ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಆರ್ ಟಿ ನಗರ್ ನಿವಾಸದಲ್ಲಿ ರಾಷ್ಟ್ರೋತ್ಥಾನ ಗೋಶಾಲೆಯ 11 ಹಸುಗಳನ್ನು ಆಜೀವನ ದತ್ತು ಸ್ವೀಕಾರ ಮಾಡಿ, ಗೋಮಾತೆಯ ಸೇವೆಯ ಪವಿತ್ರಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕುಟುಂಬದ ಸದಸ್ಯರೊಂದಿಗೆ ಗೋಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ.
6 ತಿಂಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಸಿಎಂ
ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಇಂದಿಗೆ 6 ತಿಂಗಳು ಹಿನ್ನೆಲೆಯಲ್ಲಿ 6 ತಿಂಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ 6 ತಿಂಗಳ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ.
ಸಿಎಂ ಹುಟ್ಟುಹಬ್ಬಕ್ಕೆ ಶುಭಕೋರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಸೇವೆ ಮಾಡಲು ಅವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಚೈತನ್ಯ, ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭಕೋರಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಸೇವೆ ಮಾಡಲು ಅವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಚೈತನ್ಯ, ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/JvhveBJKcC
— H D Kumaraswamy (@hd_kumaraswamy) January 28, 2022
ಟ್ವೀಟ್ ಮೂಲಕ ಸಿಎಂಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶುಭಾಶಯಗಳು. ಅವರ ಜನ್ಮದಿನದಂದು ಕರ್ನಾಟಕದ ಬೆಳವಣಿಗೆಯ ಪಥವನ್ನು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Best wishes to Karnataka’s CM Shri @BSBommai Ji on his birthday. He is making outstanding efforts to boost Karnataka’s growth trajectory and ensure a life of dignity as well as prosperity for the poor. Praying for his long and healthy life.
— Narendra Modi (@narendramodi) January 28, 2022
ರೇಸ್ ಕೋರ್ಸ್ ಸರ್ಕಾರಿ ನಿವಾಸದಿಂದ ತೆರಳಿದ ಸಿಎಂ
ರೇಸ್ ಕೋರ್ಸ್ ಸರ್ಕಾರಿ ನಿವಾಸದಿಂದ ಸಿಎಂ ಬಸವರಾಜ ಬೊಮ್ಮಾಯಿ ವಿಧಾನ ಸೌಧಕ್ಕೆ ತೆರಳಿದ್ದಾರೆ.
ಸಿಎಂಗೆ ಹುಟ್ಟುಹಬ್ಬದ ಶುಭ ಕೋರಿದ ಸಚಿವ ಬಿ.ಸಿ. ಪಾಟೀಲ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರ 6 ತಿಂಗಳನ್ನು ಪೂರೈಸಿದೆ. ಸದ್ಯ ಸಚಿವ ಬಿ.ಸಿ. ಪಾಟೀಲ್ ಸಿಎಂಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಇಂತಹ ಆಡಳಿತವನ್ನು ಈ ಹಿಂದೆ ನೋಡಿರಲಿಲ್ಲ -ಆರೋಗ್ಯ ಸಚಿವ ಸುಧಾಕರ್ ಹೇಳಿಕೆ
6 ತಿಂಗಳಲ್ಲಿ ಸಿಎಂ ಬೊಮ್ಮಾಯಿರಿಂದ ಉತ್ತಮ ಕೆಲಸ ನಡೆದಿದೆ. ಇಂತಹ ಆಡಳಿತವನ್ನು ಈ ಹಿಂದೆ ನೋಡಿರಲಿಲ್ಲ. ಪ್ರತಿ ಕ್ಷೇತ್ರಕ್ಕೂ ಬೊಮ್ಮಾಯಿ ಗಮನ ನೀಡಿದ್ದಾರೆ. ಮೋದಿ ಹಾಕಿಕೊಟ್ಟ ದಾರಿಯಲ್ಲೇ ಸಿಎಂ ನಡೆಯುತ್ತಿದ್ದಾರೆ. ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭವಾಗಿದೆ. ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ನಡೆಸುತ್ತೇವೆ. 2023ರಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. 6 ತಿಂಗಳ ರಿಪೋರ್ಟ್ ಕಾರ್ಡ್ ಜನರ ಮುಂದಿಡುತ್ತೇವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದ್ರು.
ಬಿಎಸ್‌ವೈ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಹುಟ್ಟುಹಬ್ಬ ಹಿನ್ನೆಲೆ ಬೆಂಗಳೂರಿನ ಕೆ.ಕೆ.ರಸ್ತೆಯ ಕಾವೇರಿ ನಿವಾಸದಲ್ಲಿ ಬಿಎಸ್‌ವೈ ಭೇಟಿ ಮಾಡಿದ್ದಾರೆ. ಯಡಿಯೂರಪ್ಪನವರ ಬಳಿ ಆಶೀರ್ವಾದ ಪಡೆದು ರೇಸ್ ಕೋರ್ಸ್ ಸರ್ಕಾರಿ ನಿವಾಸಕ್ಕೆ ತೆರಳಿದ್ದಾರೆ.
ಸಿಎಂ ನಿವಾಸಕ್ಕೆ ಆಗಮಿಸುತ್ತಿರುವ ಸಚಿವರು, ಶಾಸಕರು
ಸಿಎಂಗೆ ಶುಭಕೋರಲು ಸಚಿವರು ಹಾಗೂ ಶಾಸಕರು ಆರ್ಟಿ ನಗರದ ಸಿಎಂ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ರಾಮದಾಸ್ ಸೇರಿದಂತೆ ಹಲವು ನಾಯಕರ ದಂಡು ಆಗಮಿಸಿದೆ.
ನಾಯಕರ ಶುಭಾಶಯಗಳು ಮತ್ತಷ್ಟು ಸ್ಫೂರ್ತಿ ನೀಡಿದೆ -ಸಿಎಂ ಬಸವರಾಜ ಬೊಮ್ಮಾಯಿ
ನಾನು ಹುಟ್ಟುಹುಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಪತಿ ಕೋವಿಂದ್, ಸಚಿವರು, ಶಾಸಕರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ತುಂಬು ಹೃದಯಪೂರ್ವಕ ಧನ್ಯವಾದ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಾಯಕರ ಶುಭಾಶಯಗಳು ಮತ್ತಷ್ಟು ಸ್ಫೂರ್ತಿ ನೀಡಿದೆ. ರಾಜ್ಯದ ಆರ್ಥಿಕ ದೃಷ್ಟಿಯಿಂದ ಒಳ್ಳೆಯ ಬಜೆಟ್ ನೀಡಬೇಕಿದೆ.ರಾಜ್ಯದ ಒಟ್ಟು ಬೆಳವಣಿಗೆ ದೃಷ್ಟಿಯಿಂದ ಬಜೆಟ್ ನೀಡಬೇಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಟ್ಟುಹಬ್ಬ ಹಿನ್ನೆಲೆ ದೇವಾಲಯಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಹುಟ್ಟುಹಬ್ಬ ಹಿನ್ನೆಲೆ ಬೆಂಗಳೂರಿನ ಬಾಲಬ್ರೂಯಿ ಅತಿಥಿಗೃಹ ಬಳಿಯಿರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜ್ಯದ ಜನತೆಗೆ ಒಳಿತಾಗಲಿ ಎಂದು ಅರ್ಚನೆ ಮಾಡಿಸಿದ್ದಾರೆ.
ದೂರವಾಣಿ ಕರೆ ಮಾಡಿ ಶುಭ ಕೋರಿದ ಅಮಿತ್ ಶಾ, ಬಿಎಸ್‌ವೈ
ಸಿಎಂ ಬೊಮ್ಮಾಯಿಗೆ ದೂರವಾಣಿ ಕರೆ ಮಾಡಿ ಅಮಿತ್ ಶಾ, ಬಿಎಸ್‌ವೈ ಜನ್ಮದಿನದ ಶುಭಾಶಯ ಕೋರಿದ್ದಾರೆ. ಹಾಗೂ ಅವರ ನೇತೃತ್ವದ ಸರ್ಕಾರಕ್ಕೆ 6 ತಿಂಗಳು ತುಂಬಿದ್ದಕ್ಕೆ ಶುಭಾಶಯ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇಂದಿಗೆ 6 ತಿಂಗಳು
ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಯಶಸ್ವಿಯಾಗಿ 6 ತಿಂಗಳು ಪೂರೈಸಿದ ಹಿನ್ನೆಲೆ ಜನಕಲ್ಯಾಣ ಸಮಾರಂಭ ಏರ್ಪಡಿಸಲಾಗಿದೆ. ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಇಂದಿಗೆ 6 ತಿಂಗಳು. 6 ತಿಂಗಳು ತುಂಬಿದ ದಿನವೇ ಸಿಎಂ ಬೊಮ್ಮಾಯಿ ಜನ್ಮದಿನ. ಇಂದು 62ನೇ ವಸಂತಕ್ಕೆ ಕಾಲಿಟ್ಟ ಸಿಎಂ ಬೊಮ್ಮಾಯಿ. ತಮ್ಮ ಆಡಳಿತಾವಧಿ ಆರು ತಿಂಗಳ ಪೂರೈಕೆ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ.
Published On - Jan 28,2022 10:12 AM