ಕೊವಿಡ್ ಕರ್ಫ್ಯೂಗೆ ಆಟೊ ಚಾಲಕರು, ಓಲಾ-ಊಬರ್ ಸಂಘಟನೆ, ಹೋಟೆಲ್ ಉದ್ಯಮಿಗಳ ವಿರೋಧ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 26, 2021 | 5:26 PM

ರಾಜ್ಯ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ. ದಿನಸಿ ವಸ್ತುಗಳ ಬೆಲೆಗಳು ದಿನೇದಿನೆ ಗಗನಕ್ಕೆೇರುತ್ತಿವೆ. ಇದರ ನಡುವೆ ಬಿಗಿ ನಿಯಮಗಳು ಜಾರಿಯಾದರೆ ಕಷ್ಟ. ಬೆಲೆ ಏರಿಕೆ ನಡುವೆ ಜೀವನ ಸಾಗಿಸುವುದು ಹೇಗೆ ಎಂದು 14 ದಿನಗಳ ಬಿಗಿಕ್ರಮಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊವಿಡ್ ಕರ್ಫ್ಯೂಗೆ ಆಟೊ ಚಾಲಕರು, ಓಲಾ-ಊಬರ್ ಸಂಘಟನೆ, ಹೋಟೆಲ್ ಉದ್ಯಮಿಗಳ ವಿರೋಧ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನ್ಕಕೆ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಸುಮಾರು 14 ದಿನಗಳ ಕಾಲ ಈ ಬಿಗಿ ಕ್ರಮ ಜಾರಿಯಲಿದ್ದು, ನಾಳೆ ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ. ಜಾರಿಯಾಗಲಿರುವ ಕೊವಿಡ್ ಕರ್ಫ್ಯೂನಲ್ಲಿ ಜನಸಂಚಾರ, ವಾಹನ ಸಂಚಾರ, ಸಾರಿಗೆ ಬಸ್ ಸಂಚಾರ, ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ ಕೊವಿಡ್ ಕರ್ಫ್ಯೂ ಘೋಷಣೆಯಾದ ಬೆನ್ನಲ್ಲೆ ಜನಸಾಮನ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ. ದಿನಸಿ ವಸ್ತುಗಳ ಬೆಲೆಗಳು ದಿನೇದಿನೆ ಗಗನಕ್ಕೆೇರುತ್ತಿವೆ. ಇದರ ನಡುವೆ ಬಿಗಿ ನಿಯಮಗಳು ಜಾರಿಯಾದರೆ ಕಷ್ಟ. ಬೆಲೆ ಏರಿಕೆ ನಡುವೆ ಜೀವನ ಸಾಗಿಸುವುದು ಹೇಗೆ ಎಂದು 14 ದಿನಗಳ ಬಿಗಿಕ್ರಮಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಆಕ್ರೋಶ ವಿರೋಧ ವ್ಯಕ್ತಡಿಸಿದ್ದಾರೆ. ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳು ಈಗಾಗಲೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕರ್ನಾಟಕ ಸರ್ಕಾರದಿಂದ ಸವಲತ್ತು ಒದಗಿಸಬೇಕಾಗಿತ್ತು. ಆದರೆ ಯಾವುದೇ ಸೌಲಭ್ಯ ಕೊಟ್ಟಿಲ್ಲ. ಬೀದಿಬದಿ ವ್ಯಾಪಾರಿಗಳು ಬೀದಿಪಾಲಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರದ ಕ್ರಮಕ್ಕೆ ಓಲಾ-ಊಬರ್ ಸಂಘಟನೆಗಳಿಂದ ವಿರೋಧ
ಕರ್ನಾಟಕದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿರುವ ಲಾಕ್​ಡೌನ್ ಮಾದರಿಯ ನಿರ್ಬಂಧಗಳಿಗೆ ಓಲಾ-ಊಬರ್ ಅಸೋಸಿಯೇಷನ್​ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಟಿವಿ9 ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ಅಸೋಸಿಯೇಷನ್​ ಅಧ್ಯಕ್ಷ ತನ್ವೀರ್ ಪಾಷಾ, ‘ಕೊರೊನಾದಿಂದ ಕ್ಯಾಬ್ ಚಾಲಕರು ಸಂಕಷ್ಟದಲ್ಲಿದ್ದಾರೆ. ಮತ್ತೆ 14 ದಿನ ಬಂದ್ ಆದ್ರೆ ಚಾಲಕರು ಬೀದಿಗೆ ಬರ್ತಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಕೊರೊನಾದಿಂದಾಗಿ ಜನಸಂಚಾರ ಕಡಿಮೆಯಾಗಿದೆ. ಕ್ಯಾಬ್​ಗಳ ಬಾಡಿಗೆ ಪಾವತಿಸಲು ಆಗುವಷ್ಟೂ ವ್ಯಾಪಾರ ನಡೆಯುತ್ತಿಲ್ಲ. ಸರ್ಕಾರ ಮತ್ತೆ ಬಂದ್ ಅಂದರೆ ತುಂಬಾ ಕಷ್ಟವಾಗುತ್ತದೆ. ನಮಗೆ ಸಾಲದ ಮೇಲಿನ ಬಡ್ಡಿ ವಿನಾಯಿತಿ ನೀಡಬೇಕು. ಚಾಲಕರಿಗೆ ಅಗತ್ಯ ದಿನಸಿ ಹಾಗೂ ಔಷಧ ನೀಡಬೇಕು ಎಂದು ಅವರು ಆಗ್ರಹಿಸಿದರು.

ಹೋಟೆಲ್ ಉದ್ಯಮಕ್ಕೆ ಕರ್ಫ್ಯೂ ಕಂಟಕ
ರಾಜ್ಯ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್‌ಡೌನ್​ನಿಂದ ಹೋಟೆಲ್‌ ಉದ್ಯಮಗಳಿಗೆ ನಷ್ಟಭೀತಿ ಎದುರಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿ ಮಧುಕರ್ ಶೆಟ್ಟಿ, ಸರ್ಕಾರದ ನಿರ್ಧಾರದಿಂದಾಗಿ ಹೋಟೆಲ್‌ ಉದ್ಯಮದ ಕಾರ್ಮಿಕರು ಅತಂತ್ರರಾಗುತ್ತಾರೆ. ಕಾರ್ಮಿಕರನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯ ಆಗುತ್ತಿಲ್ಲ. ಸಾಲ ಪಡೆದು ಹೋಟೆಲ್​ಗಳನ್ನು ನಡೆಸುತ್ತಿದ್ದ ಉದ್ಯಮಿಗಳಿಗೆ ಭಾರಿ ಸಂಕಷ್ಟ ಎದುರಾಗಲಿದೆ. ಹೋಟೆಲ್‌ ಉದ್ಯಮದ ನೆರವಿಗೆ ಸರ್ಕಾರ ಬಂದಿಲ್ಲ ಎಂದು ವಿಷಾದಿಸಿರುವ ಅವರು, ಸರ್ಕಾರದ ನಿರ್ಧಾರ ಪಾಲಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ನೆರವಿಗೆ ಬನ್ನಿ ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ

Covid curfew: ನಾಳೆ ರಾತ್ರಿಯಿಂದ ಬಿಗಿ ಬಂದೋಬಸ್ತ್​; ಸ್ವಗ್ರಾಮಕ್ಕೆ ಹೊರಟ ಜನ, ಬಸ್​ ನಿಲ್ದಾಣ ಫುಲ್​ ರಶ್

ಭಾರತಕ್ಕೆ ಆಮ್ಲಜನಕ, ವೆಂಟಿಲೇಟರ್ ಮತ್ತು ಪಿಪಿಇ ಕಿಟ್ ಕಳಿಸಿಕೊಡಲಿದೆ ಆಸ್ಟ್ರೇಲಿಯಾ

(Karnataka People fiercely opposed to Covid Curfew)

Published On - 5:23 pm, Mon, 26 April 21