
ಬೆಂಗಳೂರು, ಮಾ.28: ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಮತ್ತು ದಕ್ಷತೆ ಮೆರೆದ ಒಟ್ಟು 153 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ (Chief Minister’s Medal) ಪ್ರಕಟವಾಗಿದೆ. ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪದಕಗಳನ್ನು ಪ್ರದಾನ ಮಾಡಲಾಗುವುದು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ (SIT) ತಂಡದಲ್ಲಿದ್ದ ಐಪಿಎಸ್ ಅಧಿಕಾರಿ, ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಅವರಿಗೆ ಈ ಬಾರಿ ಪದಕ ಒಲಿದಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಿಳಾ ಅಧಿಕಾರಿಗಳ ದಕ್ಷತೆಗೆ ಈ ಮೂಲಕ ಮನ್ನಣೆ ಸಿಕ್ಕಂತಾಗಿದೆ.
ಒಟ್ಟು 153 ಮಂದಿಯ ಪಟ್ಟಿಯಲ್ಲಿ 6 ಐಪಿಎಸ್ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್, ಉಡುಪಿ ಎಸ್ಪಿ ಡಾ. ಕೆ. ಅರುಣ್, ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್, ಬೆಂಗಳೂರು ಡಿಸಿಪಿ (ಸಂಚಾರ ದಕ್ಷಿಣ) ಡಾ. ಗೋಪಾಲ ಎಂ. ಬ್ಯಾಕೋಡ, ಹಾಸನ ಎಎಸ್ಪಿ-1 ಎಂ.ಕೆ. ತಮ್ಮಯ್ಯ, ಶಿವಮೊಗ್ಗ ಎಎಸ್ಪಿ-2 ಎಸ್. ರಮೇಶ್ ಕುಮಾರ್. ಇವರಲ್ಲದೆ 12 ಮಂದಿ ಡಿವೈಎಸ್ಪಿಗಳು ಹಾಗೂ ವಿವಿಧ ಹಂತದ ಸಿಬ್ಬಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪದಕ ವಿಜೇತರು ನಿಗದಿತ ಸಮವಸ್ತ್ರ ಧರಿಸಿ ಸಮಾರಂಭಕ್ಕೆ ಹಾಜರಾಗುವಂತೆ ಡಿಜಿಪಿ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ.
| ಕ್ರ.ಸಂ | ಹೆಸರು | ಹುದ್ದೆ ಮತ್ತು ಕಾರ್ಯಸ್ಥಳ |
| 1 | ಡಾ. ಸುಮನ್ ಡಿ ಪೆನ್ನೇಕರ್ | ಐಪಿಎಸ್, ಎಸ್ಪಿ, ಬಳ್ಳಾರಿ (SIT ಸದಸ್ಯೆ) |
| 2 | ಡಾ. ಅರುಣ್ ಕೆ | ಐಪಿಎಸ್, ಎಸ್ಪಿ, ಉಡುಪಿ |
| 3 | ಪೃಥ್ವಿಕ್ ಶಂಕರ್ | ಐಪಿಎಸ್, ಎಸ್ಪಿ, ಯಾದಗಿರಿ |
| 4 | ಡಾ. ಗೋಪಾಲ ಎಂ ಬ್ಯಾಕೋಡ | ಐಪಿಎಸ್, ಡಿಸಿಪಿ (ಸಂಚಾರ ದಕ್ಷಿಣ), ಬೆಂಗಳೂರು |
| 5 | ಶ್ರೀಹರಿಬಾಬು ಬಿ.ಎಲ್. | ಐಪಿಎಸ್, ಡಿಸಿಪಿ (ಅಪರಾಧ), ಬೆಂಗಳೂರು |
| 6 | ನಜ್ಮಾ ಫಾರೂಕಿ | ಎಸಿಪಿ, ಮಂಗಳೂರು |
| ಕ್ರ.ಸಂ | ಹೆಸರು | ಹುದ್ದೆ ಮತ್ತು ಕಾರ್ಯಸ್ಥಳ |
| 1 | ಎಂ ಕೆ ತಮ್ಮಯ್ಯ | ಅಡಿಷನಲ್ ಎಸ್ಪಿ, ಹಾಸನ |
| 2 | ಎಸ್ ರಮೇಶ್ ಕುಮಾರ್ | ಅಡಿಷನಲ್ ಎಸ್ಪಿ, ಶಿವಮೊಗ್ಗ |
| 3 | ವಾಸು ಆರ್ | ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ |
| 4 | ಸಂತೋಷ್ ದಯಾನಂದ | ಎಸಿಪಿ, ಬೆಳಗಾವಿ ನಗರ |
| 5 | ನಾರಾಯಣಸ್ವಾಮಿ ವಿ | ಎಸಿಪಿ, ಬೆಂಗಳೂರು ನಗರ |
| 6 | ತುಳಜಪ್ಪ ಸುಲ್ಪಿ | ಡಿವೈಎಸ್‌ಪಿ, ವಿಜಯಪುರ |
| 7 | ಸಿದ್ದಲಿಂಗಪ್ಪಗೌಡ ಪಾಟೀಲ್ | ಡಿವೈಎಸ್‌ಪಿ, ಕೊಪ್ಪಳ |
| 8 | ಎಂ ಹೆಚ್ ಉಮೇಶ್ | ಡಿವೈಎಸ್‌ಪಿ, ಸಿಐಡಿ |
| 9 | ಪ್ರಭಾಕರ್ ಜಿ | ಎಸಿಪಿ, ಸಂಚಾರ ಪ್ಲಾನಿಂಗ್, ಬೆಂಗಳೂರು |
| 10 | ಹೆಚ್ ಕೆ ಮಹಾನಂದ | ಎಸಿಪಿ, ಸಿಸಿಬಿ, ಬೆಂಗಳೂರು |
| 11 | ರಾಘವೇಂದ್ರ ಬಿ ಹವಾಲ್ದಾರ್ | ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ |
| 12 | ನಾಗರಾಜ್ ಕೆ ಕೆನ್ನಿಕರ್ | ಎಸಿಪಿ, ಸಿಎಆರ್, ಬೆಂಗಳೂರು |
| 13 | ವೆಂಕಟೇಶ್ | ಡಿವೈಎಸ್‌ಪಿ, ಸೈಬರ್ ಕ್ರೈಂ, ರಾಯಚೂರು |
| 14 | ಕೆ ಬಸವರಾಜು | ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ |
| 15 | ಪಾಂಡುರಂಗ ವಿ ಭಂಡಾರಿ | ಎಸಿಪಿ, ಬೆಂಗಳೂರು ನಗರ |
| 16 | ಡಾ. ಸಂತೋಷ ಚವ್ಹಾಣ | ಡಿವೈಎಸ್‌ಪಿ, ಹರಪನಹಳ್ಳಿ |
| 17 | ಬಾಳಪ್ಪ ನಂದಗಾವಿ | ಡಿವೈಎಸ್‌ಪಿ, ಬಸವನಬಾಗೇವಾಡಿ |
| 18 | ಲಕ್ಷ್ಮೀಕಾಂತ್ ಆರ್ | ಎಸಿಪಿ, ಸಿಸಿಪಿಎಸ್, ಬೆಂಗಳೂರು |
| ಹೆಸರು (PI) | ಹೆಸರು (PSI/PI) |
| ಎಂ ಜಿ ದಯಾನಂದ | ಕಿರಣ್ ಕುಮಾರ್ ಬಿ ವಿ (PSI) |
| ಶಿವರಾಜ್ ಆರ್ ಮುಧೋಳ್ | ಕುಮಾರ್ ದುಂಡಪ್ಪ ಹಡ್ಕರ್ (PSI) |
| ಕೆ ಶರಣು ವರ್ಮ | ಶ್ರೀಕಂಠೇಗೌಡ (PSI) |
| ಉದಯ ರವಿ ಜಿ | ಕಳಿಂಗ ಎ (PSI) |
| ಜಿ ಸೋಮಶೇಖರ್ | ಸುರೇಶ್ (PSI) |
| ಸುರೇಶ್ ಕುಮಾರ್ ಎಸ್ ಡಿ | ಸುನೀಲ್ ಪವಾರ್ (PSI) |
| ಬಿ ಮಲ್ಲಿಕಾರ್ಜುನ | ಟಿಪ್ಪುಸುಲ್ತಾನ್ ನಾಯಕ್ವಾಡಿ (PSI) |
| ಸಿದ್ದೇಶ ಎಂ ಡಿ | ರಾಜ್‌ಕುಮಾರ್ ಸಿದ್ರಾಮಪ್ಪ (PSI) |
| ಸಂತೋಷ್ ಕಶ್ಯಪ್ ಆರ್ | ಭೀಮಪ್ಪ ನಾಗಪ್ಪ (PSI) |
| ಸತೀಶ್ ಕುಮಾರ್ ವೈ | ಮಂಜನಗೌಡ ಪಾಟೀಲ್ (PSI) |
| ಪ್ರಶೀಲಾ ಬಿ ಎಸ್ | ಶ್ರೀಕಾಂತ್ ಕಾಂಬ್ಳೆ (PI) |
| ಸುಶೀಲ್ ಕುಮಾರ್ | ಜಯಾನಂದ ಎನ್ (PI) |
| ಶ್ರೀಶೈಲಕುಮಾರ ಜೆ | ನವೀನ ಎಸ್ ನಾಯ್ಕ (PSI) |
| ಆನಂದ ವಿ ಠಕ್ಕಣನವರ್ | ನಯಾಜ್ (PI) |
| ಮಂಜೇಶ್ ಎಂ ಜೆ | ಸುರೇಶ್ ಎಂ ಎನ್ (PI) |
| ಸೃಜನ ಎಂ | ಮಂಜುನಾಥ ಬಿ (PSI) |
| ರಾಜೇಶ್ ಆರ್ | ಕಿಶೋರ್ ಬಿ ಟಿ (PSI) |
| ಇ ಕೊದಂಡಪಾಣಿ (PSI) | ಮಹಾದೇವಪ್ಪ ಡಿ (PI) |
| ಗ್ಲೋರಿ ಕ್ರಿಸ್ಟಿನಾ ಎ | ಬಿ ಜಿ ಕುಮಾರ್ (PI) |
ಇತರೆ ಶ್ರೇಣಿಯ ಅಧಿಕಾರಿಗಳು ಮತ್ತು ಸಿಬ್ಬಂದಿ:
| ಹೆಸರು | ಶ್ರೇಣಿ | ಹೆಸರು | ಶ್ರೇಣಿ |
| ಪ್ರದೀಪ ಹೆಚ್ ಕೆ | ಅಸಿಸ್ಟೆಂಟ್ ಕಮಾಂಡೆಂಟ್ | ಇರ್ಷಾದ್ ಪಿ | HC |
| ರಾಮನಾಥ ಪಿ ಬಿ | PI | ಮಹಾಲಿಂಗ ಗಾಣಿಗ | HC |
| ಬಸಣ್ಣ ಎಸ್ | RSI | ಬಾಹುಬಾಲಿ ಎ ಅನಗಲೆ | HC |
| ಪ್ರದೀಪ್ ನಾಯಕ್ | RSI | ವಿಜಯ ಕುಮಾರ್ ರೈ | HC |
| ಆರ್ ಸುಬ್ರಮಣಿ | RSI | ಬೀರಪ್ಪ ಬಿ | HC |
| ಮಂಜುನಾಥ್ | RSI | ಸುವರ್ಣ | PC |
| ಕಾರ್ತಿಕ್ ಬಿ ಎಸ್ | RSI | ಷರೀಫ್ ಎಂ | PC |
| ನಿಸಾರ್ ಅಹಮದ್ | RSI | ಆರೀಫ್ ಮುದನಾಳ್ | PC |
| ಕೆ ಎಂ ಶಿವಶೇಖರ | RSI | ಪ್ರವೀಣ್ ಬಿಳಗಿಮಠ | PC |
| ಚಂದ್ರಶೆಟ್ಟಿ | ASI | ರಾಘವೇಂದ್ರ ಹೆಚ್ ಬಿ | PC |
| ಕೃಷ್ಣ ಸಿ ಎನ್ | ASI | ರವಿ ಜಿ ಎನ್ | Follower |
| ಜೋಷಿ ಕುಟ್ಟಪ್ಪ | ASI | ರಮೇಶ್ ಎಂ | HC |
| ಮಮತಾ ಎಂ | ASI | ಹನುಮಂತಪ್ಪ ಶಿರೀಹಳ್ಳಿ | PSI |
| ಸೌಮ್ಯಲತಾ ಡಿ | ASI | ಅಣ್ಣಪ್ಪ ಎನ್ | HC |
| ರತ್ನಮ್ಮ ಕೆ | ASI | ಗುರುಸ್ವಾಮಿ | ASI |
| ಬಿ ಎಂ ಹಫೀದುನ್ನೀಸ | ASI | ಎನ್ ವರದರಾಜು | ARSI |
| ಮಹೇಂದ್ರ ಹೆಚ್ ಪಿ | ASI | ವಸಂತ್ ಕುಮಾರ್ | HC |
| ಅಶೋಕ ಎಸ್ ಜಿ | ASI | ಕೆ ಎಂ ಆನಂದ | PC |
| ತಿಲಕ್ ರಾಜ್ | ASI | ಮಣಿ ಎಂ ಎನ್ | HC |
| ರವಿಕುಮಾರ | ASI | ಸತೀಶ್ ಹೆಚ್ | HC |
| ಪ್ರಕಾಶ್ ಡಿ ನಾಯಕ್ | HC | ರಘುರಾಜ್ ಎಸ್ | RSI |
| ನಾಗರಾಜು | HC | ಮಹಮ್ಮದ್ ಶಬ್ಬಿರ್ | HC |
| ಫ್ರಾಂಕಿ ಎಬಿನೇಚರ್ | HC | ಜಗದೀಶ್ ಕಾದ್ರೋಳ್ಳಿ | HC |
| ಡಾ. ಸಂತೋಷ್ ಶೆಟ್ಟಿ | HC | ಗಿರೀಶ್ ಟಿ ಎಸ್ | HC |
| ಜಾಫರ್ ಬಚ್ಚೇರಿ | HC | ರಾಮನಗೌಡ ಬಿರಾದರ | PC |
| ಸಂತೋಷ್ ಎಂ | HC | ಚಿದಾನಂದ ಗಿಡಗಂಚಿ | PC |
| ನವೀನ್ ಬಿ ಎಸ್ | HC | ಗಿರೀಶ ಜಿ ಬಿ | PC |
| ಸುನೀಲ್ ವಿಷ್ಣು ಕಾಂಬ್ಳೆ | HC | ಅಭಿಷೇಕ್ ಗೌಡ ಎಂ | PC |
| ಪ್ರಸನ್ನ ಕುಮಾರ್ ಬಿ ಎನ್ | HC | ಪರಶುರಾಮ | PSI |
| ಬಿ ವಿ ಅಶೋಕ | HC | ಈರಪ್ಪ ಪೂಜಾರಿ | HC |
| ಅಬ್ದುಲ್ ರಜಾಕ್ | HC | ಡಿ ಎಸ್ ಬಸವರಾಜು | Follower |
| ಗಿರೀಶ್ ಬಿ ಎಸ್ | HC | ವಿರೇಶ್ ಎ ಜೋಳದ | HC |
| ರಾಮನಾಥ್ ಎಸ್ ಪತ್ತೆಗಾರ್ | HC | ನಾಗರತ್ನಮ್ಮ ಹೆಚ್ ಎಸ್ | HC |
| ಲಲಿತಾಲಕ್ಷ್ಮಿ | HC | ರೇವಣ್ಣ | HC |
| ಸುಮಾಲತಾ ಎಸ್ | HC | ಜಯಕುಮಾರ್ | HC |
| ರಾಘವೇಂದ್ರ ಜಿ | HC | ರಾಘವೇಂದ್ರ ಎಸ್ ಪಿ | HC |
| ರಾಜಕುಮಾರ್ ಜೆ ಭೋಸಗಿ | HC | ಮಂಜುನಾಥ ಟಿ | HC |
| ಮಂಜುನಾಥ ಸಿ | HC | ದಿವಾಕರ ವಿ ಎಂ | HC |
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದ್ದ ಸವಾಲಿನ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ವಿಜಯಪುರ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ ಘೋಷಣೆಯಾಗಿದೆ. ಜಿಲ್ಲೆಯ ಮೂವರು ಹಿರಿಯ ಅಧಿಕಾರಿಗಳು ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಜಿಬಿಎ ಅಡಿಯಲ್ಲಿನ ಐದು ಪಾಲಿಕೆಗಳ ಬಜೆಟ್ ಮಂಡನೆ; ಬೆಂಗಳೂರಿನ ಅಭಿವೃದ್ಧಿಗೆ 20,213 ಕೋಟಿ ರೂ
2025ರ ಮೇ 25ರಂದು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣವನ್ನು ಬೆನ್ನಟ್ಟಿದ ಈ ಅಧಿಕಾರಿಗಳ ತಂಡ, ಅತ್ಯಂತ ಚಾಕಚಕ್ಯತೆಯಿಂದ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇವರ ಈ ಶ್ಲಾಘನೀಯ ಸೇವೆಯನ್ನು ಗುರುತಿಸಿ ಸರ್ಕಾರ ಈ ಪದಕವನ್ನು ನೀಡಿದೆ. ಈ ಸಾಧನೆಗೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಲಕ್ಷ್ಮಣ ನಿಂಬರಗಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.