AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ

ಕರ್ನಾಟಕದಲ್ಲಿ 23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ, ಇಬ್ಬರು ಐಜಿಪಿ ಆಗಿ ಬಡ್ತಿ ಮತ್ತು 20 ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಸಿದೆ. ಆ ಮೂಲಕ ಸರ್ಕಾರ ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದೆ.

ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on:Dec 31, 2025 | 8:28 PM

Share

ಬೆಂಗಳೂರು, ಡಿಸೆಂಬರ್​ 31: ಸರ್ಕಾರ ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದೆ. 23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, 20 ಐಪಿಎಸ್(IPS) ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ (karnataka government) ಬುಧವಾರ ಆದೇಶ ಹೊರಡಿಸಿದೆ.

23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ

  • ಭೀಮಾಶಂಕರ್ ಗುಳೇದ್-ಡಿಐಜಿಪಿ, ಸಿಐಡಿ ಆರ್ಥಿಕ ಅಪರಾಧ
  • ಇಲಕ್ಕಿಯ ಕರುಣಾಗರನ್-ಡಿಐಜಿಪಿ, ವೈರ್‌ಲೆಸ್​​
  • ವೇದಮೂರ್ತಿ-ಡಿಐಜಿಪಿ, ರಾಜ್ಯ ಗುಪ್ತಚರ
  • ಕೆ.ಎಂ.ಶಾಂತರಾಜು-ಡಿಐಜಿಪಿ, ಐಎಸ್‌ಡಿ
  • ಹನುಮಂತರಾಯ-ಡಿಐಜಿಪಿ, ಎಸ್‌ಹೆಚ್‌ಆರ್‌ಸಿ
  • ಡಿ.ದೇವರಾಜು-ಡಿಐಜಿಪಿ, ಪೊಲೀಸ್‌ ತರಬೇತಿ
  • ಡಾ.ಸಿರಿ ಗೌರಿ-ಡಿಐಜಿಪಿ, ಕರ್ನಾಟಕ ಲೋಕಾಯುಕ್ತ
  • ಡಾ.ಕೆ.ಧರಣಿದೇವಿ-ಡಿಐಜಿಪಿ, ಗುಪ್ತಚರ
  • ಎಸ್.ಸವಿತಾ-ಡಿಐಜಿಪಿ, ಗೃಹರಕ್ಷಕ ದಳ
  • ಸಿ.ಕೆ.ಬಾಬಾ-ಡಿಐಜಿಪಿ ಕೆಎಸ್‌ಆರ್‌ಪಿ
  • ಅಬ್ದುಲ್ ಅಹದ್-ನಿರ್ದೇಶಕರು, ಬಿಎಂಟಿಸಿ
  • ಎಸ್.ಗಿರೀಶ್-ಡಿಐಜಿಪಿ, ಎಎನ್‌ಟಿಎಫ್​
  • ಎಂ.ಪುಟ್ಟಮಾದಯ್ಯ-ಡಿಐಜಿಪಿ, ಪ್ರಾಂಶುಪಾಲ, ಪಿಟಿಸಿ ಕಲಬುರಗಿ
  • ಟಿ.ಶ್ರೀಧರ್‌-ಡಿಐಜಿಪಿ ಮುಖ್ಯ ಕಚೇರಿ
  • ಎ.ಎನ್.ಪ್ರಕಾಶ್ ಗೌಡ-ಡಿಐಜಿಪಿ, ಎಸ್‌ಎಎಫ್​
  • ಜಿನೇಂದ್ರ ಖನಗಾವಿ-ಡಿಐಜಿಪಿ, ಕಾರಾಗೃಹ
  • ಜೆ.ಕೆ.ರಶ್ಮಿ-ಡಿಐಜಿಪಿ, ರೈಲ್ವೆ
  • ಟಿ.ಪಿ.ಶಿವಕುಮಾರ್-ಡಿಐಜಿಪಿ, ಎಸ್‌ಸಿಆರ್‌ಬಿ
  • ವಿಷ್ಣುವರ್ಧನ್-ನಿರ್ದೇಶಕ, ಕೆಪಿಎ
  • ಡಾ.ಸಂಜೀವ್ ಎಂ ಪಾಟೀಲ್-ಡಿಐಜಿಪಿ ಜನರಲ್(ಅಪ್‌ಗ್ರೇಡ್)
  • ಕೆ.ಪರಶುರಾಮ-ಡಿಐಜಿಪಿ, ಸಿಟಿಆರ್‌ಎಸ್​
  • ಹೆಚ್‌.ಡಿ.ಆನಂದ್ ಕುಮಾರ್-ಡಿಐಜಿಪಿ, ಸೈಬರ್ ಕಮಾಂಡ್​
  • ಕಲಾ ಕೃಷ್ಣಸ್ವಾಮಿ-ಡಿಐಜಿಪಿ, ಅಪರಾಧ (ಅಪ್‌ಗ್ರೇಡ್)

ಐಜಿಪಿ ಆಗಿ ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನಿಯೋಜಿತ ಸ್ಥಳ

  • ಡಾ.ಎಂ.ಬಿ.ಬೋರಲಿಂಗಯ್ಯ- ಐಜಿಪಿ, ದಕ್ಷಿಣ ವಲಯದಲ್ಲಿ ಮುಂದಿವರಿಕೆ
  • ಅಜಯ್ ಹಿಲೋರಿ- ಐಜಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ ಬೆಂಗಳೂರು ಮುಂದುವರಿಕೆ

ವರ್ಗಾವಣೆಗೊಂಡ 20 IPS ಅಧಿಕಾರಿಗಳು 

  • ಚಂದ್ರಕಾಂತ್.ಎಂ.ವಿ-ಬೆಂಗಳೂರು ಗ್ರಾಮಾಂತರ ಎಸ್‌ಪಿ
  • ಸೈದುಲು ಅಡಾವತ್-ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ
  • ಯತೀಶ್.ಎನ್-ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ
  • ಕೆ.ರಾಮರಾಜನ್-ಬೆಳಗಾವಿ ಎಸ್‌ಪಿ
  • ಬಿ.ನಿಖಿಲ್-ಶಿವಮೊಗ್ಗ ಎಸ್‌ಪಿ
  • ಅರುಣಾಂಗ್ಶು ಗಿರಿ-ರಾಯಚೂರು ಎಸ್‌ಪಿ
  • ಶುಭನ್ವಿತಾ-ಹಾಸನ ಎಸ್‌ಪಿ
  • ಮಿಥುನ್ ಕುಮಾರ್-ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ
  • ವಿಕ್ರಮ್ ಆಮ್ಟೆ-ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ
  • ಜಿತೇಂದ್ರ ಕುಮಾರ್ ದಯಾಮ್-ಚಿಕ್ಕಮಗಳೂರು ಎಸ್‌ಪಿ
  • ಕನ್ನಿಕಾ ಸುಕ್ರಿವಾಲ್-ಕೋಲಾರ ಎಸ್‌ಪಿ
  • ಬಿಂದು ಮಣಿ-ಕೊಡಗು ಎಸ್‌ಪಿ
  • ಮೊಹಮ್ಮದ್ ಸುಜೀತಾ.ಎಂ.ಎಸ್-ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ
  • ಶೋಭಾರಾಣಿ-ಮಂಡ್ಯ ಎಸ್‌ಪಿ
  • ಸಾರಾ ಫಾತಿಮಾ-ಎಸ್‌ಪಿ, ರೈಲ್ವೆ
  • ಮುತ್ತುರಾಜು.ಎಂ-ಚಾಮರಾಜನಗರ ಎಸ್‌ಪಿ
  • ಡಾ.ಕವಿತಾ.ಬಿ.ಟಿ-ಸಿಐಡಿ, ಡಿಸಿಪಿ
  • ಸಜೀತ್-ಸಿಐಡಿ ಎಸ್‌ಪಿ
  • ಪವನ್ ನೆಜ್ಜೂರ್-ಬಳ್ಳಾರಿ ಎಸ್‌ಪಿ
  • ಮೈಸೂರು ಎಸ್‌ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ ವರ್ಗಾವಣೆಗೊಳಿಸಲಾಗಿದೆ.

ವರದಿ: ಪ್ರದೀಪ್​​ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:28 pm, Wed, 31 December 25