ಕಾರವಾರ: ವಿಶ್ವವಿಖ್ಯಾತ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ತುಂಬಿ ನಿತ್ಯ ಪೂಜಾ ವಿಧಿವಿಧಾನಕ್ಕೆ ಕೆಲಕಾಲ ವಿಳಂಬವಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ತಕ್ಷಣ ದೇವಾಲಯದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಉಪಸ್ಥಿತಿಯಲ್ಲಿ ಸಿಬ್ಬಂದಿಗಳೇ ಸೇರಿ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ.
ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ದೇವಾಲಯದ ತೀರ್ಥ, ಅಭಿಷೇಕದ ನೀರು ಹೋಗುವ ಸೋಮಸೂತ್ರ ನಾಲೆಯನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಸ್ವಚ್ಛಗೊಳಿಸಿಲ್ಲ. ಜತೆಗೆ ಗ್ರಾಮ ಪಂಚಾಯತ್ ವತಿಯಿಂದ ಈ ನೀರು ಸೇರುವ ಸಂಗಮ ನಾಲೆಯಲ್ಲಿ ಮರಳಿನ ಚೀಲವನ್ನು ಅಡ್ಡಲಾಗಿ ಹಾಕಲಾಗಿದೆ. ಇದರಿಂದ ಹರಿದು ಹೋದ ನೀರು ವಾಪಸ್ ಬರುತ್ತಿದೆ ಎನ್ನಲಾಗಿದೆ.
ಕಾಲುವೆ ಕುಸಿದಿದೆ
ಮಂದಿರದಿಂದ ಸಂಗಮ ನಾಲೆಗೆ ಸೇರಲು 300 ಮೀಟರ್ ಅಧಿಕ ಉದ್ದದ ಕಾಲುವೆ ಇದ್ದು, ಈ ಕಾಲುವೆ ಖಾಸಗಿ ಜಮೀನಿನಲ್ಲಿ ಹಾದುಹೋಗಿದೆ. ಏಳು ಅಡಿ ಆಳವಾದ ಈ ಕಾಲುವೆಗೆ ಎರಡು ಕಡೆ ಕಟ್ಟೆ ( ಪಿಚ್ಚಿಂಗ್) ಕಟ್ಟಲಾಗಿತ್ತು. ಆದರೆ ಬಹು ಪುರಾತನ ಕಾಲುವೆ ಕಟ್ಟಿದ ಕಟ್ಟೆ ಹಲವೆಡೆ ಕುಸಿದು ಬಿದ್ದಿದ್ದು, ಚಿಕ್ಕ ಜಾಗದಲ್ಲಿ ನೀರು ಹೋಗುತ್ತಿದೆ . ಇದನ್ನು ತೆರವುಗೊಳಿಸಿ, ಹೊಸದಾಗಿ ಕಾಲುವೆಯ ಅಂಚನ್ನು ಕಟ್ಟಿಕೊಡಬೇಕಾಗಿರುವುದು ತುರ್ತು ಅವಶ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಲಾಕ್ಡೌನ್ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ
ಗೋಕರ್ಣ ಕ್ಷೇತ್ರಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ; ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಯೋಜನೆಗೆ ಚಾಲನೆ
(Karnataka Rain water reach Gokarna Mahabaleshwar Temple some problem for worship)