ಬೆಂಗಳೂರು: ಉಪಚುನಾವಣೆ ಹಿನ್ನೆಲೆ ಮಾಜಿ ಐಪಿಎಸ್ ಅಧಿಕಾರಿ ಮತ್ತು ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಕೆ.ಸಿ.ರಾಮಮೂರ್ತಿ ಆಸ್ತಿ ಮೌಲ್ಯ 26.5 ಕೋಟಿ ರೂಪಾಯಿ. ₹10.5 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ₹16 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.ಪತ್ನಿ ಸಬಿತಾ ರಾಮಮೂರ್ತಿ ಹೆಸರಲ್ಲಿ ₹61.5 ಕೋಟಿ ಆಸ್ತಿ ಇದೆ. ಅದರಲ್ಲಿ ₹22.97 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ₹39.5 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಕೆ.ಸಿ.ರಾಮಮೂರ್ತಿ ಹೆಸರಲ್ಲಿ 3.6 ಕೋಟಿ ರೂಪಾಯಿ ಸಾಲ ಇದ್ದು, ಪತ್ನಿ ಹೆಸರಲ್ಲಿ 23 ಕೋಟಿ ರೂಪಾಯಿ ಸಾಲ ಇದೆ.
Published On - 8:00 pm, Fri, 29 November 19