ಕಟಪಾಡಿಯಲ್ಲಿ ಭಜನಾ ಕೂಟ: ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ
ಉಡುಪಿ: ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ಯುವ ಸಮೂಹಕ್ಕಾಗಿ ಭಜನಾ ಕೂಟ ಆಯೋಜಿಸಲಾಗಿತ್ತು. ಈ ಭಜನಾ ಕೂಟದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಡ್ರೆಸ್ ತೊಟ್ಟು ಮಿರ ಮಿರ ಮಿಂಚಿದ್ರು. ಅಲ್ದೇ ತಾಳಕ್ಕೆ ತಕ್ಕಂತೆ ಯುವಕರು ಡ್ಯಾನ್ಸ್ ಮಾಡಿದ್ರು. ಇತ್ತ ದಾಸರ ಕೀರ್ತನೆಗಳಿಗೆ ಯುವತಿಯರು ನೃತ್ಯ ಮಾಡೋ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ರು. ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು: ಇನ್ನು, ಯುವವಾಹಿನಿ ಸಂಘಟನೆಯವರು ವಿವಿಧ ತಂಡಗಳನ್ನು ಆಹ್ವಾನಿಸಿ ಕುಣಿತ, ಭಜನೆ ಏರ್ಪಡಿಸಿದ್ರು. ಪರಸ್ಪರ ಸ್ಪರ್ಧೆಗೆ ಇಳಿದವರಂತೆ […]
ಉಡುಪಿ: ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ಯುವ ಸಮೂಹಕ್ಕಾಗಿ ಭಜನಾ ಕೂಟ ಆಯೋಜಿಸಲಾಗಿತ್ತು. ಈ ಭಜನಾ ಕೂಟದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಡ್ರೆಸ್ ತೊಟ್ಟು ಮಿರ ಮಿರ ಮಿಂಚಿದ್ರು. ಅಲ್ದೇ ತಾಳಕ್ಕೆ ತಕ್ಕಂತೆ ಯುವಕರು ಡ್ಯಾನ್ಸ್ ಮಾಡಿದ್ರು. ಇತ್ತ ದಾಸರ ಕೀರ್ತನೆಗಳಿಗೆ ಯುವತಿಯರು ನೃತ್ಯ ಮಾಡೋ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ರು.
ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು: ಇನ್ನು, ಯುವವಾಹಿನಿ ಸಂಘಟನೆಯವರು ವಿವಿಧ ತಂಡಗಳನ್ನು ಆಹ್ವಾನಿಸಿ ಕುಣಿತ, ಭಜನೆ ಏರ್ಪಡಿಸಿದ್ರು. ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಭಾವಪರವಶರಾಗಿ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದ್ರು. ದಾಸರ ಕೀರ್ತನೆಗಳನ್ನು ರಾಗವಾಗಿ ಹಾಡುತ್ತಾ, ಹೆಜ್ಜೆ ಹಾಕಿ ಮೈ ಮರೆತ್ರು. ಯುವಜನಾಂಗಕ್ಕೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ ಆಯೋಜಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು.
ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ನಿಂತು ಹಾಡಿದರೆ ದೇವರು ಕುಣಿವ. ಕುಣಿದು ಹಾಡಿದರೆ ದೇವರು ಒಲಿವ ಅನ್ನೋ ಮಾತಿದೆ. ಇಷ್ಟು ದಿನ ಟ್ರಿಪ್.. ಮೋಜು ಮಸ್ತಿ ಅನ್ಕೊಂಡು ಬ್ಯುಸಿ ಇದ್ದ ಯುವ ಸಮೂಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಫುಲ್ ಥ್ರಿಲ್ ಆಗಿದ್ದಂತೂ ನಿಜ.
Published On - 8:42 am, Sat, 30 November 19