ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್‌ಗಾಗಿ ಅನೇಕರು ಸರತಿ ಸಾಲಲ್ಲಿ ನಿಂತಿದ್ದರು. ಆದ್ರೆ ನವರಸ ನಾಯಕ ಜಗ್ಗೇಶ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಸದ್ಯ ರಾಜ್ಯಸಭೆ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ. ನಿರ್ಮಲಾ ಒಟ್ಟು ಆಸ್ತಿ ಮೌಲ್ಯ 2,50,99,396 ರೂ. ಸ್ಥಿರಾಸ್ತಿ 1,87,60,200, ಚರಾಸ್ತಿ 63,39,196 ರೂ.
ನಿರ್ಮಲಾ ಬಳಿ 315 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇದೆ. ಹಾಗೂ ಅವರ ಕೈಯಲ್ಲಿರುವ ಹಣ 17,200 ರೂಪಾಯಿ. ಬ್ಯಾಂಕ್ನಲ್ಲಿ 45,04,479 ರೂಪಾಯಿ ಎಫ್ಡಿ ಇದೆ. ನಿರ್ಮಲಾ ಬಳಿ 1 ಸ್ಕೂಟರ್ ಇದೆ. ಇವರು 30,44,838 ರೂ. ಸಾಲ ಪಡೆದಿದ್ದಾರೆ. ಕುಟುಂಬಸ್ಥರಿಗೆ ನೀಡಿದ ಸಾಲ 3,50,000 ರೂ. ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಕುಂಟನೂರು ಗ್ರಾಮದಲ್ಲಿ 4806 ಚ. ಅಡಿ ಜಮೀನು ಖರೀದಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: Salman Khan: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ
ಇನ್ನು ಮತ್ತೊಂದೆಡೆ ರಾಜ್ಯಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೂಡ ಆಸ್ತಿ ವಿವರ ನೀಡಿದ್ದಾರೆ.
ಕುಪೇಂದ್ರ ರೆಡ್ಡಿ ಆಸ್ತಿ ವಿವರ ಹೀಗಿದೆ
ಒಟ್ಟು ಆಸ್ತಿ -575,89,75,550 ರೂ.
ಸ್ಥಿರಾಸ್ತಿ -222,47,60,624 ರೂ.
ಚರಾಸ್ತಿ-353,42,14,926 ರೂ.
ಕೈಯಲ್ಲಿರುವ ಹಣ: 21,12,381 ರೂ.
ಪತ್ನಿ ಬಳಿ ಇರುವ ಹಣ- 43,41,108 ರೂ.
ಆಭರಣ-1,74,35,500 ರೂ. ಮೌಲ್ಯ
ಪತ್ನಿ ಬಳಿ ಆಭರಣ-3,51,77,870 ರೂ. ಮೌಲ್ಯ
ಕೃಷಿ ಭೂಮಿ- 20,91,54,125 ರೂ. ಮೌಲ್ಯ
ಮನೆ – 4,42,74,259 ರೂ. ಮೌಲ್ಯ
ವಾಣಿಜ್ಯ ಮಳಿಗೆಗಳು – 92,01,74,990 ರೂ.
ಕಾರು -1 ಆಡಿ, 2 ಟೊಯೊಟಾ ಫಾರ್ಚ್ಯೂನರ್
ಸಾಲ – 67,29,87,928 ರೂ.
ತೆರಿಗೆ ಬಾಕಿ – 3,40,501 ರೂ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:58 pm, Tue, 31 May 22