Karnataka Covid Update: ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ದೃಢ, ರಾಜ್ಯದ ಪಾಸಿಟಿವಿಟಿ ದರ ಶೇ.14.95

Bengaluru Covid Update: ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 4,889 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದ್ದು, 278 ಜನರ ನಿಧನರಾಗಿದ್ದಾರೆ.

Karnataka Covid Update: ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ದೃಢ, ರಾಜ್ಯದ ಪಾಸಿಟಿವಿಟಿ ದರ ಶೇ.14.95
ಆರೋಗ್ಯ ಸಚಿವ ಡಾ.ಕೆ ಸುಧಾಕರ್
Follow us
guruganesh bhat
|

Updated on:May 29, 2021 | 8:15 PM

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 492 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ 42,444 ಜನರು ಸೋಂಕುಮುಕ್ತರಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ 21,126 ಜನರು ಕೊವಿಡ್​ನಿಂದ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಕೊವಿಡ್ ಟೆಸ್ಟಿಂಗ್​ ಪಾಸಿಟಿವಿಟಿ ದರ ಶೇ.14.95ರಷ್ಟಿದ್ದು, ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.8.97ರಷ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 4,889 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದ್ದು, 278 ಜನರ ನಿಧನರಾಗಿದ್ದಾರೆ.

ಇಂದು ಖಚಿತಪಟ್ಟ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,67,449ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 21,89,064 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 28298 ಜನರ ಸಾವನ್ನಪ್ಪಿದ್ದು, 3,50,066 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಸೋಂಕಿತರ ಅಂಕಿ ಅಂಶ ಬಾಗಲಕೋಟೆ 166, ಬಳ್ಳಾರಿ 671, ಬೆಳಗಾವಿ 1027, ಬೆಂಗಳೂರು ಗ್ರಾಮಾಂತರ 557, ಬೆಂಗಳೂರು ನಗರ 4889, ಬೀದರ್ 42, ಚಾಮರಾಜನಗರ 365, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 843, ಚಿತ್ರದುರ್ಗ 763, ದಕ್ಷಿಣ ಕನ್ನಡ 923, ದಾವಣಗೆರೆ 449, ಧಾರವಾಡ 519, ಗದಗ 307, ಹಾಸನ 1024, ಹಾವೇರಿ 194, ಕಲಬುರಗಿ 107, ಕೊಡಗು 333, ಕೋಲಾರ 684, ಕೊಪ್ಪಳ 350 ಮಂಡ್ಯ 453, ಮೈಸೂರು 1720, ರಾಯಚೂರು 340, ರಾಮನಗರ 181, ಶಿವಮೊಗ್ಗ 672, ತುಮಕೂರು 1102, ಉಡುಪಿ 684, ಉತ್ತರ ಕನ್ನಡ 536, ವಿಜಯಪುರ 210, ಯಾದಗಿರಿ ಜಿಲ್ಲೆಯಲ್ಲಿಂದು 83 ಕೊರೊನಾ ಪ್ರಕರಣ ಪತ್ತೆಯಾಗಿದೆ.

ಜಿಲ್ಲಾವಾರು ಮೃತರ ಅಂಕಿ ಅಂಶ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 492 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆ 278, ಮೈಸೂರು ಜಿಲ್ಲೆ 28, ಧಾರವಾಡ ಜಿಲ್ಲೆ 19, ಬೆಂಗಳೂರು ಗ್ರಾಮಾಂತರ ಜಿಲ್ಲೆ 16, ಉತ್ತರ ಕನ್ನಡ ಜಿಲ್ಲೆ 15, ಬಳ್ಳಾರಿ, ಶಿವಮೊಗ್ಗ ಜಿಲ್ಲೆ 14, ತುಮಕೂರು ಜಿಲ್ಲೆ 13, ಬೆಳಗಾವಿ, ಹಾಸನ ಜಿಲ್ಲೆ 9, ಚಾಮರಾಜನಗರ, ದಕ್ಷಿಣ ಕನ್ನಡ, ಹಾವೇರಿ ಜಿಲ್ಲೆ 7, ಚಿಕ್ಕಬಳ್ಳಾಪುರ ಜಿಲ್ಲೆ 6, ಚಿಕ್ಕಮಗಳೂರು, ದಾವಣಗೆರೆ, ಗದಗ ಜಿಲ್ಲೆಗಳಲ್ಲಿ ತಲಾ ಐವರು, ಕೊಡಗು, ಕೋಲಾರ, ಮಂಡ್ಯ ಜಿಲ್ಲೆ 4, ರಾಯಚೂರು, ವಿಜಯಪುರ, ಕಲಬುರಗಿ, ಉಡುಪಿ, ಯಾದಗಿರಿ, ಬೀದರ್  ಜಿಲ್ಲೆ 3, ಬಾಗಲಕೋಟೆ ಜಿಲ್ಲೆ 2, ಚಿತ್ರದುರ್ಗ ಜಿಲ್ಲೆ ಓರ್ವ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Covid Warriors: ಇನ್ಮುಂದೆ ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರೂ ಕೊವಿಡ್ ವಾರಿಯರ್ಸ್​

ಕೊವಿಡ್​ನಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ ಫಂಡ್​ನಿಂದ ಪ್ರತಿ ತಿಂಗಳು ಸ್ಟೈಫಂಡ್, ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರ

(Karnataka records 20,628 new covid cases positivity rate is 14.95 percent tweets health minister Dr k Sudhakar)

Published On - 7:58 pm, Sat, 29 May 21