AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿತರ ಸಂಖ್ಯೆಯಲ್ಲಿ ಕರುನಾಡ ದಾಖಲೆ, ಒಂದೇ ದಿನ 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ಕ್ರೂರಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೇ ಜಾಸ್ತಿಯಾಗ್ತಿದೆ. ಒಂದ್ಕಡೆ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಬರಿತ್ತಿದ್ರೆ, ಮತ್ತೊಂದು ಕಡೆ ಇಡೀ ದೇಶದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂಬರ್ ಓನ್ ಆಗ್ತಿದೆ. ಅದರಲ್ಲೂ ಕಳೆದ ಮೂರು ದಿನಗಳ ಅಂಕಿ ಅಂಶಗಳನ್ನ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ. ರಾಜ್ಯದಲ್ಲಿ ನಿತ್ಯವೂ ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ ಹೌದು, ಮಹಾಮಾರಿ ಡೆಡ್ಲಿ ವೈರಸ್ ಕೊರೊನಾ ದಿನ ದಿನವೂ ರಾಜ್ಯಕ್ಕೆ ಮಹಾಕಂಟಕವಾಗಿ ಕಾಡ್ತಿದೆ. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ […]

ಸೋಂಕಿತರ ಸಂಖ್ಯೆಯಲ್ಲಿ ಕರುನಾಡ ದಾಖಲೆ, ಒಂದೇ ದಿನ 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಕೊರೊನಾ ವೈರಸ್
ಆಯೇಷಾ ಬಾನು
|

Updated on: Oct 10, 2020 | 7:08 AM

Share

ಬೆಂಗಳೂರು: ಕ್ರೂರಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೇ ಜಾಸ್ತಿಯಾಗ್ತಿದೆ. ಒಂದ್ಕಡೆ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಬರಿತ್ತಿದ್ರೆ, ಮತ್ತೊಂದು ಕಡೆ ಇಡೀ ದೇಶದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂಬರ್ ಓನ್ ಆಗ್ತಿದೆ. ಅದರಲ್ಲೂ ಕಳೆದ ಮೂರು ದಿನಗಳ ಅಂಕಿ ಅಂಶಗಳನ್ನ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ.

ರಾಜ್ಯದಲ್ಲಿ ನಿತ್ಯವೂ ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ ಹೌದು, ಮಹಾಮಾರಿ ಡೆಡ್ಲಿ ವೈರಸ್ ಕೊರೊನಾ ದಿನ ದಿನವೂ ರಾಜ್ಯಕ್ಕೆ ಮಹಾಕಂಟಕವಾಗಿ ಕಾಡ್ತಿದೆ. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹತ್ತು ಸಾವಿರ ಗಡಿ ದಾಟುತ್ತಿದೆ. ಏರಿಯಾ.. ಗಲ್ಲಿ ಗಲ್ಲಿ.. ಊರಿಗೆ ಊರೇ ಕೊರೊನಾಮಯವಾಗ್ತಿದ್ಯಾ ಅನ್ನೋ ಆತಂಕ ಶುರುವಾಗಿದೆ. ಅಂದಹಾಗೆ ಕಳೆದ ಮೂರು ದಿನಗಳ ಕೊರೊನಾ ಸೋಂಕಿತರ ಸಂಖ್ಯೆ ನೋಡೋದಾದ್ರೆ,

10 ಸಾವಿರ ಗಡಿ ದಾಟಿದ ಸೋಂಕಿತರು ರಾಜ್ಯದಲ್ಲಿ ಅಕ್ಟೋಬರ್ 7ರಂದು ಸೋಂಕಿತರ ಸಂಖ್ಯೆ 10947 ಇದ್ರೆ, ಅಕ್ಟೋಬರ್ 8ರಂದು 10704 ಮಂದಿಗೆ ಸೋಂಕು ತಗುಲಿದೆ. ಇನ್ನು ಅಕ್ಟೋಬರ್ 9ರಂದು 10913 ಜನರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.

ಕೊರೊನಾ ಹಾಟ್ ಸ್ಪಾಟ್ ಆಗಿದೆ ಸಿಲಿಕಾನ್ ಸಿಟಿ ಬೆಂಗಳೂರು! ಡೆಡ್ಲಿ ವೈರಸ್ ಕೊರೊನಾ ಬೆಂಗಳೂರಿಗರನ್ನ ಬಿಟ್ಟುಬಿಡದೇ ಕಾಡ್ತಿದೆ. ಬೆಂಗಳೂರು ಸಿಟಿ ಮಂದಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಕೊರೊನಾ ಏನೂ ಮಾಡಲ್ಲ ಅಂತಾ ಬೇಕಾಬಿಟ್ಟಿಯಾಗಿ ಅಡ್ಡಾಡೋರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಡಾಂತರ ಗ್ಯಾರಂಟಿ ಅನ್ನೋ ಸಂದೇಶ ನೀಡ್ತಿದೆ ಈ ಹೆಮ್ಮಾರಿ. ಮುಂದಿನ ದಿನಗಳಲ್ಲಿ ಬೆಂಗಳೂರು ಮಂದಿ ಪಾಲಿಗೆ ಭಾರೀ ಮಾರಕವಾಗೋ ಭೀತಿ ಶುರುವಾಗಿದೆ.

ಬೆಂಗಳೂರಿನಲ್ಲಿ ಐದು ಸಾವಿರ ಗಡಿ ದಾಟ್ತಿದೆ ಕೊರೊನಾ ಹೆಮ್ಮಾರಿ! ಯಸ್.. ಬೆಂಗಳೂರು ಜನರೇ ಎಚ್ಚರ ಎಚ್ಚರ ಅಂತಾ ಎಷ್ಟೇ ಭಾರೀ ಹೇಳಿದ್ರು ಕಡಿಮೆನೇ, ರ‍ಾಜ್ಯದ ರಾಜಧಾನಿಯಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಇಡೀ ದೇಶದಲ್ಲೇ ಬೆಂಗಳೂರು ನಂಬರ್ ಒನ್ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಯಾಕೆಂದ್ರೆ ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಕೊರೊನಾ ಆರ್ಭಟ. ದಿನಕ್ಕೆ ಐದು ಸಾವಿರ ಗಡಿ ದಾಟಿದ ಮೊದಲ ಸಿಟಿ ಬೆಂಗಳೂರು ಅನ್ನೋ ಅಪಖ್ಯಾತಿಗೆ ಗುರಿಯಾಗ್ತಿದೆ.

ಕೊರೊನಾ ಹಾಟ್‌ಸ್ಪಾಟ್ ಬೆಂಗಳೂರು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಬೆಂಗಳೂರೇ ನಂಬರ್ ಒನ್ ಆಗಿದೆ. ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ಸಿಟಿಗಳನ್ನ ಬೆಂಗಳೂರನ್ನ ಹಿಂದಿಕ್ಕಿದೆ. ದೇಶದ ಬೇರೆ ಸಿಟಿಗಳಲ್ಲಿ ದಿನಕ್ಕೆ 2 ರಿಂದ 3 ಸಾವಿರದಷ್ಟು ಕೇಸ್ ಪತ್ತೆಯಾಗ್ತಿದೆ. ಆದ್ರೆ ಬೆಂಗಳೂರಿನಲ್ಲಿ ದಿನಕ್ಕೆ ಐದು ಸಾವಿರದಷ್ಟು ಕೇಸ್ ಪತ್ತೆಯಾಗ್ತಿದೆ. 3 ಸಾವಿರದ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ದಿಢೀರ್ 5 ಸಾವಿರಕ್ಕೆ ಏರಿಕೆಯಾಗಿದೆ. ಚಳಿಗಾಲ ಇರುವುದರಿಂದ ಸೋಂಕಿತರು ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ ಬೆಂಗಳೂರು ಜನತೆ ಈ ಸಮಯದಲ್ಲಿ ತುಂಬಾ ಎಚ್ಚರವಹಿಸಬೇಕು ಅಂತಿದ್ದಾರೆ ತಜ್ಞರು.

ಒಟ್ನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ, ಮುಂದಿನ ದಿನಗಳಲ್ಲಿ ಕೊರೊನಾ ಮಹಾಮಾರಿ ಬೆಂಗಳೂರು ಜನರನ್ನ ಮತ್ತಷ್ಟು ಕಾಡೋದು ಗ್ಯಾರಂಟಿ.