ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ತಡೆಗೆ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಕರ್ನಾಟಕ ಸಾಂಕ್ರಾಮಿಕ ರೋಗ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸಮಾರಂಭ, ರ್ಯಾಲಿ, ಸಂಭ್ರಮಾಚರಣೆಗಳಿಗೆ ಬ್ರೇಕ್ ಹಾಕಿದೆ.
ಹೊಸ ವರ್ಷಾಚರಣೆ, ಗ್ರಾಮ ಪಂಚಾಯಿತಿ ಚುನಾವಣೆ, ಇತ್ತೀಚೆಗೆ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ನೀತಿ ಜಾರಿಗೊಳಿಸಿ ಸರ್ಕಾರ ಆದೇಶ ನೀಡಿದೆ.
ಕೊವಿಡ್ ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ ಘೋಷಿಸಿರುವ ಸರ್ಕಾರ 500ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ಹೇಳಿದೆ. ಸಂಘಟಕರಿಗೆ ದಂಡ ಹಾಕುವುದಕ್ಕೆ ನಿಯಮಾವಳಿಗಳನ್ನು ಜಾರಿ ಮಾಡಿದೆ.
ಸಾರ್ವಜನಿಕ ಸಂಭ್ರಮಾಚರಣೆಗಳಿಗೆ ತಡೆ?
ಸಂಭ್ರಮಾಚರಣೆಗಳಿಗೂ ತಡೆ ಒಡ್ಡಿರುವ ಸರ್ಕಾರ, ಸ್ಟಾರ್ ಹೋಟೆಲ್‌ಗಳಲ್ಲಿ ಪಾರ್ಟಿಗಳಿಗೆ ಸೇರುವಂತಿಲ್ಲ ಎಂದಿದೆ. ಪಾರ್ಟಿಗಳ ಆಯೋಜನೆ ಮಾಡಿದರೆ ₹10,000 ದಂಡ ವಿಧಿಸುವುದಾಗಿ ತಿಳಿಸಿದೆ. ಎಸಿ ಹಾಲ್, ಅಂಗಡಿ, ಶಾಪ್‌ಗಳಲ್ಲಿ ನಿಯಮ ಪಾಲಿಸುವಂತೆ ಸೂಚನೆ ನೀಡಿದೆ. ನಿಯಮ ಉಲ್ಲಂಘನೆಯಾದರೆ 10,000 ರೂಪಾಯಿ ದಂಡ ತೆರಬೇಕಾಗಿದೆ. ನಾನ್ ಎಸಿ ಹಾಲ್, ಅಂಗಡಿ, ಮಾಲ್‌ಗಳಿಗೂ ನಿಯಮ ಅನ್ವಯವಾಗಲಿದ್ದು, ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಹೇಳಿದೆ.
ಕೋವಿಡ್ ಪರೀಕ್ಷಾ ದರ ಮರು ನಿಗದಿ ಪಡಿಸಿ ರಾಜ್ಯ ಸರ್ಕಾರದಿಂದ ಆದೇಶ
ಕೊವಿಡ್ ಪರೀಕ್ಷಾ ದರ ಮರು ನಿಗದಿಪಡಿಸಿರುವ ಸರ್ಕಾರ, ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕಳಿಸಿದ್ರೆ 500 ರೂ., ಖಾಸಗಿ ಆಸ್ಪತ್ರೆಯಲ್ಲಿಯೇ ಕೊವಿಡ್ ಟೆಸ್ಟ್‌ಗೆ 800 ರೂ., ಖಾಸಗಿ ಆಸ್ಪತ್ರೆಯಿಂದ ಲ್ಯಾಬ್‌ಗೆ ಕಳುಹಿಸಿದರೆ 1,250 ರೂ., ಕೊವಿಡ್ ಱಪಿಡ್ ಟೆಸ್ಟ್‌ಗೆ 400 ರೂ. ಮತ್ತು ಕೊವಿಡ್ ಟೆಸ್ಟ್‌ಗೆ ಗರಿಷ್ಠ ಮೊತ್ತ 2,500 ರೂ.ಗಳನ್ನು ನಿಗಧಿಗೊಳಿಸಿದೆ.
ಹೊಸ ಕೊವಿಡ್ 19 ಪರೀಕ್ಷಾ ದರಗಳು
ಆರೋಗ್ಯ ಸಚಿವರ ಮನೆ ಪಕ್ಕದಲ್ಲೆ ಕುರಿ ಸಂತೆ, ಕೊವಿಡ್ ನಿಯಮಗಳಿಗೆ ತಿಲಾಂಜಲಿ ಇಟ್ಟ ಜನತೆ
Published On - 4:02 pm, Wed, 9 December 20