ನೈಋತ್ಯ ರೈಲ್ವೆ ವಲಯದ 15 ನಿಲ್ದಾಣಗಳ ಮೇಲ್ದರ್ಜೆ ಕಾಮಗಾರಿಗಳಿಗೆ ಫೆ.26 ರಂದು ಪ್ರಧಾನಿ ಮೋದಿ ಚಾಲನೆ

| Updated By: ವಿವೇಕ ಬಿರಾದಾರ

Updated on: Feb 25, 2024 | 12:41 PM

ಅಮೃತ ಭಾರತ ನಿಲ್ದಾಣ ಯೋಜನೆಯಡಿ 2023ರ ಫೆಬ್ರವರಿಯಲ್ಲಿ ರಾಷ್ಟ್ರವ್ಯಾಪಿ 1275 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ರೈಲ್ವೆ ಸಚಿವಾಲಯವು ಪ್ರಾರಂಭಿಸಿತು. ಇದರ ಭಾಗವಾಗಿ ಈಗಾಗಲೆ ರಾಜ್ಯದ ವಿವಿಧ ಜಿಲ್ಲೆಗಳ, ತಾಲೂಕುಗಳ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದೀಗ ನೈಋತ್ಯ ವಲಯದ 15 ರೈಲು ನಿಲ್ದಾಣಗಳಿಗೆ ಸ್ಮಾರ್ಟ್​ ಟಚ್​ ನೀಡಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ.

ನೈಋತ್ಯ ರೈಲ್ವೆ ವಲಯದ 15 ನಿಲ್ದಾಣಗಳ ಮೇಲ್ದರ್ಜೆ ಕಾಮಗಾರಿಗಳಿಗೆ ಫೆ.26 ರಂದು ಪ್ರಧಾನಿ ಮೋದಿ ಚಾಲನೆ
ಕೆಂಗೇರಿ ರೈಲು ನಿಲ್ದಾಣ
Follow us on

ಬೆಂಗಳೂರು, ಫೆಬ್ರವರಿ 25: ಅಮೃತ ಭಾರತ ನಿಲ್ದಾಣ ಯೋಜನೆಯಡಿ (Amrita Bharat Station Project) 372,13 ಕೋಟಿ ರೂ. ವೆಚ್ಚದಲ್ಲಿ 15 ರೈಲ್ವೆ ನಿಲ್ದಾಣಗಳನ್ನು (Railway Station) ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಇಲಾಖೆ (South Western Railway Department) ತಿಳಿಸಿದೆ. ಕಾಮಗಾರಿಗಳಿಗೆ ಸೋಮವಾರ (ಫೆಬ್ರವರಿ 26) ರಂದು ಪ್ರಧಾನಿ ನರೇಂದ್ರ ‌ಮೋದಿಯವರು ಬೆಳಿಗ್ಗೆ 10:45ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಕೆಂಗೇರಿ, ಕೃಷ್ಣರಾಜಪುರ, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್​ ಫೀಲ್ಡ್​​ ರೈಲು ನಿಲ್ದಾಣಗಳು ಒಟ್ಟು 327.13 ರೂ. ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ.

15 ನಿಲ್ದಾಣಗಳಲ್ಲಿ ಎಸ್ಕಲೆಟರ್, ಸ್ಮಾರ್ಟ್ ಪಾರ್ಕಿಂಗ್, ಶೌಚಾಲಯ, ಉತ್ತಮ ಪ್ರವೇಶದ್ವಾರ, ಕಾಯುವ ಸ್ಥಳ, ಲಿಫ್ಟ್‌, ಸ್ವಚ್ಛತೆ, ಉಚಿತ ವೈಫೈ ವ್ಯವಸ್ಥೆ, ಮಾಹಿತಿ ವ್ಯವಸ್ಥೆ ಸಹಿತ ಅನೇಕ ಸೌಲಭ್ಯಗಳನ್ನು ಈ ಯೋಜನೆ ಒಳಗೊಂಡಿದೆ. ಹಾಗಿದ್ದರೆ ಯಾವೆಲ್ಲಾ ರೈಲು ನಿಲ್ದಾಣಕ್ಕೆ ಸ್ಮಾರ್ಟ್ ಟಚ್ ಸಿಗಲಿದೆ? ಇಲ್ಲಿದೆ ವಿವರ

  1. ಬಂಗಾರಪೇಟೆ ರೈಲು ನಿಲ್ದಾಣ – 21.5 ಕೋಟಿ ರೂ.
  2. ಚನ್ನಪಟ್ಟಣ ರೈಲು ನಿಲ್ದಾಣ – 20.9 ಕೋಟಿ ರೂ.
  3. ಧರ್ಮಪುರಿ ರೈಲು ನಿಲ್ದಾಣ – 25.4 ಕೋಟಿ ರೂ.
  4. ದೊಡ್ಡಬಳ್ಳಾಪುರ ರೈಲು ನಿಲ್ದಾಣ – 21.3 ಕೋಟಿ ರೂ.
  5. ಹಿಂದೂಪುರ ರೈಲು ನಿಲ್ದಾಣ – 23.9 ಕೋಟಿ ರೂ.
  6. ಹೊಸೂರು ರೈಲು ನಿಲ್ದಾಣ – 22.3 ಕೋಟಿ ರೂ.
  7. ಕೆಂಗೇರಿ ರೈಲು ನಿಲ್ದಾಣ – 21 ಕೋಟಿ ರೂ.
  8. ಕೃಷ್ಣರಾಜಪುರ ರೈಲು ನಿಲ್ದಾಣ – 21.1 ಕೋಟಿ ರೂ.
  9. ಕುಪ್ಪಂ ರೈಲು ನಿಲ್ದಾಣ – 17.6 ಕೋಟಿ ರೂ.
  10. ಮಲ್ಲೇಶ್ವರ ರೈಲು ನಿಲ್ದಾಣ – 20 ಕೋಟಿ ರೂ.
  11. ಮಾಲೂರು ರೈಲು ನಿಲ್ದಾಣ – 20.4 ಕೋಟಿ ರೂ.
  12. ಮಂಡ್ಯ ರೈಲು ನಿಲ್ದಾಣ – 20.1 ಕೋಟಿ ರೂ.
  13. ರಾಮನಗರ ರೈಲು ನಿಲ್ದಾಣ – 21 ಕೋಟಿ ರೂ.
  14. ತುಮಕೂರು ರೈಲು ನಿಲ್ದಾಣ – 24.1 ಕೋಟಿ ರೂ.
  15. ವೈಟ್ ಫೀಲ್ಡ್ ರೈಲು ನಿಲ್ದಾಣ – 23.3 ಕೋಟಿ ರೂ. ಮೀಸಲು ಇಡಲಾಗಿದೆ.

ಇದನ್ನೂ ಓದಿ: ಚೆನ್ನೈ-ಬೆಂಗಳೂರು-ಮೈಸೂರು ಸಂಪರ್ಕಿಸಲಿದೆ ಮಹತ್ವದ ಹೈ ಸ್ಪೀಡ್ ರೈಲು ಯೋಜನೆ; ಭೂಸ್ವಾಧೀನಕ್ಕಾಗಿ ಭೂ ಮಾಲೀಕರೊಂದಿಗೆ ಸಭೆ

ಅಮೃತ ಭಾರತ ನಿಲ್ದಾಣ ಯೋಜನೆಯಡಿ ಮೇಲ್ದರ್ಜೆಗೇರಿದ/ ಏರುವ ರಾಜ್ಯದ ನಿಲ್ದಾಣಗಳು

ಆಲಮಟ್ಟಿ, ಅಳ್ನಾವರ, ಅರಸೀಕೆರೆ ಜಂಕ್ಷನ್, ಬಾದಾಮಿ, ಬಾಗಲಕೋಟ, ಬಳ್ಳಾರಿ, ಬೆಂಗಳೂರು ಕಂಟೋನ್ಮೆಂಟ್, ಬಂಗಾರಪೇಟೆ, ಬಂಟವಾಳ, ಬೆಳಗಾವಿ, ಬೀದರ್, ವಿಜಯಪುರ, ಚಾಮರಾಜ ನಗರ, ಚನ್ನಪಟ್ಟಣ, ಚನ್ನಸಂದ್ರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರಸ್ತೆ, ಘಟಪ್ರಭಾ, ಗೋಕಾಕ್ ರೋಡ್,  ಹರಿಹರ, ಹಾಸನ, ಹೊಸಪೇಟೆ, ಕಲಬುರಗಿ, ಕೆಂಗೇರಿ, ಕೊಪ್ಪಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು), ಕೃಷ್ಣರಾಜಪುರ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜಂ., ಮುನಿರಾಬಾದ್, ಮೈಸೂರು, ರಾಯಚೂರು, ರಾಮನಗರ, ರಾಣಿಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಹಾಬಾದ್, ಶಿವಮೊಗ್ಗ ಟೌನ್, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂ, ಸುಬ್ರಹ್ಮಣ್ಯ ರೋಡ್, ತಾಳಗುಪ್ಪ, ತಿಪಟೂರು, ತುಮಕೂರು, ವಾಡಿ, ವೈಟ್‌ಫೀಲ್ಡ್, ಯಾದಗಿರಿ, ಯಶವಂತಪುರ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ