ಮಂಗಳೂರು: ಜಗತ್ತಿನ ವೇಗದ ಓಟಗಾರ ಅಂತಾನೇ ಕರೆಸಿಕೊಳ್ಳೋ ಉಸೇನ್ ಬೋಲ್ಟ್ ದಾಖಲೆಯನ್ನು ಕರಾವಳಿಯ ಯುವಕನೊಬ್ಬ ಮುರಿದಿದ್ದು, ಸದ್ಯ ಅವರ ಓಟದ ವೀಡಿಯೋ ಭಾರೀ ಸಂಚಲನ ಸೃಷ್ಟಿಸಿದೆ. ವಿಶ್ವಖ್ಯಾತ ಉಸೇನ್ ಬೋಲ್ಟ್ಗಿಂತ ಸ್ಪೀಡಾಗಿ ಓಡುವ ತುಳುನಾಡಿನ ಕಂಬಳವೀರ ಅಂತಲೇ ವಿಡಿಯೋ ವೈರಲ್ ಆಗ್ತಿದೆ.
ಫೆಬ್ರವರಿ 1ರಂದು ಮಂಗಳೂರಿನ ಮೂಡಬಿದ್ರೆ ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಕೋಣ ಓಡಿಸೋ ಶ್ರೀನಿವಾಸಗೌಡ ಎಂಬುವರು ದಾಖಲೆ ಬರೆದಿದ್ದಾರೆ. ಕೇವಲ ಕೇವಲ 13.62 ಸೆಕೆಂಡ್ಗಳಲ್ಲಿ 142.50 ಮೀಟರ್ ದೂರ ಕೋಣದ ಹಿಂದೆ ಓಡಿ ದಾಖಲೆ ಬರೆದಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು, ಎಲ್ಲರೂ ನಿಬ್ಬೆರಗಾಗಿದ್ದಾರೆ.
ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್ ಆಗುತ್ತದೆ. ಸದ್ಯ ಶ್ರೀನಿವಾಸಗೌಡ, ಉಸೇನ್ ಬೋಲ್ಟ್ಗಿಂತ 0.03 ಸೆಕೆಂಡ್ಗಳಷ್ಟು ಮುಂದಿದ್ದಾರೆ. ಅಲ್ದೆ, ಶ್ರೀನಿವಾಸ ಗೌಡ ಅವರನ್ನು ಉಸೇನ್ ಬೋಲ್ಟ್ ಜೊತೆ ಹೋಲಿಕೆ ಮಾಡಿ ಫೋಟೋ ವೈರಲ್ ಆಗ್ತಿದೆ.
Published On - 10:26 am, Sat, 15 February 20