ಗುಮ್ಮಟ ನಗರಿಯಲ್ಲಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಇರಾನಿ ಗ್ಯಾಂಗ್ ಅಂದರ್!
ವಿಜಯಪುರ: ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದ ಜಿಲ್ಲೆ ಅಂದ್ರೆ ವಿಜಯಪುರ. ಕೊಲೆ, ಸುಲಿಗೆ, ಕೌಟುಂಬಿಕ ಕಲಹ, ಹಗೆತನ ಒಂದೆಡೆಯಾದ್ರೆ, ಅಕ್ರಮ ಕಂಟ್ರಿಮೇಡ್ ಪಿಸ್ತೂಲ್, ಕಿಡ್ನ್ಯಾಪ್, ಸುಪಾರಿ ಕೊಲೆ ಹೆಚ್ಚಾಗ್ತಿವೆ. ಆದ್ರೆ ಇಂಥಾ ಸಂದರ್ಭದಲ್ಲೇ ಅನ್ಯ ರಾಜ್ಯದ ಗ್ಯಾಂಗ್ ಕೂಡ ಎಂಟ್ರಿ ಕೊಟ್ಟು, ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗುಮ್ಮಟ ನಗರಿ ವಿಜಯಪುರದಲ್ಲಿ ಇರಾನಿ ಗ್ಯಾಂಗ್ ಹವಾ..! ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೈಂ ರೇಟ್ ಜಾಸ್ತಿಯಾಗ್ತಿದೆ. ಕೊಲೆ, ಕಳ್ಳತನ, ಕಿಡ್ನ್ಯಾಪ್ ಸೇರಿದಂತೆ […]
ವಿಜಯಪುರ: ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದ ಜಿಲ್ಲೆ ಅಂದ್ರೆ ವಿಜಯಪುರ. ಕೊಲೆ, ಸುಲಿಗೆ, ಕೌಟುಂಬಿಕ ಕಲಹ, ಹಗೆತನ ಒಂದೆಡೆಯಾದ್ರೆ, ಅಕ್ರಮ ಕಂಟ್ರಿಮೇಡ್ ಪಿಸ್ತೂಲ್, ಕಿಡ್ನ್ಯಾಪ್, ಸುಪಾರಿ ಕೊಲೆ ಹೆಚ್ಚಾಗ್ತಿವೆ. ಆದ್ರೆ ಇಂಥಾ ಸಂದರ್ಭದಲ್ಲೇ ಅನ್ಯ ರಾಜ್ಯದ ಗ್ಯಾಂಗ್ ಕೂಡ ಎಂಟ್ರಿ ಕೊಟ್ಟು, ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಗುಮ್ಮಟ ನಗರಿ ವಿಜಯಪುರದಲ್ಲಿ ಇರಾನಿ ಗ್ಯಾಂಗ್ ಹವಾ..! ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೈಂ ರೇಟ್ ಜಾಸ್ತಿಯಾಗ್ತಿದೆ. ಕೊಲೆ, ಕಳ್ಳತನ, ಕಿಡ್ನ್ಯಾಪ್ ಸೇರಿದಂತೆ ಸರಗಳ್ಳತನವೂ ಮಿತಿಮೀರಿದೆ. ಇಂಥಾ ಟೈಮ್‌ನಲ್ಲೇ ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸರಗಳ್ಳತನ ವಿಚಾರದಲ್ಲಿ ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದ ಖದೀಮರು ಲಾಕ್..! ಫೆಬ್ರವರಿ 14ರ ತಡರಾತ್ರಿ ಪೊಲೀಸರು ಜಾವನಗರ ಸೊಲ್ಲಾಪುರ ರಸ್ತೆಯಲ್ಲಿ ಪೆಟ್ರೋಲಿಂಗ್ ಮಾಡ್ತಿದ್ದ ವೇಳೆ 2ಬೈಕ್‌ಗಳಲ್ಲಿ ತೆರಳುತ್ತಿದ್ದ ನಾಲ್ವರನ್ನ ಪೊಲೀಸರು ಅನುಮಾನಗೊಂಡು ಪರಿಶೀಲಿಸಿದ್ದಾರೆ. ಈ ವೇಳೆ ಅವ್ರ ಬಳಿ ಸೂಕ್ತ ದಾಖಲೆ ಇರಲಿಲ್ಲ. ಸಂಶಯ ಬಂದು ವಿಚಾರಣೆ ನಡೆಸಿದಾಗ ಅವ್ರ ಬಳಿ ಚಿನ್ನದ ಸರಗಳು ಸಿಕ್ಕಿವೆ. ಕೂಡಲೇ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ತನಿಖೆ ನಡೆಸಿದಾಗ ಇರಾನಿ ಗ್ಯಾಂಗ್ ಅನ್ನೋದು ಗೊತ್ತಾಗಿದೆ.
ಒಂಟಿ ಮಹಿಳೆಯರೇ ಟಾರ್ಗೆಟ್: ಪೊಲೀಸರ ವಿಚಾರಣೆ ವೇಳೆ ಈ ನಾಲ್ವರೂ ಖದೀಮರು ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬೈಕ್‌ನಲ್ಲಿ ಬಂದು ಸರಗಳನ್ನ ಎಗರಿಸಿ ಎಸ್ಕೇಪ್ ಆಗ್ತಿದ್ರು ಅನ್ನೋದು ಗೊತ್ತಾಗಿದೆ. ಮಹಾರಾಷ್ಟ್ರದ ಮೂವರು ಹಾಗೂ ಬೀದರ್ ಜಿಲ್ಲೆಯ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ 150 ಗ್ರಾಂ ಚಿನ್ನಾಭರಣ, 2 ಬೈಕ್ ಸೇರಿದಂತೆ ಒಟ್ಟು 7ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ.
ಮತ್ತೊಂದೆಡೆ ಆದರ್ಶನಗರ ಪೊಲೀಸರು ಬೈಕ್‌ಗಳನ್ನ ಕಳ್ಳತನ್ನ ಮಾಡ್ತಿದ್ದ ಇಬ್ಬರು ಖದೀಮರನ್ನ ಬಂಧಿಸಿದ್ದಾರೆ. ಇವ್ರು ಹೆಚ್ಚಾಗಿ ಬುಲೆಟ್‌ಗಳನ್ನೇ ಟಾರ್ಗೆಟ್ ಮಾಡಿದ್ರು ಅನ್ನೋದು ಗೊತ್ತಾಗಿದೆ. ಒಟ್ನಲ್ಲಿ ವಿಜಯಪುರದಲ್ಲಿ ಇರಾನಿ ಗ್ಯಾಂಗ್ ಅಂದರ್ ಆಗಿದ್ದು, ಮಹಿಳೆಯರು ನಿಟ್ಟುಸಿರುಬಿಟ್ಟಿದ್ದಾರೆ. ಜೊತೆಗೆ ಬೈಕ್ ಕಳ್ಳರು ಸೆರೆಸಿಕ್ಕಿದ್ದು, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಎಸ್‌ಪಿ ಬಹುಮಾನ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ರು.