ಆಸ್ತಿ ಕಲಹ: ಹಾಡಹಗಲೇ ಕತ್ತು ಸೀಳಿ ವೃದ್ಧನ ಭೀಕರ ಹತ್ಯೆ
ಬೆಂಗಳೂರು: ಆಸ್ತಿ ವಿಚಾರಕ್ಕೆ ಹಾಡಹಗಲೇ ನಡುರಸ್ತೆಯಲ್ಲಿ ವೃದ್ಧನನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಲಘಟ್ಟಪುರದ ಗುಬ್ಬಲಾಳ ರಸ್ತೆಯಲ್ಲಿ ನಡೆದಿದೆ. 70 ವರ್ಷದ ಮಾಧವ್ ಕೊಲೆಯಾದ ವೃದ್ಧ. ಕೆಲಸ ನಿಮಿತ್ತ ವೃದ್ಧ ಮಾಧವ್ ಮನೆಯಿಂದ ಹೊರಹೋಗಿದ್ದ. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಅಪರಿಚಿತ ವ್ಯಕ್ತಿ ಹಿಂಬದಿಯಿಂದ ಬಂದು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಸ್ತಿ ವಿಚಾರಕ್ಕೆ ಸಂಬಂಧಿಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ […]
ಬೆಂಗಳೂರು: ಆಸ್ತಿ ವಿಚಾರಕ್ಕೆ ಹಾಡಹಗಲೇ ನಡುರಸ್ತೆಯಲ್ಲಿ ವೃದ್ಧನನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಲಘಟ್ಟಪುರದ ಗುಬ್ಬಲಾಳ ರಸ್ತೆಯಲ್ಲಿ ನಡೆದಿದೆ. 70 ವರ್ಷದ ಮಾಧವ್ ಕೊಲೆಯಾದ ವೃದ್ಧ.
ಕೆಲಸ ನಿಮಿತ್ತ ವೃದ್ಧ ಮಾಧವ್ ಮನೆಯಿಂದ ಹೊರಹೋಗಿದ್ದ. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಅಪರಿಚಿತ ವ್ಯಕ್ತಿ ಹಿಂಬದಿಯಿಂದ ಬಂದು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಸ್ತಿ ವಿಚಾರಕ್ಕೆ ಸಂಬಂಧಿಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.