AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಜ್ಜೀ! ನಿಮ್ಗೆ 94 ಕೋಟಿ ಲಾಟರಿ ಬಂದಿದೆ ಅಂದಿದ್ದಕ್ಕೆ.. ದಿಡಗ್ಗನೆ ಎದ್ದ ಅಜ್ಜಿ ಮಾಡಿದ್ದಾದರೂ ಏನು!?

ಬೆಂಗಳೂರು: ನಾವು ಇರೋದೆ ಮೋಸ ಹೋಗೋಕೆ.. ಅಂತಾ ತಾವೇ ಆತುರಕ್ಕೆ/ಆಸೆಗೆ ಬಿದ್ದು ಉಂಡೆನಾಮೆ ತಿಕ್ಕಿಸಿಕೊಳ್ಳುವವರು ಇರುವವರೆಗೂ ನಾನಾ ಬಣ್ಣದ ಮಕ್ಮಲ್ ಟೋಪಿಗಳನ್ನು ಹಾಕುವ ದುರುಳರು ಇದ್ದೇ ಇರುತ್ತಾರೆ. ಇಂದು ಆಧುನಿಕತೆಗೆ ತಕ್ಕಂತೆ ಐಟಿ ತಂತ್ರಜ್ಞಾನದ ಮೂಲಕ ಸ್ವಲ್ಪ ಹೆಚ್ಚಾಗಿಯೇ ಇಂತಾ ನಯವಂಚನೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟೋಕೆ ಇರೋದು ಒಂದೇ ಮಾರ್ಗ ಅಂದ್ರೆ ‘ಜನ ಜಾಗೃತರಾಗುವುದು’. ಆದ್ರೆ ಈ ಜನ ಬಿಲ್ಕುಲ್​ ಜಾಗೃತರಾಗೋಲ್ಲ.. ತಾವೇ ಹೋಗಿ ಹೋಗಿ ಹಳ್ಳಕ್ಕೆ ಬೀಳುತ್ತಾರೆ. ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳಿಗೆ ಈ […]

ಅಂಬಜ್ಜೀ! ನಿಮ್ಗೆ 94 ಕೋಟಿ ಲಾಟರಿ ಬಂದಿದೆ ಅಂದಿದ್ದಕ್ಕೆ.. ದಿಡಗ್ಗನೆ ಎದ್ದ ಅಜ್ಜಿ ಮಾಡಿದ್ದಾದರೂ ಏನು!?
ಸಾಧು ಶ್ರೀನಾಥ್​
|

Updated on:Feb 15, 2020 | 12:38 PM

Share

ಬೆಂಗಳೂರು: ನಾವು ಇರೋದೆ ಮೋಸ ಹೋಗೋಕೆ.. ಅಂತಾ ತಾವೇ ಆತುರಕ್ಕೆ/ಆಸೆಗೆ ಬಿದ್ದು ಉಂಡೆನಾಮೆ ತಿಕ್ಕಿಸಿಕೊಳ್ಳುವವರು ಇರುವವರೆಗೂ ನಾನಾ ಬಣ್ಣದ ಮಕ್ಮಲ್ ಟೋಪಿಗಳನ್ನು ಹಾಕುವ ದುರುಳರು ಇದ್ದೇ ಇರುತ್ತಾರೆ. ಇಂದು ಆಧುನಿಕತೆಗೆ ತಕ್ಕಂತೆ ಐಟಿ ತಂತ್ರಜ್ಞಾನದ ಮೂಲಕ ಸ್ವಲ್ಪ ಹೆಚ್ಚಾಗಿಯೇ ಇಂತಾ ನಯವಂಚನೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟೋಕೆ ಇರೋದು ಒಂದೇ ಮಾರ್ಗ ಅಂದ್ರೆ ‘ಜನ ಜಾಗೃತರಾಗುವುದು’. ಆದ್ರೆ ಈ ಜನ ಬಿಲ್ಕುಲ್​ ಜಾಗೃತರಾಗೋಲ್ಲ.. ತಾವೇ ಹೋಗಿ ಹೋಗಿ ಹಳ್ಳಕ್ಕೆ ಬೀಳುತ್ತಾರೆ.

ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳಿಗೆ ಈ ಆನ್​ಲೈನ್ ವಂಚಕರೂ ತಲೆ ನೋವಾಗಿದ್ದಾರೆ. ಆನ್​ಲೈನ್ ವಂಚಕರು ಮುಖತಃ ಭೇಟಿಯಾಗಿ ವಂಚಿಸುವ ಪ್ರಮೇಯವೇ ಇಲ್ಲ, ಕೇವಲ ಮೊಬೈಲ್​ ಫೋನ್​ನಲ್ಲೇ ಯಾಮಾರಿಸ್ತಾರೆ, ಈ ಜನಾನೋ.. ನಾವಿರೋದೆ ಮೋಸ ಹೋಗೋಕೆ ಅಂತಾ ಥಟ್ ಅಂತಾ ಬಲಿಯಾಗಿಬಿಡುತ್ತಾರೆ!

ಅಕೌಂಟಿಗೆ ಅಮೌಂಟು ಬಂದ ತಕ್ಷಣ ಖೇಲ್ ಖತಂ ನಾಟಕ್ ಬಂದ್! ಆ ಖದೀಮರು ತಮ್ಮ ಅಕೌಂಟುಗಳಿಗೆ ಅಮೌಂಟು ಹಾಕಿಸಿಕೊಂಡ ತತಕ್ಷಣ ಖೇಲ್ ಖತಂ ನಾಟಕ್ ಬಂದ್ ಅಂದುಬಿಡುತ್ತಾರೆ! ಈ ನಮ್ಮ ಜನರೋ ಬಾಯ್ ಬಾಯಿ ಬಿಟ್ಟುಕೊಂಡು ಅಯ್ಯಾ ಕಾಪಾಡಿ ಎಂದು ಪೊಲೀಸರಿಗೆ ದುಂಬಾಲು ಬೀಳುತ್ತಾರೆ. ಪೊಲೀಸರೂ ಎಷ್ಟೂ ಅಂತಾ ಇಂತಹ ಕೇಸುಗಳ ಮೇಲೆ ನಿಗಾ ಇಡಲಿಕ್ಕೆ ಸಾಧ್ಯ. ಸೈಬರ್​ ಪೊಲೀಸ್​ ಇಲಾಖೆಯಲ್ಲಿ ದಾಖಲಾಗುವ ಕೇಸುಗಳೇ ಅಸಂಖ್ಯಾತ. ಇನ್ನು ದೂರು ದಾಖಲಾಗದ ಕೇಸುಗಳು ಅವೆಷ್ಟಿವೆಯೋ..

ಮೋಸ ಹೋಗೋಕ್ಕೆ ನಾವು ಸದಾ ಸಿದ್ಧ ಎಂದು ‘ಥಂಬ್ಸ್ಅಪ್​’ ಮಾಡೋರು..! ಖುದ್ದು ಪೊಲೀಸ್​ ಕಮೀಷನರ್​ ಭಾಸ್ಕರರಾಯರ ಹೆಸರು ಬಳಸಿಕೊಂಡೇ ಮೊನ್ನೆ ವಂಚನೆ ನಡೆಸಿದ್ದಾರೆ. ಇನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ತಾಜಾ ಪ್ರಕರಣವೊಂದು ದಾಖಲಾಗಿದೆ. ಇಲ್ಲಿ ಲಕ್ಷಗಳಿಗೆ ಲಕ್ಷ್ಯವೇ ಇಲ್ಲ! ಕೋಟಿಗಳಲ್ಲಿ ನಾಮ ಎಳೆಯಲಾಗಿದೆ. ದಾಖಲಾಗಿರುವ ಎಫ್ಐಆರ್ ಪ್ರಕಾರ ವೃದ್ಧೆಯನ್ನು ನಂಬಿಸಿ 1.67 ಕೋಟಿ ವಂಚನೆ ಎಸಗಲಾಗಿದೆ.

ಅಂಬುಲಕ್ಷ್ಮೀ ಶ್ರೀನಿವಾಸ್ ಎಂಬುವವರೇ 1.67 ಕೋಟಿ ರೂ ಉಂಡೆನಾಮ ತಿಕ್ಕಿಸಿಕೊಂಡವರು. ಅಂಬಜ್ಜೀ! ನಿಮ್ಗೆ ಸ್ಯಾಮ್ ಸ್ಯಾಂಗ್ ಕಂಪನಿ ಲಾಟರಿ ಹೊಡೆದಿದೆ. 10 ಲಕ್ಷ ಪೌಂಡ್ ಬಹುಮಾನ ಬಂದಿದೆ ನೋಡಿ ಎಂದು ಅಜ್ಜಿಯನ್ನೇ ಪುಸಲಾಯಿಸಿಬಿಟ್ಟಿದ್ದಾರೆ ಆ ದೋಖಾದಾರರು. ಅಷ್ಟಿಷ್ಟಲ್ಲಾರೀ! ತಾನು ಖುದ್ದು ಸ್ಯಾಮ್ ಸಾಂಗ್ ಕಂಪನಿಯ ಏಜೆಂಟ್ ಎಂದು ಹೇಳಿಕೊಂಡು ಕರೆ ಮಾಡಿರುವ ವಂಚಕ 93 ಕೋಟಿ 80 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸಿದ್ದಾನೆ.

ಅಮೌಂಟು ವಾಪಸ್​ ಬರುತ್ತೆ ಅಂತಾ ಅಜ್ಜಿಗೆ ಕುಟುಕು ಭರವಸೆ ಇದೆಯಂತೆ! ಲೀಗಲ್ ಚಾರ್ಜ್ ಪ್ರೋಸೆಸಿಂಗ್ ಬಾಬತ್ತಿನಲ್ಲಿ 1.67 ಕೋಟಿ ಹಣ ಕಟ್ಟಬೇಕು ಎಂದು ಹೇಳಿದ್ದೇ ತಡ, ಈ ಅಜ್ಜಿಗೆ ಅದೇನೂ ಆಸೆಯಿತ್ತೋ.. ಒಂದೇ ಮಗ್ಗಲಿಗೆ ದಿಡಗ್ಗನೆ ಎದ್ದವರೇ ವಂಚಕನ ಮಾತು ನಂಬಿ ಅವನು ಹೇಳಿದ ಅಕೌಂಟಿಗೆ ಅಮೌಂಟು ಹಾಕಿಯೇ ಬಿಟ್ಟಿದ್ದಾರೆ.ಅಯ್ಯೋ ಇಂಥಾದ್ದೆಲ್ಲ ದಿನಾ ಇದ್ದಿದ್ದೇ ಎಂದು ಸಿಐಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಂಬಜ್ಜಿಗೆ ಕೋಟಿಗಳ ಲೆಕ್ಕದಲ್ಲಿರುವ ತಮ್ಮ ಅಮೌಂಟು ವಾಪಸ್​ ಬರುತ್ತದೆ ಎಂಬ ಕುಟುಕು ಭರವಸೆ ಇದೆಯಂತೆ! ಜೀವನದ ಸಂಧ್ಯಾಕಾಲದಲ್ಲಿ ಇರುವ ಹಣದಲ್ಲಿ ಜೀವನ ಸೌಖ್ಯ ಕಂಡುಕೊಳ್ಳುವುದನ್ನ ಬಿಟ್ಟು ಪೊಲೀಸು, ಬ್ಯಾಂಕು ಅಂತೆಲ್ಲ ಅಲೆದಾಡಬೇಕಾದ ಸ್ಥಿತಿ ಇವರದಾಗಿದೆ.

Published On - 12:23 pm, Sat, 15 February 20