ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (Secondary School Leaving Certificate – SSLC) ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಸರ್ಕಾರಿ, ಅನುದಾನಿತ ಶಾಲೆ, ಖಾಸಗಿ ಶಾಲೆ ಮುಖ್ಯಸ್ಥರು ತಮ್ಮ ಶಾಲೆಯ SSLC ವಿದ್ಯಾರ್ಥಿಗಳನ್ನು ಸಂಪರ್ಕಿಸಬೇಕು. ಈ ಪೈಕಿ ವಲಸೆ ಕಾರ್ಮಿಕರ ಮಕ್ಕಳನ್ನೂ ಮುಖ್ಯಸ್ಥರು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.
ವಲಸೆ ಶಾಲೆಗಳು, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸಂರ್ಪಿಸಿದ ವೇಳೆ ಮೂಲ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಬದಲಾಗಿ ಪ್ರಸ್ತುತ ವಾಸವಿರುವ ಜಿಲ್ಲೆ, ತಾಲೂಕಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಇಚ್ಛಿಸಿದರೆ ಅವಕಾಶ ನೀಡಲಾಗುವುದು. ಈ ಅಂಶವನ್ನು ಶಾಲಾ ಲಾಗಿನ್ನಲ್ಲಿ ನಮೂದಿಸಬೇಕೆಂದು ಮಂಡಳಿ ಸೂಚನೆ ನೀಡಿದೆ.
ಬದಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳ ವಿವರ, ಪರೀಕ್ಷಾ ಕೇಂದ್ರಗಳನ್ನು ಶಾಲಾ ಲಾಗಿನ್ನಲ್ಲಿ ವೆಬ್ಸೈಟ್ sslc.karnataka.gov.inನಲ್ಲಿ ದಾಖಲಿಸಬೇಕು. ಈಗಾಗಲೇ ಈಗಾಗಲೇ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಂಡಿರುವ ತಂತ್ರಾಂಶದ ಯೂಸರ್ ನೇಮ್, ಪಾಸ್ವರ್ಡ್ ಬಳಸಿ ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸೂಚನೆ ನೀಡಿದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೋರಿದ ಪರೀಕ್ಷಾ ಕೇಂದ್ರದಲ್ಲಿ ಆಸನದ ವ್ಯವಸ್ಥೆ ಇಲ್ಲದಿದ್ದರೆ ಬೇರೆ ಪರೀಕ್ಷಾ ಕೇಂದ್ರ ಬಳಸಲು SSLC ಬೋರ್ಡ್ ಸೂಚನೆ ನೀಡಿದೆ. ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಬದಲಿಸಲು ಅವಕಾಶ ಇರುವುದಿಲ್ಲ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸುತ್ತೋಲೆಯು ತಿಳಿಸಿದೆ.
(Karnataka SSLC Board Give Option for Students to Select Examination Centre)
ಇದನ್ನೂ ಓದಿ: ಸಿಬಿಎಸ್ಇ, ಐಎಸ್ಸಿಇ 12ನೇ ತರಗತಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂಕೋರ್ಟ್
ಇದನ್ನೂ ಓದಿ: ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪರೀಕ್ಷೆಗಳನ್ನು ರದ್ದುಪಡಿಸಲು ಉನ್ನತ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳಿಂದ ಒತ್ತಡ