SSLC ಫಲಿತಾಂಶ: ಈ ಬಾರಿ ಫಸ್ಟ್​ Rank​ ಪಡೆದವರು ಇವರೇ!

[lazy-load-videos-and-sticky-control id=”B7wN7F6WCzg”] ಬೆಂಗಳೂರು: SSLCಯಲ್ಲಿ ಈ ಬಾರಿ 6 ವಿದ್ಯಾರ್ಥಿಗಳು ಫಸ್ಟ್​ ಱಂಕ್​ ಪಡೆದಿದ್ದಾರೆ. ಗಮನಾರ್ಹವೆಂದರೆ ಕಳೆದ ಬಾರಿ ಕೇವಲ ಇಬ್ಬರು ನೂರಕ್ಕೆ ನೂರು ಅಂಕ ತೆಗೆದುಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸರ್ಕಾರಿ ಮಾರಿಕಾಂಬಾ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625 ಕ್ಕೆ 625 ಅಂಕಗಳನ್ನ ಪಡೆದಿದ್ದಾರೆ. ಮತ್ತೊಬ್ಬ ಟಾಪರ್​ ಎಂ.ಪಿ.ಧೀರಜ್ ರೆಡ್ಡಿ ಮೂಲತಃ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ವಿದ್ಯಾರ್ಥಿ. ಮಂಡ್ಯ ತಾಲೂಕಿನ ಮಾರದೇವನಹಳ್ಳಿ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಬಾಯ್ಸ್ […]

SSLC  ಫಲಿತಾಂಶ: ಈ ಬಾರಿ ಫಸ್ಟ್​ Rank​ ಪಡೆದವರು ಇವರೇ!
Edited By:

Updated on: Aug 10, 2020 | 5:30 PM

[lazy-load-videos-and-sticky-control id=”B7wN7F6WCzg”]

ಬೆಂಗಳೂರು: SSLCಯಲ್ಲಿ ಈ ಬಾರಿ 6 ವಿದ್ಯಾರ್ಥಿಗಳು ಫಸ್ಟ್​ ಱಂಕ್​ ಪಡೆದಿದ್ದಾರೆ. ಗಮನಾರ್ಹವೆಂದರೆ ಕಳೆದ ಬಾರಿ ಕೇವಲ ಇಬ್ಬರು ನೂರಕ್ಕೆ ನೂರು ಅಂಕ ತೆಗೆದುಕೊಂಡಿದ್ದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸರ್ಕಾರಿ ಮಾರಿಕಾಂಬಾ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625 ಕ್ಕೆ 625 ಅಂಕಗಳನ್ನ ಪಡೆದಿದ್ದಾರೆ.

ಮತ್ತೊಬ್ಬ ಟಾಪರ್​ ಎಂ.ಪಿ.ಧೀರಜ್ ರೆಡ್ಡಿ ಮೂಲತಃ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ವಿದ್ಯಾರ್ಥಿ. ಮಂಡ್ಯ ತಾಲೂಕಿನ ಮಾರದೇವನಹಳ್ಳಿ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಬಾಯ್ಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಧೀರಜ್ ರೆಡ್ಡಿ ಎಂ.ಪ್ರಭಾಕರ್ ರೆಡ್ಡಿ, ಕೆ.ಸಿ.ಮಂಜುಳಾ ದಂಪತಿಯ ಮಗ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಿದ್ಯಾರ್ಥಿ ಅನುಷ್​ AL ಕೂಡ 625ಕ್ಕೆ 625 ಅಂಕಗಳನ್ನ ಗಳಿಸಿ ಟಾಪರ್​ ಆಗಿದ್ದಾರೆ. ಅನುಷ್​ ಸುಳ್ಯದ ಕುಮಾರಸ್ವಾಮಿ ಇಂಗ್ಲಿಷ್​ ಮೀಡಿಯಂ ಶಾಲೆಯ ವಿದ್ಯಾರ್ಥಿ.

ಸಿಲಿಕಾನ್​ ಸಿಟಿಯ ಇಬ್ಬರು ವಿದ್ಯಾರ್ಥಿಗಳೂ ಟಾಪರ್ಸ್​!
ಬೆಂಗಳೂರಿನ ನಾಗಸಂದ್ರದ ಸೇಂಟ್​ ಮೆರೀಸ್​ ಪ್ರೌಢ ಶಾಲೆಯ ವಿದ್ಯಾರ್ಥಿ ಚಿರಾಯು KS ಸಹ 625ಕ್ಕೆ 625 ಅಂಕಗಳನ್ನ ಗಳಿಸಿ ಫಸ್ಟ್​ ಱಂಕ್​ ಪಡೆದಿದ್ದಾರೆ. ಜೊತೆಗೆ, ಸದಾಶಿವನಗರದ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿ ನಿಖಿಲೇಶ್​ ಮರಳಿ ಸಹ ಟಾಪರ್​ ಆಗಿ ಮಿಂಚಿದ್ದಾರೆ.

ಕಾಫಿನಾಡಿನ ವಿದ್ಯಾರ್ಥಿನಿಗೂ ಫಸ್ಟ್ ಱಂಕ್​!
ಕಾಫಿನಾಡು ಚಿಕ್ಕಮಗಳೂರಿನ ಸೇಂಟ್​ ಜೋಸೆಫ್​ ಕಾನ್ವೆಂಟ್​ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ತನ್ಮಯಿ P ಸಹ 625ಕ್ಕೆ 625 ಅಂಕಗಳನ್ನ ಗಳಿಸಿ ಫಸ್ಟ್​ ಱಂಕ್​ ಪಡೆದಿದ್ದಾರೆ.

Published On - 4:09 pm, Mon, 10 August 20