ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 16) ಹೊಸದಾಗಿ 1,806 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,80,370ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತರ ಪೈಕಿ 28,12,869 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 42 ಜನರ ಸಾವು ಸಂಭವಿಸಿದೆ. ತನ್ಮೂಲಕ, ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 36,079 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 31,399 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 411 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ದೃಢವಾಗಿದೆ. ನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,21,371ಕ್ಕೆ ಏರಿಕೆ ಆಗಿದೆ. 12,21,371 ಸೋಂಕಿತರ ಪೈಕಿ 11,93,213 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ 10 ಜನರು ಬಲಿಯಾಗಿದ್ದಾರೆ. ಅದರಂತೆ, ಕೊರೊನಾದಿಂದ ಈವರೆಗೆ 15,781 ಜನರ ಸಾವು ಸಂಭವಿಸಿದೆ. 12,376 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ
ಬೆಂಗಳೂರು ನಗರ 411, ದಕ್ಷಿಣ ಕನ್ನಡ ಜಿಲ್ಲೆ 225, ಮೈಸೂರು 174, ಹಾಸನ 138, ಶಿವಮೊಗ್ಗ 110, ಉಡುಪಿ 105, ತುಮಕೂರು 94, ಚಿಕ್ಕಮಗಳೂರು 86, ಬೆಳಗಾವಿ 70, ಮಂಡ್ಯ 68, ಉತ್ತರಕನ್ನಡ 50, ಕೊಡಗು 49, ಬೆಂಗಳೂರು ಗ್ರಾಮಾಂತರ ಜಿಲ್ಲೆ 44, ಕೋಲಾರ 34, ದಾವಣಗೆರೆ 27, ಚಿಕ್ಕಬಳ್ಳಾಪುರ 22, ಚಾಮರಾಜನಗರ 17, ಚಿತ್ರದುರ್ಗ 16, ಧಾರವಾಡ 11, ಹಾವೇರಿ 10, ರಾಮನಗರ 8, ಬಾಗಲಕೋಟೆ 6, ಬಳ್ಳಾರಿ 5, ಗದಗ 5, ವಿಜಯಪುರ 5, ಯಾದಗಿರಿ 5, ಕಲಬುರಗಿ 4, ಬೀದರ್ 3, ಕೊಪ್ಪಳ 2 ಹಾಗೂ ರಾಯಚೂರು ಜಿಲ್ಲೆಯಲ್ಲಿ 2 ಕೊರೊನಾ ಪ್ರಕರಣ ವರದಿಯಾಗಿದೆ.
ಜಿಲ್ಲಾವಾರು ಕೊರೊನಾದಿಂದ ಮೃತಪಟ್ಟವರ ವಿವರ
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 10 ಜನರ ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10, ಮೈಸೂರಿನಲ್ಲಿ 5, ಕೋಲಾರ ಜಿಲ್ಲೆಯಲ್ಲಿ 3, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, ಬೆಳಗಾವಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಹಾಸನ, ಧಾರವಾಡ, ಕೊಡಗು ಜಿಲ್ಲೆಯಲ್ಲಿ, ಮಂಡ್ಯ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿಂದು ತಲಾ ಒಬ್ಬರ ಸಾವು ವರದಿಯಾಗಿದೆ.
ಇದನ್ನೂ ಓದಿ: Corona third Wave: ಆಗಸ್ಟ್ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ ನಿಶ್ಚಿತ: ಐಸಿಎಂಆರ್ ಹಿರಿಯ ವೈದ್ಯ
Published On - 7:17 pm, Fri, 16 July 21