ರಾಜ್ಯ ಸರ್ಕಾರಕ್ಕೆ ಸಾರಿಗೆ ಸಿಬ್ಬಂದಿಯಿಂದ ಡೆಡ್​ಲೈನ್​; ಸೋಮವಾರದಿಂದ ಜೈಲ್ ಭರೋ ಚಳವಳಿ: ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರ ಸಮಸ್ಯೆಗಳ‌ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಕೊಡುತ್ತೇವೆ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಶಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಸಾರಿಗೆ ಸಿಬ್ಬಂದಿಯಿಂದ ಡೆಡ್​ಲೈನ್​; ಸೋಮವಾರದಿಂದ ಜೈಲ್ ಭರೋ ಚಳವಳಿ: ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್


ಬೆಂಗಳೂರು: ಸತತವಾಗಿ 11 ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರುವ ರಾಜ್ಯ ಸಾರಿಗೆ ಸಿಬ್ಬಂದಿ ಸರ್ಕಾರಕ್ಕೆ ಡೆಡ್​ಲೈನ್ ನೀಡಿದ್ದಾರೆ. ಈ ಬಗ್ಗೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿದ್ದು, ಮುಷ್ಕರ ನಿರತ ಸಾರಿಗೆ ಸಿಬ್ಬಂದಿಯಿಂದ ಸೋಮವಾರದ ನಂತರ ಜೈಲ್ ಭರೋ ಚಳವಳಿ ಆರಂಭವಾಗಲಿದೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳುತ್ತೆ. 1 ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ಧರಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಸಾರಿಗೆ ನೌಕರರ ಸಮಸ್ಯೆಗಳ‌ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಕೊಡುತ್ತೇವೆ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಅವರು ಆಶಿಸಿದ್ದಾರೆ.

ರಾಜ್ಯ ಸರ್ಕಾರವು ಸಾರಿಗೆ ಕೆಲಸಗಾರರ ಬಗ್ಗೆ ತಿರಸ್ಕಾರ ಭಾವನೆ ತೋರಿಸುತ್ತಿದೆ. ನೌಕರರ ಮನೆ ಮುಂದೆ ಹೋಗಿ ಅವರನ್ನ ಮಾನಸಿಕವಾಗಿ ಘಾಸಿಗೊಳಿಸುತ್ತಿದೆ. ಇದರಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಸಮಸ್ಯೆ ಬಗ್ಗೆ ಮುಕ್ತ ಮಾತುಕತೆ ಮಾಡಿ ಬಗೆಹರಿಸಬೇಕು. ಆದ್ರೆ ಸರ್ಕಾರ ದೌರ್ಜನ್ಯದ ಮಾರ್ಗ ಅನುಸರಿಸುತ್ತಿದೆ. ಹಲವಾರು ನೌಕರರನ್ನ ಕಾರಣ ಕೊಡದೇ ಅರೆಸ್ಟ್ ಮಾಡಿ, ಭಯೋತ್ಪಾದಕರನ್ನಾಗಿ ನೋಡಲಾಗುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದರು.

ಬಾಗಲಕೋಟೆ ಜಮಖಂಡಿಯಲ್ಲಿ ಸರ್ಕಾರಿ ಬಸ್ ಚಾಲಕನಿಗೆ ಕಲ್ಲಿನಿಂದ ಹಲ್ಲೆ ಅರೋಪ ಪ್ರಸ್ತಾಪಿಸಿದ ಕೋಡಿಹಳ್ಳಿ ಚಂದ್ರಶೇಖರ್, ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಈ ರೀತಿ ಘಟನೆ ನಡೆಯಬಾರದಿತ್ತು. ನಮ್ಮವರು ಶಾಂತ ರೀತಿಯಲ್ಲಿ ಧರಣಿ ಮಾಡ್ತಿದ್ದಾರೆ. ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಅವರು ಒತ್ತಾಯ ಮಾಡಿದರು.

(Karnataka transport employees union president kodihalli chandrashekar press meet details)

Published On - 3:37 pm, Sat, 17 April 21

Click on your DTH Provider to Add TV9 Kannada