Bus Strike: ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ತಿಂಗಳ ಅಂತರದಲ್ಲಿ ಎರಡು ಬಾರಿ ಸಾರಿಗೆ ನೌಕರರ ಮುಷ್ಕರ; ಇಂದು ಸಹ ಪ್ರಯಾಣಿಕರ ಪರದಾಟ

|

Updated on: Apr 08, 2021 | 8:44 AM

KSRTC BMTC Bus Strike: ನೀ ಕೊಡೆ, ನಾ ಬಿಡೆ ಎನ್ನುವ ರೀತಿಯಲ್ಲಿ ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿ ಪಟ್ಟು ಹಿಡಿದಿದ್ದು, ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪುಹಾಕದೇ ಇರಲು ಬಿಎಂಟಿಸಿ ನಿರ್ಧರಿಸಿದೆ. ಮುಷ್ಕರದ ನಡುವೆಯೂ ಇಂದಿನಿಂದ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದ್ದು, ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

Bus Strike: ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ತಿಂಗಳ ಅಂತರದಲ್ಲಿ ಎರಡು ಬಾರಿ ಸಾರಿಗೆ ನೌಕರರ ಮುಷ್ಕರ; ಇಂದು ಸಹ ಪ್ರಯಾಣಿಕರ ಪರದಾಟ
ಮೆಜೆಸ್ಟಿಕ್​
Follow us on

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಕೆಎಸ್​ಆರ್​ಟಿಸಿ ನೌಕರರ ನಡುವಿನ ಗುದ್ದಾಟದಿಂದ ಜನಸಾಮಾನ್ಯರು ಪರದಾಡುತ್ತಿದ್ದಾರೆ. 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿಗಳ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ಯಾವುದೇ ಬಸ್ ಸಂಚಾರ ಕಂಡುಬಂದಿಲ್ಲ. ಇತಿಹಾಸದಲ್ಲೇ ಮೊದಲಬಾರಿಗೆ ನಾಲ್ಕೇ ತಿಂಗಳಲ್ಲಿ ಎರಡನೇ ಬಾರಿಗೆ ಸಾರಿಗೆ ನೌಕರರು ಮುಷ್ಕರ ಹೂಡಿದ್ದು, ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿಗೆ ಮುಷ್ಕರ ಮುಂದುವರೆಸುವುದಾಗಿ ಸಿಬ್ಬಂದಿ ವರ್ಗದವರು ಎಚ್ಚರಿಕೆ ನೀಡಿದ್ದಾರೆ.

ನೀ ಕೊಡೆ, ನಾ ಬಿಡೆ ಎನ್ನುವ ರೀತಿಯಲ್ಲಿ ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿ ಪಟ್ಟು ಹಿಡಿದಿದ್ದು, ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪುಹಾಕದೇ ಇರಲು ಬಿಎಂಟಿಸಿ ನಿರ್ಧರಿಸಿದೆ. ಮುಷ್ಕರದ ನಡುವೆಯೂ ಇಂದಿನಿಂದ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದ್ದು, ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ತರಬೇತಿ ನಿರತ ಚಾಲಕ, ಕಂಡಕ್ಟರ್, ಮೆಕ್ಯಾನಿಕ್‌ಗಳಿಗೆ ಇಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿರುವ ಬಿಎಂಟಿಸಿ, ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಬಿಎಂಟಿಸಿಯಲ್ಲಿ ಒಟ್ಟು 1,484 ತರಬೇತಿ ನಿರತ ಸಿಬ್ಬಂದಿ ಇರುವುದರಿಂದ ಅವರಿಂದಲೇ ಸಾರಿಗೆ ಸೇವೆ ಆರಂಭಿಸುವ ಯೋಚನೆಯಲ್ಲಿ ಬಿಎಂಟಿಸಿ ಇದೆ. ಈ ನಿರ್ಧಾರದ ಮೂಲಕ ಮುಷ್ಕರ ನಿರತ ನೌಕರರಿಗೆ ತಿರುಗೇಟು ನೀಡಲಾಗಿದ್ದು, ಮುಷ್ಕರ ಕೈ ಬಿಡದಿದ್ದರೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪರೋಕ್ಷವಾಗಿ ರವಾನಿಸಿಲಾಗಿದೆ. ಈ ನಡುವೆ, ನಗರದ ಪ್ರಮುಖ ಮಾರ್ಗಗಳಲ್ಲಿ ಮಾತ್ರ ಖಾಸಗಿ ವಾಹನ ಸಂಚಾರ ನಡೆಯುತ್ತಿದ್ದು, ಲಗೇಜ್, ಮಕ್ಕಳನ್ನು ಹೊತ್ತು ಜನರು ಬಸ್‌ಗೆ ಕಾಯುತ್ತಿದ್ದಾರೆ.

ಆಟೋದವರಿಂದ ದುಪ್ಪಟ್ಟು ಹಣ ವಸೂಲಿ
ಇನ್ನೊಂದೆಡೆ, ಮುಷ್ಕರದ ಲಾಭ ಪಡೆಯುತ್ತಿರುವ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದು, ಮೆಜೆಸ್ಟಿಕ್​ನಿಂದ ಬಸವನಗುಡಿಗೆ ತೆರಳು ಮಹಾರಾಷ್ಟ್ರದಿಂದ ಬಂದವರ ಬಳಿ ₹150 ಕೇಳಿದ್ದಾರೆ. ಸ್ಥಳದಲ್ಲಿದ್ದ ಟಿವಿ9 ಪ್ರತಿನಿಧಿ ಈ ಬಗ್ಗೆ ವಿಚಾರಿಸಿದಾಗ ಆ ಕಡೆಯಿಂದ ಖಾಲಿ ಬರಬೇಕು. ಕಡಿಮೆ ತೆಗೆದುಕೊಂಡ್ರೆ ನಮಗೆ ನಷ್ಟ ಎಂದು ಸಬೂಬು ನೀಡಿದ್ದಾರೆ. ಸಾಮಾನ್ಯ ದರವೇ ₹70 ರಿಂದ ₹80 ಮೀರುವುದಿಲ್ಲ, ಮೀಟರ್​ ಎಷ್ಟಿದೆಯೋ ಅಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದಾಗ, ಕನಿಷ್ಟ ₹120 ಆದರೂ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ನಮ್ಮ ಟಿವಿ9 ಪ್ರತಿನಿಧಿ ಆಟೋ ಚಾಲಕರೊಂದಿಗೆ ಮಾತನಾಡಿ ಪ್ರಯಾಣಿಕರನ್ನು ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:
Karnataka Transport Workers Strike: ಸಾರಿಗೆ ನೌಕರರ ಮುಷ್ಕರದ ಈ ದಿನ ಏನೇನಾಯ್ತು?‌ 

Bus Strike: ಸಾರಿಗೆ ನೌಕರರ ಒಂದು ದಿನದ ಮುಷ್ಕರದಿಂದ ನಿಗಮಗಳಿಗೆ ಆದ ನಷ್ಟವೆಷ್ಟು ಗೊತ್ತಾ?

Published On - 7:11 am, Thu, 8 April 21