Karnataka Unlock: ಕರ್ನಾಟಕದಲ್ಲಿ ಜುಲೈ 5 ರಿಂದ ಅನ್​ಲಾಕ್​ 3.0 ಜಾರಿ ಸಾಧ್ಯತೆ; ಯಾವುದಕ್ಕೆಲ್ಲಾ ರಿಲೀಫ್?

| Updated By: Digi Tech Desk

Updated on: Jun 29, 2021 | 9:33 AM

ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್​ಲಾಕ್​ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದ ಪಾಸಿಟಿವ್ ರೇಟ್ ಶೇ.1.97ರಷ್ಟಿದ್ದು, ರಾಜಧಾನಿ ಬೆಂಗಳೂರು ಪಾಸಿಟಿವ್ ರೇಟ್ ಶೇ.1.27ರಷ್ಟಿದೆ.

Karnataka Unlock: ಕರ್ನಾಟಕದಲ್ಲಿ ಜುಲೈ 5 ರಿಂದ ಅನ್​ಲಾಕ್​ 3.0 ಜಾರಿ ಸಾಧ್ಯತೆ; ಯಾವುದಕ್ಕೆಲ್ಲಾ ರಿಲೀಫ್?
ಮಾಲ್
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭಿಸಿದೆ. ಜುಲೈ 5 ರಿಂದ ಅನ್​ಲಾಕ್​ 3.O ಜಾರಿಯಾಗುವ ಸಾಧ್ಯತೆಯಿದೆ. ಇದರಲ್ಲಿ ರಾಜ್ಯ ಸರ್ಕಾರ ಥಿಯೇಟರ್, ಮಾಲ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್​ಗೆ ರಿಲೀಫ್ ನೀಡುವ ಸಾಧ್ಯತೆ ಹೆಚ್ಚಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭಿಸಿದ ಸರ್ಕಾರ, ಕಳೆದ ವಾರ ಅನ್​ಲಾಕ್​ 2.O ಜಾರಿಗೆ ತಂದಿತ್ತು.

ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್​ಲಾಕ್​ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದ ಪಾಸಿಟಿವ್ ರೇಟ್ ಶೇ.1.97ರಷ್ಟಿದ್ದು, ರಾಜಧಾನಿ ಬೆಂಗಳೂರು ಪಾಸಿಟಿವ್ ರೇಟ್ ಶೇ.1.27ರಷ್ಟಿದೆ. ಹೀಗಾಗಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಮಾಲ್, ಥಿಯೇಟರ್, ಪಬ್, ಬಾರ್, ಕ್ಲಬ್, ಸ್ವಿಮ್ಮಿಂಗ್ ಪೂಲ್​ಗಳಿಗೆ ಅನುಮತಿ ಕೊಡುವ ಸಾಧ್ಯತೆಯಿದೆ.

ಬೆಳಗ್ಗೆಯಿಂದ ಸಂಜೆವರೆಗೂ ಮಾಲ್ ತೆರೆಯಲು ಅನುಮತಿ ಸಿಗುವ ಸಾಧ್ಯತೆಯಿದ್ದು, ಶೇ.50 ರಷ್ಟು ಗ್ರಾಹಕರಿಗೆ ಅವಕಾಶ ನೀಡಬಹುದು. 5 ವರ್ಷದೊಳಗಿನ ಮಕ್ಕಳಿಗೆ ಮಾಲ್​ನೊಳಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಪಬ್ ಗಳಿಗೆ ಬಹುತೇಕ ರಿಲೀಫ್ ಸಿಗುವ ಸಾಧ್ಯತೆಯಿದ್ದು, ಡ್ಯಾನ್ಸ್ ಫ್ಲೋರ್​ಗಳಿಗೆ ನಿರ್ಬಂಧ ಹೇರುವ ಮೂಲಕ ಪಬ್​ಗೆ ಅವಕಾಶ ನೀಡಬಹುದು. ಬಾರ್​ಗಳಲ್ಲಿ ಟೇಬಲ್ ಸರ್ವಿಸ್​ಗೆ ಅವಕಾಶ ನೀಡಬಹುದು. ಸದ್ಯ ಬಾರ್​ನಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶವಿದೆ. ಜುಲೈ 5 ರಿಂದ ಬಾರ್​ನಲ್ಲಿ ಕೂತು ಕುಡಿಯಲು ಅವಕಾಶ ಕೊಡಬಹುದು.

ಕ್ಲಬ್, ಕ್ಲಬ್ ಹೌಸ್​ಗಳಿಗೂ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ಥಿಯೇಟರ್​ಗಳಿಗೆ ಜುಲೈ 5 ರಿಂದ ರಿಲೀಫ್ ಸಿಗುವುದು ಸ್ವಲ್ಪ ಅನುಮಾನವಿದೆ. ಒಂದೇ ಜಾಗದಲ್ಲಿ ಹೆಚ್ಚು ಸಮಯ ಇರುವ ಕಾರಣ ಜುಲೈ 5 ರ ನಂತರವೂ ಥಿಯೇಟರ್​ಗೆ ಅನುಮತಿ ಸಿಗುವುದು ಅನುಮಾನವಿದೆ.

ಜುಲೈ 5ರ ನಂತರ ನೈಟ್ ಕರ್ಫ್ಯೂ ಮುಂದುವರಿಯಬಹುದು. ಸದ್ಯ ನೈಟ್ ಕರ್ಫ್ಯೂ ಸಂಜೆ 6 ಗಂಟೆಯಿಂದ ಜಾರಿಯಲ್ಲಿದೆ. ಆದರೆ ಜುಲೈ 5ರಿಂದ ಸಂಜೆ 7 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ. ವಿಕೇಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಯುತ್ತದೆ.

ಇದನ್ನೂ ಓದಿ

Petrol Price Today: ಒಂದು ದಿನದ ವಿರಾಮದ ಬಳಿಕ ಮತ್ತೆ ಏರಿಕೆಯಾದ ಪೆಟ್ರೋಲ್​, ಡೀಸೆಲ್​ ದರ!

ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ ಬೆನ್ನಲ್ಲೇ ಶುರುವಾಯ್ತು ಸಚಿವರಗಳ ಮಧ್ಯ ಸಮರ

(Unlock 3.0 is likely to take effect from July 5 in Karnataka)

Published On - 9:29 am, Tue, 29 June 21