SSLC Exam Cancel? ಆಂಧ್ರಕ್ಕೆ ಸುಪ್ರೀಂ ಛೀಮಾರಿ‌ ಬಿದ್ದಿತ್ತು, ವೈಯಕ್ತಿಕ ಪ್ರತಿಷ್ಠೆ ಪಕ್ಕಕ್ಕಿಟ್ಟು ನಮ್ಮ ಸರ್ಕಾರವೂ ಮಕ್ಕಳನ್ನು ಅಗ್ನಿಪರೀಕ್ಷೆಯಿಂದ ಪಾರು ಮಾಡುತ್ತಾ?

Karnataka SSLC exam 2021: ಕೊರೊನಾ ಸಮ್ಮುಖದಲ್ಲಿ... ಕರ್ನಾಟಕ‌ ಸರಕಾರ ಪರೀಕ್ಷೆ‌ ನಡೆಸುವುದು ಎಷ್ಟು ಸರಿ ಅಂತಾ ಯೋಚಿಸಬೇಕಿದೆ.‌ ಪಾಲಕರು‌, ವಿದ್ಯಾರ್ಥಿಗಳ ಆತಂಕವನ್ನ ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.‌ ವಿದ್ಯಾರ್ಥಿಗಳ‌ ಜೀವದ‌ ಜೊತೆ‌ ಚಲ್ಲಾಟ ಆಡುವುದನ್ನು‌ ನಿಲ್ಲಿಸಬೇಕಿದೆ ಎನ್ನುತ್ತಿದ್ದಾರೆ ಪಾಲಕರು.

SSLC Exam Cancel? ಆಂಧ್ರಕ್ಕೆ ಸುಪ್ರೀಂ ಛೀಮಾರಿ‌ ಬಿದ್ದಿತ್ತು, ವೈಯಕ್ತಿಕ ಪ್ರತಿಷ್ಠೆ ಪಕ್ಕಕ್ಕಿಟ್ಟು ನಮ್ಮ ಸರ್ಕಾರವೂ ಮಕ್ಕಳನ್ನು ಅಗ್ನಿಪರೀಕ್ಷೆಯಿಂದ ಪಾರು ಮಾಡುತ್ತಾ?
SSLC Exam Cancel?: ಆಂಧ್ರಕ್ಕೆ ಸುಪ್ರೀಂ ಛೀಮಾರಿ‌ ಬಿದ್ದಿತ್ತು, ವೈಯಕ್ತಿಕ ಪ್ರತಿಷ್ಠೆ ಪಕ್ಕಕ್ಕಿಟ್ಟು ನಮ್ಮ ಸರ್ಕಾರವೂ ಮಕ್ಕಳನ್ನು ಅಗ್ನಿಪರೀಕ್ಷೆಯಿಂದ ಪಾರು ಮಾಡುತ್ತಾ?
TV9kannada Web Team

| Edited By: sadhu srinath

Jun 29, 2021 | 12:17 PM

ಬೆಂಗಳೂರು: ಹತ್ತನೆ‌ ತರಗತಿ‌ ಪರೀಕ್ಷೆ‌ ನಡೆಸಿಯೇ ಸಿದ್ದ ಅಂತಾ‌ ಹಠಕ್ಕೆ‌ ಬಿದ್ದಿದ್ದ ಆಂಧ್ರ ಸರಕಾರಕ್ಕೆ ಇದೇ 18ರಂದು ಸುಪ್ರೀಂ ಕೋರ್ಟ್​ ಛೀಮಾರಿ‌ ಹಾಕಿತ್ತು. ಪ್ರತಿ‌ ವಿದ್ಯಾರ್ಥಿಯ ಬಾಬತ್ತಿನಲ್ಲಿ 1.5 ಕೋಟಿ‌‌ ರೂ ಡಿಪಾಜಿಟ್ ಮಾಡಿ, ಪರೀಕ್ಷೆ‌ ನಡೆಸಬೇಕಾಗುತ್ತದೆ. ಪರೀಕ್ಷೆ‌ ನಡೆಸಿಯಾದ ಮೇಲೆ ಯಾವುದೇ ವಿದ್ಯಾರ್ಥಿಗೆ ಏನೇ ತೊಂದರೆ ಆದರೂ ಸರಕಾರವೆ‌ ಅದರ ಜವಾಬ್ದಾರಿ ಹೊರಬೇಕಾಗುತ್ತದೆ. ವಿದ್ಯಾರ್ಥಿಗಳ‌ ಜೀವದ ಜೊತೆ ಆಟವಾಡುವುದು‌ ಸರಿಯಲ್ಲ. ಪರೀಕ್ಷೆ‌ ನಡೆಸುವುದನ್ನು‌ ಕೈಬಿಡಿ ಅಂತಾ ಸುಪ್ರೀಂ ಕೋರ್ಟ್​ ಎಚ್ಚರಿಕೆ ನೀಡಿತ್ತು.

ಸುಪ್ರೀಂ ಎಚ್ಚರಿಕೆಯ ಆದೇಶ ಕಂಡು ತಣ್ಣಗೆ ನಡುಗಿದ್ದ ಆಂಧ್ರ‌ ಸರಕಾರ‌ ಸುಪ್ರೀಂ ಕೋರ್ಟ್​ ಕ್ಷಮೆ‌ ಕೋರಿ, ಪರೀಕ್ಷೆ‌ ನಡೆಸಲ್ಲ‌ ಅಂತಾ ಅಫಿಡೆವಿಟ್ ಕೊಟ್ಟು ಅರ್ಜಿ‌ ವಾಪಸ್ಸು ಪಡೆದಿತ್ತು.‌ ಹತ್ತನೇ ತರಗತಿ ಪರೀಕ್ಷೆ ನಡೆಸುವ ಆಂಧ್ರ ಸರಕಾರದ‌ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು, ಪಾಲಕರು‌ ಹಾಕಿದ್ದ ಅರ್ಜಿ ವಿಚಾರಣೆ ವೇಳೆ‌ ಈ‌ ರೀತಿಯ‌ ತೀರ್ಮಾನ‌ ಹೊರಬಿದ್ದಿತ್ತು. ಪರೀಕ್ಷೆ‌ ನಡೆಸುವ ಆಂಧ್ರದ ಅರ್ಜಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್​ ವಜಾ ಮಾಡಿತ್ತು.

ಎಕ್ಸಾಕ್ಟ್​​​ಲಿ ಅದನ್ನೇ ಮುಂದುವರಿಸಿ ನೋಡುವುದಾದರೆ ರಾಜ್ಯ ಸೇರಿದಂತೆ ದೇಶದ ಇಂದಿನ ಪರಿಸ್ಥಿತಿ ಪರಾಮರ್ಶಿಸಿದಾಗ ಕೊರೊನಾ ಎರಡನೆ ಅಲೆ ತಣ್ಣಗಾಗಿದೆ. ಬಹುತೇಕ ಕ್ಷೀಣಿಸಿದೆ. ಅದರಿಂದಾಗಿ ಜಾರಿಗೊಳಿಸಿದ್ದ ಲಾಕ್​ಡೌ್​ನ್​ ಮಾರ್ಗಸೂಚಿಗಳು ಬಹುತೇಕ ತೆರವು ಕಾಣುತ್ತಿವೆ. ಆದರೆ ಈ ಮಧ್ಯೆಯೇ… ಈಗ ಡೆಲ್ಟಾ ಪ್ಲಸ್ ವೇರಿಯಂಟ್ ವೈರಸ್ ಎಂಬ ತೀವ್ರ ಪರಿಣಾಮ‌ದ ಸೋಂಕು ತಗಲುತ್ತಿದೆ. ಜೊತೆಗೆ ಮೂರನೇ ಅಲೆ‌ಯ ಭೀತಿ ಕಾಡುತ್ತಿದೆ.

SSLC exam 2021 will Karnataka government follow andhra government obedience with supreme court to cancel the exam

SSLC Exam Cancel?: ಆಂಧ್ರಕ್ಕೆ ಸುಪ್ರೀಂ ಛೀಮಾರಿ‌ ಬಿದ್ದಿತ್ತು, ವೈಯಕ್ತಿಕ ಪ್ರತಿಷ್ಠೆ ಪಕ್ಕಕ್ಕಿಟ್ಟು ನಮ್ಮ ಸರ್ಕಾರವೂ ಮಕ್ಕಳನ್ನು ಅಗ್ನಿಪರೀಕ್ಷೆಯಿಂದ ಪಾರು ಮಾಡುತ್ತದಾ?

ಇಂತಹ‌ ವೇಳೆಯಲ್ಲಿ‌ ಕರ್ನಾಟಕ‌ ಸರಕಾರ ಪರೀಕ್ಷೆ‌ ನಡೆಸುವುದು ಎಷ್ಟು ಸರಿ ಅಂತಾ ಯೋಚಿಸಬೇಕಿದೆ.‌ ಪಾಲಕರು‌, ವಿದ್ಯಾರ್ಥಿಗಳ ಆತಂಕವನ್ನ ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.‌ ವಿದ್ಯಾರ್ಥಿಗಳ‌ ಜೀವದ‌ ಜೊತೆ‌ ಚಲ್ಲಾಟ ಆಡುವುದನ್ನು‌ ನಿಲ್ಲಿಸಬೇಕಿದೆ ಎನ್ನುತ್ತಿದ್ದಾರೆ ಪಾಲಕರು. ಬಹುತೇಕ ಪಾಲಕರು ತಮ್ಮ ಮಕ್ಕಳಿಗೆ ಪರೀಕ್ಷೆ ಬೇಡ ಅನ್ನುತ್ತಿದ್ದಾರೆ. ಪಾಲಕರು‌ ಮತ್ತು ವಿದ್ಯಾರ್ಥಿಗಳ ಆತಂಕವನ್ನ ಅರ್ಥ ಮಾಡಿಕೊಳ್ಳಬೇಕಿದೆ.‌ ವಿದ್ಯಾರ್ಥಿಗಳ‌ ಜೀವದ‌ ಜೊತೆ‌ ಚಲ್ಲಾಟ ಆಡುವುದನ್ನು‌ ನಿಲ್ಲಿಸಬೇಕಿದೆ ಅನ್ನುವ ಪಾಲಕರ‌ ವಾದಕ್ಕೆ‌ ಕಿವಿಗೊಡಬೇಕಿದೆ.

ಜೊತೆಗೆ… ಆಂಧ್ರ ಸರ್ಕಾರದ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳು/ ಪೋಷಕರು ಸೆಟೆದುನಿಂತ ಹಾಗೆ ನಮ್ಮ ರಾಜ್ಯದಿಂದಲೂ ಸುಪ್ರೀಂ ಕೋರ್ಟ್​ ಕದ ತಟ್ಟುವ ಆಲೋಚನೆಯಲ್ಲಿದ್ದಾರೆ ಪೋಷಕರು… ಹಾಗಾಗಿ ವೈಯಕ್ತಿಕ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ರಾಜ್ಯ ಸರ್ಕಾರ ಮಕ್ಕಳನ್ನು ಅಗ್ನಿ ಪರೀಕ್ಷೆಯಿಂದ ಪಾರು ಮಾಡುತ್ತದಾ? ಎಂಬುದೇ ಸದ್ಯದ ಪ್ರಶ್ನೆ.

Karnataka SSLC Exam 2021 Timetable: ಜುಲೈ 19 ಹಾಗೂ 22ರಂದು ಎಸ್​ಎಸ್​​ಎಲ್​ಸಿ ಪರೀಕ್ಷೆ- ಶಿಕ್ಷಣ ಸಚಿವ ಸುರೇಶ್ ಕುಮಾರ್ (SSLC exam 2021 will Karnataka government follow andhra government obedience with supreme court to cancel the exam)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada