Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಸ್ಥಿತಿಯಲ್ಲಿರುವ ವರದಾ ನದಿ ಸೇತುವೆ; ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಲು ಹಾವೇರಿ ಜನರಿಂದ ಮನವಿ

ಸುಮಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ನಿತ್ಯವೂ ಇಲ್ಲಿ ಸಾಕಷ್ಟು ವಾಹನಗಳು, ಎತ್ತಿನಬಂಡಿಗಳು ಓಡಾಡುತ್ತವೆ. ಆದರೆ ಈಗ ರಾತ್ರಿ ಹೊತ್ತಿನಲ್ಲಿ ಮಾತ್ರವಲ್ಲ ಬ್ರಿಡ್ಜ್ ಮೇಲೆ ಹಗಲು ಹೊತ್ತಿನಲ್ಲೂ ಓಡಾಡಲು ಜನರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ದುಸ್ಥಿತಿಯಲ್ಲಿರುವ ವರದಾ ನದಿ ಸೇತುವೆ; ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಲು ಹಾವೇರಿ ಜನರಿಂದ ಮನವಿ
ದುಸ್ಥಿತಿಯಲ್ಲಿರುವ ವರದಾ ನದಿ ಸೇತುವೆ
Follow us
TV9 Web
| Updated By: Digi Tech Desk

Updated on:Jan 26, 2023 | 10:22 AM

ಹಾವೇರಿ : ಎರಡು ಗ್ರಾಮಗಳ ನಡುವಿನ ವರದಾ ನದಿಯ ಸೇತುವೆ ಶಿಥಿಲಗೊಂಡು ತಡೆಗೋಡೆ ಇಲ್ಲದೆ ಕಬ್ಬಿಣದ ಸರಳುಗಳು ಹೊರ ಚಾಚಿ ಅಪಾಯದ ಮಟ್ಟಕ್ಕೆ ತಲುಪಿದ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಅಕ್ಕೂರು ಹಾಗೂ ಮರಡೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ವರದಾ ನದಿ ಸೇತುವೆ ಸಂಪೂರ್ಣ ಹಾಳಾಗಿದ್ದು, ಅಪಾಯದ ಮಟ್ಟ ತಲುಪಿದೆ. ಜತೆಗೆ ರೈತರ ಅನುಕೂಲಕ್ಕೆಂದು ಸೇತುವೆಯಲ್ಲಿ ನೀರು ನಿಲ್ಲಿಸುವ ನಿಟ್ಟಿನಲ್ಲಿ ಕೆಳ ಭಾಗದಲ್ಲಿ ಗೇಟ್​ವಾಲ್ ಅಳವಡಿಸಲಾಗಿದ್ದು, ಅವುಗಳು ಕೂಡಾ ತುಕ್ಕು ಹಿಡಿದು ಸಂಪೂರ್ಣ ಹಾಳಾಗಿವೆ. ಈ ಸೇತುವೆಯಲ್ಲಿ ತಡೆಗೋಡೆಗಳು ಇಲ್ಲದ ಕಾರಣ ಇಲ್ಲಿ ಸಂಚರಿಸುವ ಜನರಲ್ಲಿ‌ ಸದ್ಯ ಭಯದ ವಾತಾವರಣ ಉಂಟಾಗಿದೆ.

ಸುಮಾರು ಎರಡು ದಶಕಗಳ ಹಿಂದೆ ಗುತ್ತಲ ಹೋಬಳಿಯ ಅಕ್ಕೂರು ಹಾಗೂ ಮರಡೂರು ಗ್ರಾಮಗಳ ಮಧ್ಯೆ ಹಾದು ಹೋಗಿರುವ ವರದಾ ನದಿಗೆ ಸಾರ್ವಜನಿಕರ ಅನುಕೂಲಕ್ಕೆಂದು ನದಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಿಸಿದೆ. ನಿರ್ಮಿಸಿದ ದಿನಗಳಿಂದ ಇಲ್ಲಿಯವರೆಗೂ ಸೂಕ್ತ ನಿರ್ವಹಣೆ ಇಲ್ಲದೆ ಈ ಸೇತುವೆ ಹಾಳಾಗಿದೆ. ಸಂಪೂರ್ಣ ಹಾಳಾಗಿರುವ ಸೇತುವೆ ಮರು ದುರಸ್ಥಿಗೊಳಿಸುವಂತೆ ಹಾಗೂ ಇಲ್ಲಿರುವ ಸಮಸ್ಯೆಗೆ ಸ್ಪಂಧಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ನಿತ್ಯವೂ ಇಲ್ಲಿ ಸಾಕಷ್ಟು ವಾಹನಗಳು, ಎತ್ತಿನಬಂಡಿಗಳು ಓಡಾಡುತ್ತವೆ. ಆದರೆ ಈಗ ರಾತ್ರಿ ಹೊತ್ತಿನಲ್ಲಿ ಮಾತ್ರವಲ್ಲ ಬ್ರಿಡ್ಜ್ ಮೇಲೆ ಹಗಲು ಹೊತ್ತಿನಲ್ಲೂ ಓಡಾಡಲು ಜನರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬ್ರಿಡ್ಜ್ ದುರಸ್ಥಿ ಮಾಡಿಸಿ, ಎರಡೂ ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಮಾತ್ರ ಈವರೆಗೂ ಆಗಿಲ್ಲ ಎಂದು ರೈತ ಮುಖಂಡರಾದ ಲೋಕೇಶ ಕುಬಸದ ತಿಳಿಸಿದ್ದಾರೆ.

ಒಟ್ಟಾರೆ ಸೇತುವೆ ಹಾಳಾಗಿರುವುದು ಜನರಲ್ಲಿ ಒಂದು ರೀತಿಯ ಭಯ ಹುಟ್ಟು ಹಾಕಿದ್ದರೆ, ಸೇತುವೆಯ ಎರಡು ಬದಿಯಲ್ಲೂ ನಿರ್ಮಿಸಲಾದ ತಡೆಗೊಡೆಗಳು ಸಂಪೂರ್ಣ ಹಾಳಾಗಿ ಆದರಲ್ಲಿರುವ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಹೊರ ಚಾಚಿ ರಸ್ತೆಯ ಪಕ್ಕಕ್ಕೆ ಬಂದಿದೆ. ಇದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಆದಷ್ಟು ಬೆಗ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮುಂದಾಗುವ ಅಪಾಯವನ್ನು ತಪ್ಪಿಸಬೇಕಿದೆ.

Published On - 9:16 am, Tue, 29 June 21