Karnataka Unlock: ಕರ್ನಾಟಕದಲ್ಲಿ ಜುಲೈ 5 ರಿಂದ ಅನ್ಲಾಕ್ 3.0 ಜಾರಿ ಸಾಧ್ಯತೆ; ಯಾವುದಕ್ಕೆಲ್ಲಾ ರಿಲೀಫ್?
ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್ಲಾಕ್ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದ ಪಾಸಿಟಿವ್ ರೇಟ್ ಶೇ.1.97ರಷ್ಟಿದ್ದು, ರಾಜಧಾನಿ ಬೆಂಗಳೂರು ಪಾಸಿಟಿವ್ ರೇಟ್ ಶೇ.1.27ರಷ್ಟಿದೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಿದೆ. ಜುಲೈ 5 ರಿಂದ ಅನ್ಲಾಕ್ 3.O ಜಾರಿಯಾಗುವ ಸಾಧ್ಯತೆಯಿದೆ. ಇದರಲ್ಲಿ ರಾಜ್ಯ ಸರ್ಕಾರ ಥಿಯೇಟರ್, ಮಾಲ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ಗೆ ರಿಲೀಫ್ ನೀಡುವ ಸಾಧ್ಯತೆ ಹೆಚ್ಚಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಿದ ಸರ್ಕಾರ, ಕಳೆದ ವಾರ ಅನ್ಲಾಕ್ 2.O ಜಾರಿಗೆ ತಂದಿತ್ತು.
ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್ಲಾಕ್ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದ ಪಾಸಿಟಿವ್ ರೇಟ್ ಶೇ.1.97ರಷ್ಟಿದ್ದು, ರಾಜಧಾನಿ ಬೆಂಗಳೂರು ಪಾಸಿಟಿವ್ ರೇಟ್ ಶೇ.1.27ರಷ್ಟಿದೆ. ಹೀಗಾಗಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಮಾಲ್, ಥಿಯೇಟರ್, ಪಬ್, ಬಾರ್, ಕ್ಲಬ್, ಸ್ವಿಮ್ಮಿಂಗ್ ಪೂಲ್ಗಳಿಗೆ ಅನುಮತಿ ಕೊಡುವ ಸಾಧ್ಯತೆಯಿದೆ.
ಬೆಳಗ್ಗೆಯಿಂದ ಸಂಜೆವರೆಗೂ ಮಾಲ್ ತೆರೆಯಲು ಅನುಮತಿ ಸಿಗುವ ಸಾಧ್ಯತೆಯಿದ್ದು, ಶೇ.50 ರಷ್ಟು ಗ್ರಾಹಕರಿಗೆ ಅವಕಾಶ ನೀಡಬಹುದು. 5 ವರ್ಷದೊಳಗಿನ ಮಕ್ಕಳಿಗೆ ಮಾಲ್ನೊಳಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಪಬ್ ಗಳಿಗೆ ಬಹುತೇಕ ರಿಲೀಫ್ ಸಿಗುವ ಸಾಧ್ಯತೆಯಿದ್ದು, ಡ್ಯಾನ್ಸ್ ಫ್ಲೋರ್ಗಳಿಗೆ ನಿರ್ಬಂಧ ಹೇರುವ ಮೂಲಕ ಪಬ್ಗೆ ಅವಕಾಶ ನೀಡಬಹುದು. ಬಾರ್ಗಳಲ್ಲಿ ಟೇಬಲ್ ಸರ್ವಿಸ್ಗೆ ಅವಕಾಶ ನೀಡಬಹುದು. ಸದ್ಯ ಬಾರ್ನಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶವಿದೆ. ಜುಲೈ 5 ರಿಂದ ಬಾರ್ನಲ್ಲಿ ಕೂತು ಕುಡಿಯಲು ಅವಕಾಶ ಕೊಡಬಹುದು.
ಕ್ಲಬ್, ಕ್ಲಬ್ ಹೌಸ್ಗಳಿಗೂ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ಥಿಯೇಟರ್ಗಳಿಗೆ ಜುಲೈ 5 ರಿಂದ ರಿಲೀಫ್ ಸಿಗುವುದು ಸ್ವಲ್ಪ ಅನುಮಾನವಿದೆ. ಒಂದೇ ಜಾಗದಲ್ಲಿ ಹೆಚ್ಚು ಸಮಯ ಇರುವ ಕಾರಣ ಜುಲೈ 5 ರ ನಂತರವೂ ಥಿಯೇಟರ್ಗೆ ಅನುಮತಿ ಸಿಗುವುದು ಅನುಮಾನವಿದೆ.
ಜುಲೈ 5ರ ನಂತರ ನೈಟ್ ಕರ್ಫ್ಯೂ ಮುಂದುವರಿಯಬಹುದು. ಸದ್ಯ ನೈಟ್ ಕರ್ಫ್ಯೂ ಸಂಜೆ 6 ಗಂಟೆಯಿಂದ ಜಾರಿಯಲ್ಲಿದೆ. ಆದರೆ ಜುಲೈ 5ರಿಂದ ಸಂಜೆ 7 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ. ವಿಕೇಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಯುತ್ತದೆ.
ಇದನ್ನೂ ಓದಿ
Petrol Price Today: ಒಂದು ದಿನದ ವಿರಾಮದ ಬಳಿಕ ಮತ್ತೆ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ!
ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ ಬೆನ್ನಲ್ಲೇ ಶುರುವಾಯ್ತು ಸಚಿವರಗಳ ಮಧ್ಯ ಸಮರ
(Unlock 3.0 is likely to take effect from July 5 in Karnataka)
Published On - 9:29 am, Tue, 29 June 21