ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಿಜೋರಿ ದೋಚಿದ ದುಷ್ಕರ್ಮಿಗಳು

ದುಷ್ಕರ್ಮಿಗಳು ದಂಪತಿಯ ಮೇಲೆ ಹಲ್ಲೆಗೈದು  ತಿಜೋರಿ ದೋಚಿ ಹೋಗಿದ್ದಾರೆ. ದಂಪತಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಿಜೋರಿ ದೋಚಿದ ದುಷ್ಕರ್ಮಿಗಳು
ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಿಜೋರಿ ದೋಚಿದ ದುಷ್ಕರ್ಮಿಗಳು
Updated By: ಸಾಧು ಶ್ರೀನಾಥ್​

Updated on: Aug 04, 2021 | 12:55 PM

ಬಾಗಲಕೋಟೆ: ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಹಾಗೂ ಅವರ ಪತ್ನಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ನಡೆದಿದೆ. 

ಗದ್ದನಕೇರಿ ಗ್ರಾಮದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ದೇವಿದಾಸ ಚಿಕ್ಕರಮನೆ ಹಾಗೂ ಪತ್ನಿ ಸ್ವಾತಿ ಮೇಲೆ ಹಲ್ಲೆ ನಡೆದಿದೆ. ದಂಪತಿಯ ತಲೆ ಮತ್ತು ಮೈ ಮೇಲೆ ರಾಡ್ ಹಾಗೂ ಮಚ್ಚಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮ್ಯಾನೇಜರ್ ಮತ್ತು ಅವರ ಪತ್ನಿ ರಕ್ತಸಿಕ್ತಗೊಂಡಿದ್ದಾರೆ. ಇಬ್ಬರಿಗೂ ತಲೆಗೆ ಗಂಭೀರವಾದ ಗಾಯಗಳಾಗಿವೆ.

ದುಷ್ಕರ್ಮಿಗಳು ದಂಪತಿಯ ಮೇಲೆ ಹಲ್ಲೆಗೈದು  ತಿಜೋರಿ ದೋಚಿ ಹೋಗಿದ್ದಾರೆ. ದಂಪತಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

(karnataka vikas grameena bank manager devidas and wife attacked by miscreants in bagalkot taluk )