ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು.. ಜಾತ್ರೆಯಲ್ಲಿ ಮಹಿಳೆಯರಿಗೆ ಬಳೆ ಕೊಡಿಸಿದ ಮಾಜಿ ಡಿಸಿಎಂ ಪರಮೇಶ್ವರ್
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಮಾರಮ್ಮ ಜಾತ್ರೆಯಲ್ಲಿ ಇಂದು ಬಹಳಷ್ಟು ಮಹಿಳೆಯರು ಬಂದಿದ್ದರು. ಇನ್ನು, ತುಂಬಾಡಿ ಜಾತ್ರೆಗೆ ಶಾಸಕ ಪರಮೇಶ್ವರ್ ಸಹ ತೆರಳಿದ್ದರು. ಆ ಸಂದರ್ಭದಲ್ಲಿ, ಜಾತ್ರೆಯಲ್ಲಿ ನೆರೆದಿದ್ದ ಮಹಿಳೆಯರಿಗೆ ಪರಮೇಶ್ವರ್ ಬಳೆ ಕೊಡಿಸಿದರು. ಬಳೆ ಕೊಡಿಸಿದ ಹಿನ್ನೆಲೆ ಮಹಿಳೆಯರು ಪುಲ್ ಖುಷ್ ಆದರು.
ತುಮಕೂರು: ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಈಗ ಏನು ಮಾಡುತ್ತಿದ್ದಾರೆ ಎಂದು ಕೇಳಿದವರಿಗೆ ಅದಕ್ಕೊಂದು ಚೆಂದನೆಯ ನಿದರ್ಶನ ಸಿಕ್ಕಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಮಾರಮ್ಮ ಜಾತ್ರೆ ಇಂದು ಸರಳವಾಗಿ ಆಚರಿಸಲ್ಪಟ್ಟಿತು. ಆ ವೇಳೆ ಜಾತ್ರೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಅವರು ಮಹಿಳೆಯರಿಗೆ ಬಳೆ ಕೊಡಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಮಾರಮ್ಮ ಜಾತ್ರೆಯಲ್ಲಿ ಇಂದು ಬಹಳಷ್ಟು ಮಹಿಳೆಯರು ಬಂದಿದ್ದರು. ಇನ್ನು, ತುಂಬಾಡಿ ಜಾತ್ರೆಗೆ ಶಾಸಕ ಪರಮೇಶ್ವರ್ ಸಹ ತೆರಳಿದ್ದರು. ಆ ಸಂದರ್ಭದಲ್ಲಿ, ಜಾತ್ರೆಯಲ್ಲಿ ನೆರೆದಿದ್ದ ಮಹಿಳೆಯರಿಗೆ ಪರಮೇಶ್ವರ್ ಬಳೆ ಕೊಡಿಸಿದರು. ಬಳೆ ಕೊಡಿಸಿದ ಹಿನ್ನೆಲೆ ಮಹಿಳೆಯರು ಪುಲ್ ಖುಷ್ ಆದರು.
ಈ ಸಂದರ್ಭದಲ್ಲಿ ನಲ್ಮೆಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ರಚಿಸಿರುವ ಒಂದು ಜನಪ್ರಿಯ ಕವನ ಹೀಗಿದೆ:
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ ||
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೆ ತೌರಿನಲಿ ತಾಯಿ ನಗುತಿಹಳು ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ ಅಮ್ಮನಿಗೆ ಬಳೆಯಾ ತೊಡಿಸಿದರು ಅಂದು ಮಂಗಳವಾರ ನವಿಲೂರ ಕೇರಿಯಲಿ ಓಲಗದ ಸದ್ದು ತುಂಬಿತ್ತು ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ ಅಂಗಳದ ತುಂಬಾ ಜನವಿತ್ತು ||
ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ ಸೆರಗಿನಲಿ ಕಣ್ಣೀರನೊರೆಸಿ ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ ದೀಪದಲಿ ಬಿರುಗಣ್ಣನಿರಿಸಿ ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ ಹೊಸ ಸೀರೆ ರತ್ನದಾಭಾರಣ ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ ನಿಮಗಿಲ್ಲ ಒಂದು ಹನಿ ಕರುಣ ||
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಿಟ್ಟು ಕುದಿಯ ಬಾರದು ನನ್ನ ದೊರೆಯೆ ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು ಒಣಗಬಾರದು ಒಡಲ ಚಿಲುಮೆ ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು ನಿಮಗೇತಕೀ ಕಲ್ಲು ಮನಸು ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು ಅಮ್ಮನಿಗೆ ನಿಮ್ಮದೇ ಕನಸು… ಅಮ್ಮನಿಗೆ ನಿಮ್ಮದೇ ಕನಸು
(Ex dcm congress mla dr g parameshwara gets bangles for women in tumbadi village fair in koratagere taluk)