AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather: ಇಂದಿನಿಂದ ಒಂದು ವಾರ ಕರ್ನಾಟಕದಾದ್ಯಂತ ಸುರಿಯಲಿದೆ ಭಾರಿ ಮಳೆ

ಇಂದಿನಿಂದ ಕರ್ನಾಟಕದಾದ್ಯಂತ ಹೆಚ್ಚಿನ ಮಲೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದೆರಡು ವಾರಗಳಿಂದ ಸಾಕಷ್ಟು ಕಡೆ ಮಳೆಯಾಗುತ್ತಿದೆ. ಚಂಡಮಾರುತ ಪರಿಣಾಮ ಇಂದಿನಿಂದ ಕರ್ನಾಟಕದಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಮಳೆಯ ಮುನ್ಸೂಚನೆ ನೀಡಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

Karnataka Weather: ಇಂದಿನಿಂದ ಒಂದು ವಾರ ಕರ್ನಾಟಕದಾದ್ಯಂತ ಸುರಿಯಲಿದೆ ಭಾರಿ ಮಳೆ
ಮಳೆ Image Credit source: PTI
Follow us
ನಯನಾ ರಾಜೀವ್
|

Updated on:Apr 27, 2025 | 7:21 AM

ಬೆಂಗಳೂರು, ಏಪ್ರಿಲ್ 27: ಚಂಡಮಾರುತ ಪರಿಣಾಮ ಇಂದಿನಿಂದ ಕರ್ನಾಟಕದಾದ್ಯಂತ ಮಳೆ(Rain)ಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಮಳೆಯ ಮುನ್ಸೂಚನೆ ನೀಡಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

ರಬಕವಿ, ಸಿಂಧನೂರು, ಚಿಂಚೋಳಿ, ಹಿರಿಯೂರು, ಬೆಳಗಾವಿ, ಜೇವರಗಿ, ಬಾದಾಮಿ, ಹುಬ್ಬಳ್ಳಿ, ಕಲಘಟಗಿ, ಮಸ್ಕಿ, ಕಿಬ್ಬನಹಳ್ಳಿ, ತಾಳಿಕೋಟೆ, ಖಜೂರಿ, ನರಗುಂದ, ಕೆಂಭಾವಿ, ಜಾಲಹಳ್ಳಿ, ಹುನಗುಂದ, ಇಳಕಲ್, ರಾಯ್​ಭಾಗ್, ಚಿತ್ರದುರ್ಗ, ಸಿದ್ದಾಪುರ, ಬೈಲಹೊಂಗಲ, ಮುದಗಲ್, ಕುಷ್ಟಗಿ, ಚಿತ್ತಾಪುರ, ಅಣ್ಣಿಗೆರೆ, ಆಲಮಟ್ಟಿ, ಶಿವಮೊಗ್ಗ, ಜಯಪುರ, ಕಳಸ, ತ್ಯಾಗರ್ತಿ, ಕಮ್ಮರಡಿ, ಶೃಂಗೇರಿ, ಗುಬ್ಬಿಯಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನ ಎಚ್​ಎಎಲ್​ನಲ್ಲಿ34.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ. 23.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 35.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ, ಸಂಜೆ ಭಾರಿ ಮಳೆ ಸಾಧ್ಯತೆ
Image
ಬಿಸಿಲು, ಮಳೆ, ಉರಿ ಸೆಕೆ: ಬೆಂಗಳೂರಿನ ವಾತಾವರಣಕ್ಕೆ ಜನ ಕಂಗಾಲು!
Image
ಬೆಂಗಳೂರು ಸೇರಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ
Image
ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ

ಹೊನ್ನಾವರದಲ್ಲಿ 34.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 26.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 26.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಏಪ್ರಿಲ್ 27ರ ಬಳಿಕ ಭಾರಿ ಮಳೆ

ಬೆಳಗಾವಿಯಲ್ಲಿ 35.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್​ನಲ್ಲಿ 40.4ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 39.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 37.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಧಾರವಾಡದಲ್ಲಿ 35.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 35.6ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 36.3ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 25.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 am, Sun, 27 April 25

ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್