ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಇಂದು (ಆಗಸ್ಟ್ 1, ಸೋಮವಾರ) ನಸುಕಿನಲ್ಲಿ ಚದುರಿದಂತೆ (Karnataka Rains) ಮಳೆಯಾಯಿತು. ಆದರೆ ಒಟ್ಟಾರೆ ಮಳೆ ಅಬ್ಬರ ತಗ್ಗಿದೆ. ನಾಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ ವ್ಯಾಪಕವಾಗಿ ಸುರಿಯಬಹುದು ಎಂದು ಹವಾಮಾನ ಇಲಾಖೆ (Indian Meteorological Department) ಮುನ್ಸೂಚನೆಯಲ್ಲಿ ತಿಳಿಸಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 3 ಮತ್ತು 4ರಂದು, ಉತ್ತರ ಒಳನಾಡಿನಲ್ಲಿ ಆಗಸ್ಟ್ 2ರಿಂದ 4ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ನಾಳೆಗೆ (ಆಗಸ್ಟ್ 2) ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾಡಿದ್ದಿಗೆ (ಆಗಸ್ಟ್ 3) ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 4ರವರೆಗೆ ದಕ್ಷಿಣ ಭಾರತದ ವಿವಿಧೆಡೆ ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಿಗೆ ಮಳೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Isolated very heavy rainfall likely over Coastal Karnataka on 03rd & 04th August; North Interior Karnataka during 02nd-04th August; Kerala & Mahe during 01st-04th August; South Interior Karnataka on 04th August and Tamil Nadu, Puducherry & Karaikal during 31st July-04th August.
— India Meteorological Department (@Indiametdept) July 31, 2022
ಗುಡುಗು, ಮಿಂಚು, ಸಿಡಿಲಿನೊಂದಿಗೆ ಆಗಸ್ಟ್ 3 ಮತ್ತು 4ರಂದು ತೆಲಂಗಾಣ ರಾಜ್ಯಾದ್ಯಂತ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಆಸ್ಟ್ 2ರಿಂದ 4ರವರೆಗೆ, ಕೇರಳದಲ್ಲಿ ಆಗಸ್ಟ್ 4ನೇ ತಾರೀಖಿನವರೆಗೆ ವ್ಯಾಪಕ ಮಳೆಯಾಗಲಿದೆ. ಕೇರಳದ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಿಗೆ ಆಗಸ್ಟ್ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ ಜಿಲ್ಲೆಗಳಿಗೆ ಆಗಸ್ಟ್ 2ರಂದು ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಉತ್ತರಾಖಂಡದ ಡೆಹ್ರಾಡೂನ್, ತೆಹ್ರಿ ಗಡ್ವಾಲ್, ನೈನಿತಾಲ್ ಮತ್ತು ಚಂಪಾವತ್ ಜಿಲ್ಲೆಗಳಿಗೆ ಆಗಸ್ಟ್ 1 ಮತ್ತು 2ನೇ ತಾರೀಖಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಫಲಿಸಿದ ಪ್ರಾರ್ಥನೆ: ಕೋಟೆನಾಡಿನಲ್ಲಿ ಮಳೆ
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆ ಆರಂಭವಾಗಿದೆ. ಮಳೆಗಾಗಿ ವಿವಿಧ ಗ್ರಾಮಗಳಲ್ಲಿ ರೈತರು ಪೂಜೆ, ಪ್ರಾರ್ಥನೆ ಆರಂಭಿಸಿದ್ದರು. ನಿರಂತರ ಮಳೆಯಿಂದಾಗಿ ದುರ್ಗದ ರೈತರಲ್ಲಿ ಸಂತಸದ ಮುಗುಳ್ನಗೆ ಮೂಡಿದೆ.
Published On - 7:38 am, Mon, 1 August 22