ಯುವಕ ಫಾಜಿಲ್ ಹತ್ಯೆ ಪ್ರಕರಣ: ಪತ್ತೆಯಾಗಿದ್ದ ಕಾರು ಸ್ಥಳಾಂತರ; ಎಫ್ಎಸ್ಎಲ್ ತಜ್ಞರಿಂದ ಇಂದು ಕಾರು ತಪಾಸಣೆ
ಫಾಝಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು ಸಿಕ್ಕಿದ್ದು, ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
ಮಂಗಳೂರು: ಸುರತ್ಕಲ್ನಲ್ಲಿ ಯುವಕ ಫಾಜಿಲ್ (Fazil) ಹತ್ಯೆ ಪ್ರಕರಣ ಸಂಬಂಧ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂಜರಕಟ್ಟೆ ಕಡಕುಂಜ ಬಳಿ ಪತ್ತೆಯಾಗಿದ್ದ ಕಾರು ಸ್ಥಳಾಂತರ ಮಾಡಲಾಗಿದೆ. ಫಾಜಿಲ್ ಹಂತಕರ ಬಗ್ಗೆ ಸುಳಿವು ಹೊಂದಿರುವ ಇಯಾನ್ ಕಾರು, 2 ದಿನಗಳಿಂದ ನಿರ್ಜನ ಪ್ರದೇಶದಲ್ಲಿ ಅನಾಥವಾಗಿ ನಿಂತಿತ್ತು. ಸುರತ್ಕಲ್ ಠಾಣೆ ಪೊಲೀಸರಿಂದ ಪಂಚನಾಮೆ ನಂತರ ಟೋಯಿಂಗ್ ವಾಹನದ ಮೂಲಕ ಪೊಲೀಸರು ಕಾರನ್ನು ಸ್ಥಳಾಂತರಿಸಿದ್ದಾರೆ. ಎಫ್ಎಸ್ಎಲ್ (FSL) ತಜ್ಞರನ್ನು ಠಾಣೆಗೆ ಕರೆಸಿ ಪೊಲೀಸರು ಪರಿಶೀಲನೆ ನಡೆಸಲಿದ್ದು, ತಜ್ಞರು ಸ್ಟೇರಿಂಗ್, ಹ್ಯಾಂಡ್ಬ್ರೇಕ್ ಮೇಲಿನ ಬೆರಳಚ್ಚು ಪತ್ತೆಹಚ್ಚಲಿದ್ದಾರೆ. ಇಯಾನ್ ಕಾರಿನ ಡಿಕ್ಕಿಯಲ್ಲಿ ಮಾರಕಾಸ್ತ್ರಗಳು ಇರುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಫಾಜಿಲ್ ಹತ್ಯೆ ಕೇಸ್ನಲ್ಲಿ ಮಹತ್ವ FSL ವರದಿ ಪ್ರಮುಖ ಪಾತ್ರ ವಹಿಸಲಿದೆ.
ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಲಭ್ಯ
ಇನ್ನೂ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು ಸಿಕ್ಕಿದ್ದು, ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರಿಂದ ಕೃತ್ಯ ನಡೆದಿರುವುದಾಗಿ ಮಂಗಳೂರು ಪೊಲೀಸರಿಗೆ ಸುಳಿವು ಲಭ್ಯವಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಮಾಹಿತಿ ಸಿಕ್ಕಿದೆ. ಕೃತ್ಯ ನಡೆಸುವ ಸಂದರ್ಭ ಅಮಿತ್ ಎಂಬಾತ ಕಾರು ಚಾಲಕನಾಗಿದ್ದ.
ಇದೇ ನಾಲ್ವರ ಆರೋಪಿಗಳು ಕೊಲೆಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಹಾಸ್ ಮೇಲಿದೆ ಎಕ್ಕಾರಿನಲ್ಲಿ ನಡೆದ ಕೊಲೆ ಹಾಗೂ ಎರಡು ಕೊಲೆ ಯತ್ನದ ಕೇಸ್ ಇದೆ. ಸದ್ಯ ಈ ನಾಲ್ವರಿಂದಲೇ ಫಾಝಿಲ್ ಹತ್ಯೆ ನಡೆದಿರುವ ಶಂಕೆ ಉಂಟಾಗಿದೆ.