Chikkaballapur News: ಸಿಕ್ಕಸಿಕ್ಕವರಿಗೆ ಲಾಂಗ್ ಬೀಸಿದ್ದ ರೌಡಿಶೀಟರ್ ಅರ್ಜುನ್ ಬಂಧನ
ಬೈಕ್ನಲ್ಲಿ ಚಲಿಸುತ್ತಾ ನಿನ್ನೆ ರಾತ್ರಿ ಲಾಂಗ್ ಬಿಸಿದ್ದು, ಅರ್ಜುನ್ ಲಾಂಗ್ ಏಟಿಗೆ ಮೂವರು ಮಹಿಳೆಯರು, ನಾಲ್ಕು ಜನ ಪುರುಷರು ಸೇರಿ ಒಟ್ಟು 7 ಜನ ಗಾಯಗೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬಿಸಿದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರಿಂದ ಆರೋಪಿ ಅರ್ಜುನ್ ಎಂಬಾತನನ್ನು ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ದೇವಸ್ಥಾನದ ಬಳಿ ಬಂಧಿಸಲಾಗಿದೆ. ಜಿಲ್ಲೆಯ ಬಾಪೂಜಿ ನಗರದ ನಿವಾಸಿಯಾಗಿರುವ ಅರ್ಜುನ್, ಚಿಕ್ಕಬಳ್ಳಾಪುರ ನಗರ ಠಾಣೆ ರೌಡಿ ಶೀಟರ್ ಕೂಡ ಹೌದು. ಬೈಕ್ನಲ್ಲಿ ಚಲಿಸುತ್ತಾ ನಿನ್ನೆ ರಾತ್ರಿ ಲಾಂಗ್ ಬಿಸಿದ್ದು, ಅರ್ಜುನ್ ಲಾಂಗ್ ಏಟಿಗೆ ಮೂವರು ಮಹಿಳೆಯರು, ನಾಲ್ಕು ಜನ ಪುರುಷರು ಸೇರಿ ಒಟ್ಟು 7 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಲ್ಲಿ ಮುನಿರೆಡ್ಡಿ ಎನ್ನುವವರ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಬಳಿ ಚಾಕು, ಮಚ್ಚು, ಲಾಂಗ್ಗಳು ಸೇರಿ ಬೈಕ್ ಜಪ್ತಿ ಮಾಡಲಾಗಿದೆ. ಅರ್ಜುನ್ ಕೃತ್ಯದಿಂದ ನಗರದ ಜನತೆ ಭಯಭೀತರಾಗಿದ್ದರು.
ಇದನ್ನೂ ಓದಿ: Crime News: ಡ್ರಗ್ಸ್ನೊಂದಿಗೆ ಯುವತಿ ಜೊತೆ ಲಾಡ್ಜ್ನಲ್ಲಿದ್ದ ನಾಲ್ವರ ಬಂಧನ..!
ಪತ್ನಿಯ ಕತ್ತು ಸೀಳಿ ಹತ್ಯೆಗೈದ ಪಾಪಿ ಪತಿ: ಬಂಧನ
ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಕುತ್ತಿಗೆ ಸೀಳಿ ಪತಿಯೇ ಹತ್ಯೆಗೈದ (murder) ಪ್ರಕರಣ ಸಂಬಂಧ ಹಂತಕ ಪತಿ ಜಗದೀಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹಂತಕ ಪತಿ ಊರೂರು ತಿರುಗುತ್ತಿದ್ದ. ಜಿಲ್ಲೆಯ ಬೇಲೂರು ಪಟ್ಟಣದ ಪಂಪ್ ಹೌಸ್ ರಸ್ತೆಯಲ್ಲಿ ಮಹಿಳೆ ಅಶ್ವಿನಿ(36) ಕೊಲೆಯಾಗಿತ್ತು. ಜುಲೈ 20ರ ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಲೆಯಾಗಿರೊ ವಿಚಾರ ಬೆಳಕಿಗೆ ಬಂದಿದೆ. ಮದ್ಯಾಹ್ನ ಊಟಕ್ಕೆಂದು ತಾನೇ ಪತ್ನಿಯನ್ನು ಕರೆತಂದು ಮನೆಯಲ್ಲಿ ಇರಿದು ಕೊಂದು ಪಾಪಿ ಪತಿ ಎಸ್ಕೇಪ್ ಆಗಿದ್ದ. ಕೊಲೆ ನಡೆದ ಹತ್ತು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಕಾಲುಜಾರಿ ಬಿದ್ದು ಯುವತಿ ನೀರುಪಾಲು
ಕಾರವಾರ: ಶಿವಗಂಗಾ ಪಾಲ್ಸ್ಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಕಾಲುಜಾರಿ ಬಿದ್ದು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಪಾಲ್ಸ್ನಲ್ಲಿ ನಡೆದಿದೆ. ರಾಗಿ ಹೊಸಳ್ಳಿಯ ಕಸಗೆ ಗ್ರಾಮದ ತ್ರಿವೇಣಿ ಅಂಬಿಗ (20) ನೀರುಪಾಲಾದ ಯುವತಿ. ಆರು ಜನ ಸ್ನೇಹಿತರೊಂದಿಗೆ ಶಿವಗಂಗಾ ಪಾಲ್ಸ್ಗೆ ಯುವತಿ ಪ್ರವಾಸಕ್ಕೆ ತೆರಳಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಶವಕ್ಕಾಗಿ ಶೋಧ ನಡೆದಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.