AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಟಿ ಮಹಿಳೆಯರೇ ಇವರ ಟಾರ್ಗೆಟ್: ಟ್ರಾಪ್ ಮಾಡಿ ವಿಕೃತ ಮೆರೆದು ದೋಚುತಿದ್ದ ಖತರ್ನಾಕ್​ ಗ್ಯಾಂಗ್ ಅರೆಸ್ಟ್

ಇದೇ ರೀತಿ ಎಂಟು ಮಹಿಳೆಯರಿಗೆ ಹಿಂಸೆ ನೀಡಿ ರಾಬರಿ ಮಾಡಿರುವುದು ಬಯಲಿಗೆಳೆಯಲಾಗಿದೆ. ಎಂಟು ಮಹಿಳೆಯರು ಹೆದರಿ ಪೊಲೀಸ್ ಠಾಣೆಗೆ ದೂರನ್ನೆ ನೀಡಿರಲಿಲ್ಲಾ.

ಒಂಟಿ ಮಹಿಳೆಯರೇ ಇವರ ಟಾರ್ಗೆಟ್: ಟ್ರಾಪ್ ಮಾಡಿ ವಿಕೃತ ಮೆರೆದು ದೋಚುತಿದ್ದ ಖತರ್ನಾಕ್​ ಗ್ಯಾಂಗ್ ಅರೆಸ್ಟ್
ಬಂಧಿತ ಆರೋಪಿಗಳು
TV9 Web
| Edited By: |

Updated on: Jul 31, 2022 | 2:25 PM

Share

ಬೆಂಗಳೂರು: ಒಂಟಿ ಮಹಿಳೆಯ ಟಾರ್ಗೆಟ್ (Target) ಮಾಡಿ ಟ್ರಾಪ್ ಮಾಡಿ ವಿಕೃತ ಮೆರೆದು ದೋಚುತಿದ್ದ ಗ್ಯಾಂಗ್ (gang) ​ನನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ. ಮಂಗಳ, ರವಿ, ಶಿವಕುಮಾರ್, ಶ್ರೀನಿವಾಸ್ ಬಂಧಿತ ಆರೋಪಿಗಳು. ಮಂಗಳ ಮತ್ತು ರವಿ ಗಂಡ ಹೆಂಡತಿಯರು. ಡೈವರ್ಸ್ ಆಗಿರುವ ಹಾಗೂ ಗಂಡ ಸತ್ತು ಒಂಟಿಯಾಗಿರುವ ಮಹಿಳೆಯ ಗುರುತು ಮಾಡುತ್ತಿದ್ದ ತಂಡ. ನಂತರ ಮಹಿಳೆ ಓರ್ವಳು ಟಾರ್ಗೆಟ್ ಮಾಡಿದ್ದವರ ಗೆಳೆತನ ಸಂಪಾದನೆ ಮಾಡ್ತಿದ್ಲು. ಬಳಿಕ ಫೋನ್ ಮೂಲಕ ಮಾತನಾಡ್ತಿದ್ರು. ಬನ್ನಿ ಮೀಟ್ ಮಾಡುವ ಎಂದು ಕರೆಯುತ್ತಿದ್ದರು. ಮೀಟ್ ಮಾಡಲು ಬಂದ ನಂತರ ಮಹಿಳೆಯರನ್ನು ಕಾರಿನ ಒಳಗೆ ಬರಲು ತಿಳಿಸುತಿದ್ರು. ಬಳಿಕ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದರು. ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶದಕ್ಕೆ ಗ್ಯಾಂಗ್ ಕರೆದುಕೊಂಡು ಹೋಗುತ್ತಿದ್ದರು.

ಇದನ್ನೂ ಓದಿ; ನಾನು ನಿಮ್ಮ ವಿದ್ಯಾರ್ಥಿ, ತಪ್ಪಾಯ್ತು ಬಿಟ್ಟು ಬಿಡಿ ಟೀಚರ್; ಶಿಕ್ಷಕಿ ಮನೆಗೆ ಕನ್ನ ಹಾಕೋಕೆ ಯತ್ನಿಸಿದ ವಿದ್ಯಾರ್ಥಿ ಅಂದರ್

ಬಹುತೇಕ ಬಾರಿ ತಾವರೆಕೆರೆ ಕಡೆಯ ಅರಣ್ಯ ಪ್ರದೇಶದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಿಳೆಗೆ ಬಟ್ಟೆ ಬಿಚ್ಚಿಲು ಹೇಳುತ್ತಿದ್ದರು. ಒಪ್ಪದೆ ಇದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತಿದ್ರು. ನಗ್ನ ವಿಡಿಯೋ ಮಾಡಿ ಮೊಬೈಲ್ ಇಟ್ಟುಕೊಳ್ತಿದ್ದ ಗ್ಯಾಂಗ್, ನಂತರ ಈ ವಿಡಿಯೋ ಹೊರಗೆ ಬರಬಾರ್ದು ಅಂದರೆ ಹಣ ನೀಡುವಂತೆ ಕೇಳುತ್ತಿದ್ದರು. ಮಹಾಲಕ್ಷ್ಮಿ ಲೇಔಟ್​ನ ಮಹಿಳೆ ಓರ್ವರಿಂದ ಒಂದು ಚಿನ್ನದ ಚೈನ್, ಕಿವಿ ಓಲೆ ಉಂಗುರ ಕಿತ್ತುಕೊಂಡಿದ್ದಾರೆ. ಕೊನೆಗೆ ಫೋನ್ ಫೇ ಮೂಲಕ 84 ಸಾವಿರ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಮತ್ತೆ ಹಣ ಬೇಕು ಎಂದು ಎಟಿಎಂ ಕಾರ್ಡ್ ಮೂಲಕ ನಲವತ್ತು ಸಾವಿರ ಡ್ರಾ ಮಾಡಿಸಿದ್ದಾರೆ.

ಇದನ್ನೂ ಓದಿ: ಲಾಡ್ಜ್​​ನಲ್ಲಿ ಚಿನ್ನಾಭರಣ ದೋಚಿದ್ದ ಇಬ್ಬರು ಕಳ್ಳರು ಅರೆಸ್ಟ್​​; 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ನಂತರ ಮೊಬೈಲ್ ಸಿಮ್ ಕಾರ್ಡ್ ಕಿತ್ತುಕೊಂಡು ನಡು ರಸ್ತೆಯಲ್ಲಿ ಬಿಟ್ಟುಹೋಗಿದ್ದರು. ಘಟನೆ ನಂತರ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಮಹಿಳೆ ದೂರಿನ ಅನ್ವಯ ಕೇಸ್ ದಾಖಲು ಮಾಡಿ ನಾಲ್ವರು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಎಂಟು ಮಹಿಳೆಯರಿಗೆ ಹಿಂಸೆ ನೀಡಿ ರಾಬರಿ ಮಾಡಿರುವುದು ಬಯಲಿಗೆಳೆಯಲಾಗಿದೆ. ಎಂಟು ಮಹಿಳೆಯರು ಹೆದರಿ ಪೊಲೀಸ್ ಠಾಣೆಗೆ ದೂರನ್ನೆ ನೀಡಿರಲಿಲ್ಲಾ. ಸದ್ಯ ನೊಂದ ಮಹಿಳೆಯರಿಗೆ ಘಟನೆ ನಡೆದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಮನವಿ ಮಾಡಲಾಗಿದೆ.

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್