ಲಾಡ್ಜ್​​ನಲ್ಲಿ ಚಿನ್ನಾಭರಣ ದೋಚಿದ್ದ ಇಬ್ಬರು ಕಳ್ಳರು ಅರೆಸ್ಟ್​​; 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಶಾರ್ಟ್ ಸರ್ಕ್ಯೂಟ್​ನಿಂದ ವೃದ್ಧ ಸಾವನ್ನಪ್ಪಿರುವಂತಹ ಘಟನೆ ಶಿವಮೂಕಾಂಬಿಕ ನಗರದಲ್ಲಿ ನಡೆದಿದೆ. ವೀರಣ್ಣ(75) ಮೃತ ದುರ್ದೈವಿ.

ಲಾಡ್ಜ್​​ನಲ್ಲಿ ಚಿನ್ನಾಭರಣ ದೋಚಿದ್ದ ಇಬ್ಬರು ಕಳ್ಳರು ಅರೆಸ್ಟ್​​; 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ಲಾಡ್ಜ್ ರೂಂನಲ್ಲಿ ಚಿನ್ನಾಭರಣ, ಬೆಳ್ಳಿ ನಗದು ಹಣ ಕಳುವು ಮಾಡಿದ್ದ ಕಳ್ಳರ ಬಂಧನ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 31, 2022 | 9:19 AM

ಮೈಸೂರು: ಲಾಡ್ಜ್​​ನಲ್ಲಿ ಚಿನ್ನಾಭರಣ, ಬೆಳ್ಳಿ, ನಗದು ದೋಚಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 18ರಂದು ಲಕ್ಷ್ಮೀ ವಿಲಾಸ ರಸ್ತೆಯ ರಾಜ್ ಮಹಲ್ ಡಿಲೆಕ್ಸ್ ಲಾಡ್‌ನ ರೂಂನಲ್ಲಿ ಚಿನ್ನಾಭರಣ, ನಗದು ದೋಚಿದ್ದರು. ಬಂಧಿತರಿಂದ 30,18,000 ಸಾವಿರ ಮೌಲ್ಯದ ಚಿನ್ನಾಭರಣ, 350 ಗ್ರಾಂ ಬೆಳ್ಳಿ ಪೂಜಾ ಬಟ್ಟಲು, 40 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ 1 ಕಾರು ಮತ್ತು 2 ಮೊಬೈಲ್ ಜಪ್ತಿ ಮಾಡಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: 18ನೇ ವಯಸ್ಸಿನಲ್ಲಿ ಲವ್, 19ನೇ ವಯಸ್ಸಿಗೆ ವಿವಾಹ..ಇದೀಗ ದುರಂತ ಅಂತ್ಯ..!

ಶಾರ್ಟ್ ಸರ್ಕ್ಯೂಟ್​ನಿಂದ ವೃದ್ಧ ಸಾವು

ತುಮಕೂರು: ಶಾರ್ಟ್ ಸರ್ಕ್ಯೂಟ್​ನಿಂದ ವೃದ್ಧ ಸಾವನ್ನಪ್ಪಿರುವಂತಹ ಘಟನೆ ಶಿವಮೂಕಾಂಬಿಕ ನಗರದಲ್ಲಿ ನಡೆದಿದೆ. ವೀರಣ್ಣ(75) ಮೃತ ದುರ್ದೈವಿ. ತಡರಾತ್ರಿ ಮಳೆ ಸುರಿದಿದ್ದು, ನೀರು ಮನೆಗೆ ನುಗ್ಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗುತ್ತಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣದಿಂದಲೇ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ; ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕುಟುಂಬಸ್ಥರು

ತೀರ್ಥ ಗ್ರಾಮದ ಬಳಿ ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆ

ಕಲಬುರಗಿ: ಹಳ್ಳದಲ್ಲಿ ಮಹಿಳೆ ಓರ್ವ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ. ಶ್ರೀದೇವಿ ಪೂಜಾರಿ(42) ಹಳ್ಳದಲ್ಲಿ ಕೊಚ್ಚಿಕೊಂಡುಹೋದ ಮಹಿಳೆ. ನಿನ್ನೆ ಸಂಜೆ ಹೊಲದಿಂದ ಮನೆಗೆ ಬರುವಾಗ ದುರ್ಘಟನೆ ಸಂಭವಿಸಿದೆ. ಶ್ರೀದೇವಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ನಿನ್ನೆ ಸುರಿದ ಭಾರಿ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.

ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದ 9 ಜನರ ಬಂಧನ.

ಕೊಪ್ಪಳ: ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದ 9 ಜನರನ್ನು ಗಂಗಾವತಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 62 ಸಿಲಿಂಡರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಚೇತನಕುಮಾರ್, ಸೋಹೆಲ್, ಸಂಗಪ್ಪ, ರಾಜಧರಖಾನ್, ಶಶಿಧರ್, ದೇವಪುತ್ರ, ಕಾಸೀಂಅಲಿ ಸೇರಿದಂತೆ ಇಬ್ಬರ ಬಾಲಾರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳು ಗಂಗಾವತಿ ನಗರದ ವಿವಿಧ ವಾರ್ಡ್ಗಳ ನಿವಾಸಿಗಳಾಗಿದ್ದು, ಅಂಗನವಾಡಿ, ಶಾಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದರು. ಗ್ಯಾಸ್‌ ಕಂಪನಿಗೂ ನುಗ್ಗಿ ಖದೀಮರು ಕಳ್ಳತನ ಮಾಡುತ್ತಿದ್ದರು. ಡಿವೈಎಸ್ಪಿ ಆರ್.ಎಸ್ ಉಜ್ಜಿನಕೊಪ್ಪ ‌ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.

Published On - 9:14 am, Sun, 31 July 22