AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: 18ನೇ ವಯಸ್ಸಿನಲ್ಲಿ ಲವ್, 19ನೇ ವಯಸ್ಸಿಗೆ ವಿವಾಹ..ಇದೀಗ ದುರಂತ ಅಂತ್ಯ..!

Crime News In Kannada: ಪಿಯುಸಿನಲ್ಲಿ ಓದುತ್ತಿದ್ದಾಗ ಭಾಗ್ಯ ಕೋಯಿಕ್ಕೋಡ್​ನ ಎಲತ್ತೂರಿನ ನಿವಾಸಿ ಅನಂತು ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಸಂದರ್ಭದಲ್ಲಿ ಅಂದರೆ, 2 ವರ್ಷಗಳ ಹಿಂದೆ ಭಾಗ್ಯಳನ್ನು ಆಕೆಯ ಪ್ರಿಯಕರ ಅಪಹರಿಸಿದ್ದ.

Crime News: 18ನೇ ವಯಸ್ಸಿನಲ್ಲಿ ಲವ್, 19ನೇ ವಯಸ್ಸಿಗೆ ವಿವಾಹ..ಇದೀಗ ದುರಂತ ಅಂತ್ಯ..!
bhagya ananthu
TV9 Web
| Edited By: |

Updated on: Jul 30, 2022 | 6:44 PM

Share

Crime News In Kannada: ಚೆನ್ನಾಗಿ ಓದಬೇಕಿದ್ದ ಕಾಲದಲ್ಲಿ ಆಕೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದಳು…ಇನ್ನೇನು ಬದುಕು ಕಟ್ಟಿಕೊಳ್ಳಬೇಕಾದ ಸಮಯದಲ್ಲಿ ತಾಳಿಗೆ ಕೊರೊಳೊಡ್ಡಿದ್ದಳು…ಇದಾಗಿ ಕೇವಲ 6 ತಿಂಗಳಲ್ಲೇ ಇಹಲೋಕ ತ್ಯಜಿಸಿದ್ದಾಳೆ..ಅದು ಕೂಡ ಆತ್ಮಹತ್ಯೆ ಮೂಲಕ…ಹೆತ್ತ ಕರಳು ಸಂಕಟ ಪಡಲು ಇದಕ್ಕಿಂತ ದೊಡ್ಡ ಕಾರಣ ಬೇಕಾ?…ಹೌದು, ಕೇವಲ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಕೇರಳದ ಕೋಯಿಕ್ಕೋಡ್​ನ 19 ವರ್ಷದ ಭಾಗ್ಯ ಎನ್ನುವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಚ್ಚರಿ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಭಾಗ್ಯ ಗರ್ಭಿಣಿಯಾಗಿದ್ದಳು. ಇದಾಗ್ಯೂ ಆಕೆ ಯಾಕಾಗಿ ಸಾವಿಗೆ ಶರಣಗಾಗಿದ್ದಾಳೆ ಎಂಬುದೇ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಿಯುಸಿನಲ್ಲಿ ಓದುತ್ತಿದ್ದಾಗ ಭಾಗ್ಯ ಕೋಯಿಕ್ಕೋಡ್​ನ ಎಲತ್ತೂರಿನ ನಿವಾಸಿ ಅನಂತು ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಸಂದರ್ಭದಲ್ಲಿ ಅಂದರೆ, 2 ವರ್ಷಗಳ ಹಿಂದೆ ಭಾಗ್ಯಳನ್ನು ಆಕೆಯ ಪ್ರಿಯಕರ ಅಪಹರಿಸಿದ್ದ. ಈ ಪ್ರಕರಣದಲ್ಲಿ ಪೊಕ್ಸೊ ಕಾಯ್ದೆ ಅಡಿಯಲ್ಲಿ ಅನಂತುನನ್ನು ಬಂಧಿಸಲಾಗಿತ್ತು. ಆದರೆ ಆ ಬಳಿಕ ಇಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ಮನೆಯವರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಿದ್ದರು. ಅದರಂತೆ ಭಾಗ್ಯ ಮತ್ತು ಅನಂತು ಹೊಸ ಜೀವನ ಆರಂಭಿಸಿದ್ದರು. ಆದರೆ ಮದುವೆಯಾಗಿ ಕೇವಲ 6 ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದು ಕೂಡ ಗರ್ಭಿಣಿಯಾಗಿದ್ದ ವೇಳೆ ಎಂಬುದೇ ಅಚ್ಚರಿ. ಹೀಗಾಗಿಯೇ ಆಕೆಯ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ.

ಇದನ್ನೂ ಓದಿ
Image
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಈ ಬಗ್ಗೆ ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ತಾಯಿ ರಜಿತಕಲಾ, ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಆಕೆಯ ಪತಿ ಅನಂತು ಮತ್ತು ಅತ್ತೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಇದೀಗ ಎಲತ್ತೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಭಾಗ್ಯ ಮತ್ತು ಅನಂತುವಿನ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ನಿರ್ಲಕ್ಷಿಸಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮದುವೆಯ ನಂತರ ಅನಂತುವಿನ ಮನೆಯಲ್ಲಿ ಸದಾ ಸಮಸ್ಯೆಗಳು ಇರುತ್ತಿದ್ದವು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸದ್ಯ ಬಾಳಿ ಬದುಕಬೇಕಿದ್ದ 19ರ ಹರೆಯದ ಯುವತಿಯು ಗರ್ಭಿಣಿಯಾಗಿದ್ದಾಗಲೇ ಸಾವಿಗೆ ಶರಣಾಗಿದ್ದಾಳೆ. ಆದರೆ ಇದು ಕೊಲೆಯೋ, ಆತ್ಮಹತ್ಯೆಗೆ ಪ್ರೇರಣೆಯೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.