ನಾನು ನಿಮ್ಮ ವಿದ್ಯಾರ್ಥಿ, ತಪ್ಪಾಯ್ತು ಬಿಟ್ಟು ಬಿಡಿ ಟೀಚರ್; ಶಿಕ್ಷಕಿ ಮನೆಗೆ ಕನ್ನ ಹಾಕೋಕೆ ಯತ್ನಿಸಿದ ವಿದ್ಯಾರ್ಥಿ ಅಂದರ್​

ಬುರ್ಖಾ ಧರಿಸಿ ಮಧ್ಯರಾತ್ರಿ ಮನೆಯ ಮೇಲ್ಚಾವಣಿ ಸರಿಸಿ, ಸೀರೆ ಬಳಸಿ ಮನೆ ಒಳಗಡೆ ಇಳಿದಿದ್ದಾನೆ. ವಿದ್ಯಾರ್ಥಿ ಜಜಾಂಗಿರ್ ವೃತ್ತಿಯಲ್ಕಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದು, ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದ.

ನಾನು ನಿಮ್ಮ ವಿದ್ಯಾರ್ಥಿ, ತಪ್ಪಾಯ್ತು ಬಿಟ್ಟು ಬಿಡಿ ಟೀಚರ್; ಶಿಕ್ಷಕಿ ಮನೆಗೆ ಕನ್ನ ಹಾಕೋಕೆ ಯತ್ನಿಸಿದ ವಿದ್ಯಾರ್ಥಿ ಅಂದರ್​
ಸೀರೆ ಬಳಸಿ ಮನೆಯ ಒಳಗಡೆ ಇಳಿದು ಕಳ್ಳತನಕ್ಕೆ ಯತ್ನ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 31, 2022 | 12:49 PM

ಕಲಬುರಗಿ: ಅಕ್ಷರ ಕಲಿಸಿದ ಶಿಕ್ಷಕಿ ಮನೆಗೆ ವಿದ್ಯಾರ್ಥಿ ಓರ್ವ ಕನ್ನ ಹಾಕೋಕೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ್ ಗ್ರಾಮದಲ್ಲಿ ನಡೆದಿದೆ. ದೇವನೂರ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ ಮನೆಯಲ್ಲಿ ಜಹಾಂಗೀರ್ ಅನ್ನೋ ಹಳೆಯ ವಿದ್ಯಾರ್ಥಿಯಿಂದ ಕಳ್ಳತನಕ್ಕೆ ಯತ್ನಿಸಲಾಗಿದೆ. ಬುರ್ಖಾ ಧರಿಸಿ ಮಧ್ಯರಾತ್ರಿ ಮನೆಯ ಮೇಲ್ಚಾವಣಿ ಸರಿಸಿ, ಸೀರೆ ಬಳಸಿ ಮನೆ ಒಳಗಡೆ ಇಳಿದಿದ್ದಾನೆ. ವಿದ್ಯಾರ್ಥಿ ಜಜಾಂಗಿರ್ ವೃತ್ತಿಯಲ್ಕಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದು, ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದ. ಮನೆಯ ಒಳಗಡೆ ಇಳಿದು ಟೀಚರ್ ಮೊಬೈಲ್ ತೆಗೆದುಕೊಂಡು ಟಾರ್ಚ್ ಹಾಕಿ ಟೀಚರ್ ಮಲಗಿರುವ ಜಾಗ ಹುಡುಕಾಟ ಮಾಡಿದ್ದ.

ಇದನ್ನೂ ಓದಿ: ಲಾಡ್ಜ್​​ನಲ್ಲಿ ಚಿನ್ನಾಭರಣ ದೋಚಿದ್ದ ಇಬ್ಬರು ಕಳ್ಳರು ಅರೆಸ್ಟ್​​; 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಮನೆಯ ಒಳಗಡೆ ಉಂಟಾದ ಶಬ್ದಕ್ಕೆ ಶಿಕ್ಷಕಿ ನೇತ್ರಾವತಿ ಎಚ್ಚರಗೊಂಡಿದ್ದು, ಟೀಚರ್ ಕೂಗಿಕೊಳತ್ತಿದ್ದಂತೆಯೇ ಅಕ್ಕ ಪಕ್ಕದ ಮನೆಯ ನಿವಾಸಿಗಳು ಎಚ್ಚರವಾಗಿದ್ದಾರೆ. ರೆಡ್ ಹ್ಯಾಂಡ್ ಆಗಿ ಹಿಡಿಯೋದಕ್ಕೆ ಮುಂದಾದಾಗ ಟೀಚರ್ ನಾನು ನಿಮ್ಮ ವಿದ್ಯಾರ್ಥಿ, ತಪ್ಪಾಗಿದೆ ಬಿಟ್ಟು ಬಿಡಿ ಎಂದು ಜಹಾಂಗೀರ್ ಹೇಳಿದ್ದಾನೆ. ಸ್ಥಳಿಯರ ಸಹಾಯದಿಂದ ಜಹಾಂಗೀರ್​ನನ್ನು ಟೀಚರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಯುವತಿಗೆ ಚುಡಾಯಿಸಿದ್ದಕ್ಕೆ ಇಬ್ಬರು ಯುವಕರಿಗೆ ಇರಿತ

ದಾವಣಗೆರೆ: ಯುವತಿಗೆ ಚುಡಾಯಿಸಿದ್ದಕ್ಕೆ ಇಬ್ಬರು ಯುವಕರಿಗೆ ಚಾಕು ಇರಿದಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಶಾಲಾ ಮಟ್ಟದ ಕ್ರೀಡಾಕೂಟ ವೇಳೆ ಘಟನೆ ನಡೆದಿದ್ದು, ಚಿರಡೋಣೆ ಗ್ರಾಮದ ದೇವೇಂದ್ರ, ಸುನಿಲ್​ಗೆ ಗಾಯವಾಗಿದೆ. ರಾಘವೇಂದ್ರ ಯುವಕರಿಗೆ ಚಾಕು ಇರಿದಿರುವ ಆರೋಪಿ. ಗಾಯಾಳು ಇಬ್ಬರು ಯುವಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ರಾಘವೇಂದ್ರನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; Crime News: ಪ್ರತ್ಯೇಕ ಮೂರು ಕೊಲೆ ಪ್ರಕರಣಗಳ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಾರಕಾಸ್ತ್ರಗಳನ್ನ ಸಂಗ್ರಹಿಸಿದ್ದ ಹಿನ್ನೆಲೆ ರೌಡಿಶೀಟರ್ ಸಂತೋಷ್ ಸೇರಿದಂತೆ 7 ಜನರನ್ನು ಕೆಟಿಜೆ ನಗರ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಕಾರಿನಲ್ಲಿ ಮಾರಕಾಸ್ತ್ರ ಇಟ್ಟಿದ್ದ ರೌಡಿಶೀಟರ್ ಸಂತೋಷ್, ಪರಮೇಶ್, ಶಿವಪ್ಪಾ ದಾದು, ಮಂಜುನಾಥ್, ಶ್ರೀನಿವಾಸ್, ತ್ರಿಗುಣ, ದಸ್ತು, ತ್ರಿಲೋಕ್​ನನ್ನು ಪೊಲಿಸರು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಲಾಂಗ್, ಖಾರದಪುಡಿ, ಕಾರು ಜಪ್ತಿ ಮಾಡಲಾಗಿದೆ.

Published On - 12:40 pm, Sun, 31 July 22