ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲೇ ಬಾಡಿಗೆ ಮನೆ ಪಡೆದು ಕೊಲೆ ಸಂಚು: ತನಿಖೆಯಲ್ಲಿ ಹೊರಬಿತ್ತು ಅಸಲಿ ಸತ್ಯ
ಬೆಳ್ಳಾರೆ ಮುಖ್ಯರಸ್ತೆಯಲ್ಲೇ ಶಫೀಕ್ ಮನೆ ಇದ್ದು ಬಾಡಿಗೆ ಮನೆ ಪಡೆದು ತಂದೆ ತಾಯಿ ಜೊತೆ ಆರೋಪಿ ವಾಸವಿದ್ದ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಹತ್ಯೆಗೆ ಬಲೆ ಹೆಣೆಯಲಾಗಿತ್ತು.
ಮಂಗಳೂರು: ಪ್ರವೀಣ್ ನೆಟ್ಟಾರ(Praveen Nettar) ಹತ್ಯೆ ಕೇಸ್ ಬೆನ್ನಟ್ಟಿದ ಪೊಲೀಸರಿಗೆ ಸ್ಫೋಟಕ ಸತ್ಯವೊಂದು ಬಯಲಾಗಿದೆ. ಪೊಲೀಸರ ಒಂದು ಟೀಮ್ ಕರ್ನಾಟಕದಲ್ಲಿ, ಮತ್ತೊಂದು ಟೀಮ್ ಕೇರಳದಲ್ಲಿ, ಮತ್ತೊಂದು ಟೀಮ್ ಟೆಕ್ನಿಕಲ್ ಸಾಕ್ಷ್ಯ ಕಲೆ ಹಾಕ್ತಿದೆ. ಇನ್ನೂಂದು ತಂಡ ಆರೋಪಿಗಳಿಂದ ಸತ್ಯ ಹೊರಹಾಕಿಸುವ ಪ್ರಯತ್ನದಲ್ಲಿದೆ. ಸದ್ಯ ಈಗ ಪೊಲೀಸರ ತನಿಖೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ ಕೃತ್ಯ ಎನ್ನುವುದು ದೃಢಪಟ್ಟಿದೆ. ಹಾಗೂ ಹತ್ಯೆಗೆ ಯಾವ ರೀತಿ ಸಂಚು ರೂಪಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಹತ್ಯೆಯಾಗಿತ್ತು. ಪ್ರವೀಣ್ ಹತ್ಯೆಗೂ ಮುನ್ನ ಹಂತಕರು ಸ್ಟ್ರೀಟ್ಲೈಟ್ ಆಫ್ ಮಾಡಿ ಬಳಿಕ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ. ಆರೋಪಿಗಳು ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಿದ್ದರು ಎಂಬುವುದು ಬಹಿರಂಗವಾಗಿದೆ. ಪ್ರವೀಣ್ ಹತ್ಯೆ ಕೇಸ್ನಲ್ಲಿ ಶಫೀಕ್, ಜಾಕೀರ್ ಪಾತ್ರವಿರುವುದು ದೃಢವಾಗಿರುವ ಹಿನ್ನೆಲೆ ಸರ್ಚ್ವಾರಂಟ್ ಪಡೆದು ಶಫೀಕ್ ಮನೆಯಲ್ಲಿ ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ.
ಬೆಳ್ಳಾರೆ ಮುಖ್ಯರಸ್ತೆಯಲ್ಲೇ ಶಫೀಕ್ ಮನೆ ಇದ್ದು ಬಾಡಿಗೆ ಮನೆ ಪಡೆದು ತಂದೆ ತಾಯಿ ಜೊತೆ ಆರೋಪಿ ವಾಸವಿದ್ದ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಹತ್ಯೆಗೆ ಬಲೆ ಹೆಣೆಯಲಾಗಿತ್ತು. ಈ ಮನೆ ಬೆಳ್ಳಾರೆ ಠಾಣೆಯಿಂದ 300 ಮೀಟರ್ ದೂರದಲ್ಲೇ ಇದೆ. ಹಾಗೂ ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿದೆ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಚಲನವಲನ ಗಮನಿಸಿ ಕೊಲೆಗೆ ಹಂತಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಪ್ರವೀಣ್ ಹತ್ಯೆಗೂ ಮುನ್ನ ಸ್ಟ್ರೀಟ್ಲೈಟ್ ಆಫ್ ಮಾಡಲಾಗಿದೆ. ಕೊಲೆ ದಿನ ಆ ಏರಿಯಾದಲ್ಲಿ ಕರೆಂಟ್ ಇದ್ದರೂ ಪವರ್ ಕಟ್ ಆಗಿತ್ತು. ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಾ ಮುತ್ತಾ ಆರೋಪಿಗಳು ಪವರ್ ಕಟ್ ಮಾಡಿಸಿದ್ದರು. ನಂತರ ಪ್ರವೀಣ್ ಅಂಗಡಿ ಬಳಿ ತೆರಳಿ ಮರ್ಡರ್ ಮಾಡಿದ್ದಾರೆ. ಹಾಗಾಗಿ ಯಾವ ಸಿಸಿಟಿವಿ ಕ್ಯಾಮೆರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ. ಕೊಲೆ ಬಳಿಕ ಕಾದು ಕುಳಿತಿದ್ದ ಶಫೀಕ್ ಜಾಕಿರ್, ಹಂತಕರನ್ನು ಕರೆದೊಯ್ದಿದ್ದಿದ್ದಾರೆ.
ಮನೆ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಿರೋದಾಗಿ ಮಾಹಿತಿ ಸಿಕ್ಕಿದೆ. ಹತ್ಯೆಯಾದ ನಂತರ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮರ್ಡರ್ ಸ್ಪಾಟ್ ಸುತ್ತಾ ಮುತ್ತಾ ಜಾಗ ನೋಡಿ ಶಾಕ್ ಆಗಿದ್ದರು. ಕಗ್ಗತ್ತಲಲ್ಲೇ ಗಾಯಾಳುವನ್ನು ಶಿಫ್ಟ್ ಮಾಡಿದ್ದರು.