Karnataka Weather: ಬೆಂಗಳೂರಿನಲ್ಲಿ ಇಂದೂ ಮಳೆಯಾಗುವ ಸಾಧ್ಯತೆ; ವಿವಿಧ ನಗರಗಳ ಹವಾಮಾನ ವರದಿ ಇಲ್ಲಿದೆ

| Updated By: Digi Tech Desk

Updated on: Apr 23, 2021 | 9:12 AM

Bengaluru Rain News: ಬೆಂಗಳೂರು ನಗರದಲ್ಲಿ ಇಂದು ಬೆಳಗ್ಗೆ ಕೂಡಾ ಮೋಡ ಕವಿದ ವಾತಾವರಣವಿದೆ. ಅಲ್ಲದೇ ಇವತ್ತು ಸಹ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Karnataka Weather: ಬೆಂಗಳೂರಿನಲ್ಲಿ ಇಂದೂ ಮಳೆಯಾಗುವ ಸಾಧ್ಯತೆ; ವಿವಿಧ ನಗರಗಳ ಹವಾಮಾನ ವರದಿ ಇಲ್ಲಿದೆ
ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ
Follow us on

ಬೆಂಗಳೂರು: ನಗರದಲ್ಲಿ ನಿನ್ನೆ ವರುಣನ ಆರ್ಭಟ ಜೋರಾಗಿಯೇ ಇತ್ತು. ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವಣ ಕಂಡ ಜನ ರಾತ್ರಿಯಷ್ಟರಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಊಹಿಸಿದ್ದರು. ಅದರಂತೆಯೇ ರಾತ್ರಿ ಮಳೆ ಧರೆಗಿಳಿದಿದೆ. ಬೆಂಗಳೂರು ನಗರದಲ್ಲಿ ಇಂದು ಬೆಳಗ್ಗೆ ಕೂಡಾ ಮೋಡ ಕವಿದ ವಾತಾವರಣವಿದೆ. ಅಲ್ಲದೇ ಇವತ್ತು ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ 21.4 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನವಿದೆ. ಅಂತೆಯೇ, ಮುಂಬೈನಲ್ಲಿ 25.4 ಡಿಗ್ರಿ ಸೆಲ್ಸಿಯಸ್​, ಚೆನ್ನೈನಲ್ಲಿ 28 ಡಿಗ್ರಿ ಸೆಲ್ಸಿಯಸ್​, ಹೈದರಾಬಾದ್​ನಲ್ಲಿ 26 ಡಿಗ್ರಿ ಸೆಲ್ಸಿಯಸ್​, ಕೋಲ್ಕತ್ತಾದಲ್ಲಿ 25.4 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ ನಿನ್ನೆ ಮಧ್ಯಾಹ್ನ 2.30ರ ಸಮಯದಿಂದಲೇ ಜಿಟಿಜಿಟಿ ಮಳೆ ಬರಲು ಪ್ರಾರಂಭವಾಗಿತ್ತು. ಜೋರಾದ ಗಾಳಿ ಜೊತೆಗೆ ವರುಣ ಧರೆಗಿಳಿದಿದ್ದಾನೆ. ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ, ವಿಜಯನಗರ, ಬಸವನಗುಡಿ, ಜಾಲಹಳ್ಳಿ, ಪೀಣ್ಯ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಯ ಪರಿಣಾಮ ರಸ್ತೆಯ ಅಕ್ಕಪಕ್ಕದಲ್ಲಿನ ತ್ಯಾಜ್ಯವೆಲ್ಲಾ ನೀರಿನೊಂದಿಗೆ ರಸ್ತೆಯ ಮೇಲೆ ಹರಿದಿತ್ತಾದರೂ ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ನೈಟ್ ಕರ್ಫ್ಯೂ ಪರಿಣಾಮ ಜನರ ಓಡಾಟ ಕಡಿಮೆ ಇದ್ದು ಹೆಚ್ಚಿನ ತೊಂದರೆ ಆಗಲಿಲ್ಲ.

ರಾಜ್ಯಾದ್ಯಂತ ಇನ್ನೂ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಭಾಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ರಾಯಚೂರು, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ, ರಾಮನಗರ, ಹಾಸನ, ಕೊಡಗು, ಮಂಡ್ಯ ಸೇರಿದಂತೆ ಇನ್ನೂ ಕೆಲವೆಡೆ ಮಳೆ ಸುರಿಯಲಿದೆ. ಇನ್ನೂ ನಾಲ್ಕೈದು ದಿನಗಳ ಕಾಲ 17 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಮಳೆ ಪ್ರಾರಂಭ; ರಾಜ್ಯದ ಹಲವೆಡೆ ವರುಣ ಸಿಂಚನದ ಸಾಧ್ಯತೆ

(Karnataka Weather Updates Bengaluru rain weather report today of various cities across Karnataka)

Published On - 8:41 am, Fri, 23 April 21