ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಜೂನ್ ತಿಂಗಳಲ್ಲಿ 45.09 ಲಕ್ಷ ಡೋಸ್ ಲಸಿಕೆ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕರ್ನಾಟಕ ಸರ್ಕಾರವು ಲಸಿಕಾ ಕಂಪನಿಗಳಿಂದ ನೇರವಾಗಿ 13.71 ಲಕ್ಷ ಡೋಸ್ ಖರೀದಿ ಮಾಡಲಿದೆ. ಜೂನ್ ತಿಂಗಳಲ್ಲಿ ಒಟ್ಟು ಕರ್ನಾಟಕಕ್ಕೆ 58.80 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಕೇಂದ್ರದ ಕೋಟಾದಿಂದ ರಾಜ್ಯಕ್ಕೆ 37.60 ಲಕ್ಷ ಡೋಸ್ ಕೊವಿಶೀಲ್ಡ್, 7.40 ಲಕ್ಷ ಡೋಸ್ ಕೊವ್ಯಾಕ್ಸಿನ್ ಬರಲಿದೆ. ಕರ್ನಾಟಕ ಸರ್ಕಾರದಿಂದ 10.86 ಲಕ್ಷ ಡೋಸ್ ಕೊವಿಶೀಲ್ಡ್, 2.84 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳು ಲಸಿಕಾ ಕೇಂದ್ರಗಳಿಗೆ ತಲುಪಲಿದೆ.
ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಾಗುತ್ತಿರುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ‘ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಡೋಸ್ ಲಸಿಕೆ ಮತ್ತು ರಾಜ್ಯ ಸರ್ಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಡೋಸ್ ಸೇರಿದಂತೆ ಒಟ್ಟು 58.71 ಲಕ್ಷ ಡೋಸ್ ಕೊರೊನಾ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ. ಎಲ್ಲ ಕನ್ನಡಿಗರಿಗೂ ಲಸಿಕೆ ಒದಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ನಿರಂತರ ಸಹಕಾರ ಶ್ಲಾಘನೀಯ’ ಎಂಸು ಸುಧಾಕರ್ ಹೇಳಿದ್ದಾರೆ.
‘ಭಾರತದಲ್ಲಿ ಅತ್ಯಂತ ವೇಗವಾಗಿ ಲಸಿಕೆ ನೀಡಲಾಗುತ್ತಿರುವ ನಗರಗಳಲ್ಲಿ ಬೆಂಗಳೂರು ಸೇರಿದೆ. ಈವರೆಗೆ 28.3 ಲಕ್ಷ ಜನರಿಗೆ ಒಂದು ಡೋಸ್ ಆದರೂ ಲಸಿಕೆ ಸಿಕ್ಕಿದೆ. ನಗರದ ಶೇ 28.6ರಷ್ಟು ಜನರಿಗೆ ಲಸಿಕೆ ಸಿಕ್ಕಿದೆ’ ಎಂದು ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಿನ್ನೆ ರಾತ್ರಿ 11.45ಕ್ಕೆ ಗುಜರಾತಿನ ಜಾಮ್ನಗರದಿಂದ 110.83 ಟನ್ ಆಕ್ಸಿಜನ್ ಹೊತ್ತ ರೈಲು ಬೆಂಗಳೂರಿಗೆ ಬಂದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ‘ಸಕಾಲಕ್ಕೆ ಆಕ್ಸಿಜನ್ ಪೂರೈಸುವ ಮೂಲಕ ಈ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಕೈಹಿಡಿದಿದೆ’ ಎಂದು ಸುಧಾಕರ್ ಹೇಳಿದ್ದಾರೆ.
More than 58.71 lakh doses of vaccine will be supplied to Karnataka in the month of June including supply of 45 lakh doses from GoI and 13.7 lakh doses from state govt’s direct procurement.
Union Govt’s continued support to states to ensure #VaccineForAll
is truly commendable. pic.twitter.com/Q3bZLvD6B7— Dr Sudhakar K (@mla_sudhakar) June 3, 2021
(Karnataka will receive 45 lakh dose of covid vaccine in June month says health minister Dr K Sudhakar)
ಇದನ್ನೂ ಓದಿ: ಜೂನ್ ತಿಂಗಳಲ್ಲಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ಜನರಿಗೆ ಕೊವಿಡ್ ಲಸಿಕೆ ವಿತರಿಸಲು ಸಿದ್ಧತೆ: ಸಿಎಂ ಯಡಿಯೂರಪ್ಪ
ಇದನ್ನೂ ಓದಿ: ಸೆರಮ್, ಭಾರತ್ ಬಯೋಟೆಕ್ ನಂತರ ಕೊವಿಡ್ ಲಸಿಕೆ ತಯಾರಿಸಲಿದೆ ಬಯೋಲಾಜಿಕಲ್ ಇ; ಹೇಗಿದೆ ಸಿದ್ಧತೆ?
Published On - 3:56 pm, Thu, 3 June 21